ಇಸ್ಲಾಮಾಬಾದ್: ಮಾಜಿ ಭಾರತೀಯ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಇಮ್ರಾನ್ ಖಾನ್ ಅವರ ಪ್ರಧಾನಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ವಿದೇಶಾಂಗ ಕಚೇರಿಗೆ ಪ್ರಧಾನಿ ಮೋದಿ ಸಹಿತ ಇತರ ವಿದೇಶಿ ನಾಯಕರನ್ನು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅಹ್ವಾನಿಸುವುದರ ಕುರಿತಾಗಿ ಸ್ಪಷ್ಟನೆ ಕೋರಿದೆ. ಆದರೆ ಈ ಕುರಿತಾಗಿ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ವಿದೇಶಾಂಗ ಕಚೇರಿ ಬಂದಿಲ್ಲ ಎನ್ನಲಾಗಿದೆ ಎಂದು ಅಲ್ಲಿನ ಪತ್ರಿಕೆ ಡಾನ್ ವರದಿ ಮಾಡಿದೆ.
Pakistan Tehreek-e-Insaf rebuffed reports which claimed that the party was planning to invite foreign dignitaries to the oath-taking ceremony of Imran Khan as Pakistan's Prime Minister and added that the decision on the same is pending
Read @ANI Story | https://t.co/syZDZ8ljQU pic.twitter.com/9SjslkOkmM
— ANI Digital (@ani_digital) July 31, 2018
ಈ ಕುರಿತಾಗಿ ಪಿಟಿಐ ವಕ್ತಾರ ಫವಾದ್ ಚೌಧರಿ ಟ್ವೀಟರ್ ಮೂಲಕ ಪ್ರತಿಕ್ರಿಯಿಸುತ್ತಾ" ಅಂತರಾಷ್ಟ್ರೀಯ ಪ್ರತಿನಿಧಿಗಳನ್ನು ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಕುರಿತಾಗಿ ಮಾಧ್ಯಮಗಳ ಪ್ರಕಟಣೆ ತಪ್ಪಾಗಿದ್ದು. ಈ ಕುರಿತಾಗೋ ನಾವು ವಿದೇಶಾಂಗ ಕಚೇರಿಯ ಸಲಹೆಯನ್ನು ಕೇಳಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Media speculations about international dignitaries attending PM oath ceremony are not correct. We have sought the advice of Foreign Office on the matter and will decide accordingly #PTI
— Fawad Hussain (@fawadchaudhry) July 31, 2018
ಈ ಹಿಂದೆ ಹಲವು ಮಾಧ್ಯಮಗಳ ವರದಿ ಪ್ರಕಾರ ಸಾರ್ಕ್ ದೇಶಗಳ ನಾಯಕರನ್ನು ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಕುರಿತಾಗಿ ಸುದ್ದಿ ಮಾಡಿದ್ದವು.ಅಗಸ್ಟ್ 11 ರ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಿತ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಕುರಿತಾಗಿ ಇನ್ನು ಅಧಿಕೃತವಾದ ಪ್ರಕಟಣೆ ಇನ್ನು ಹೊರಬಿಳಬೇಕಿದೆ.