ಅಳಿಯ ಕೆಎಲ್ ರಾಹುಲ್’ಗೆ ಖಡಕ್ ಎಚ್ಚರಿಕೆ ಕೊಟ್ಟ ಮಾವ ಸುನಿಲ್ ಶೆಟ್ಟಿ!

Suniel Shetty warns KL Rahul: ಜನವರಿ 23, 2023 ರಂದು ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ವಿವಾಹವಾದರು. ವಿವಾಹವು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಡೆಯಿತು. ಇದರಲ್ಲಿ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

Written by - Bhavishya Shetty | Last Updated : Jul 17, 2023, 11:57 AM IST
    • ಕೆಎಲ್ ರಾಹುಲ್’ಗೆ ಸುನೀಲ್ ಶೆಟ್ಟಿ ಎಚ್ಚರಿಕೆ
    • ಅಥಿಯಾ ಶೆಟ್ಟಿ ಜೊತೆ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು
    • ತಮ್ಮ ಮಗಳಿಗೆ ಮತ್ತು ಅಳಿಯನಿಗೆ ಅವರು ನೀಡಿದ ಸಲಹೆಯ ಬಗ್ಗೆ ಮಾತನಾಡಿದ್ದಾರೆ.
ಅಳಿಯ ಕೆಎಲ್ ರಾಹುಲ್’ಗೆ ಖಡಕ್ ಎಚ್ಚರಿಕೆ ಕೊಟ್ಟ ಮಾವ ಸುನಿಲ್ ಶೆಟ್ಟಿ!  title=
KL Rahul-Sunil Shetty

Suniel Shetty warns KL Rahul: 2023ರ ವರ್ಷಾರಂಭದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಜೊತೆ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈ ಬಳಿಕ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ತಮ್ಮ ಮಗಳಿಗೆ ಮತ್ತು ಅಳಿಯನಿಗೆ ಅವರು ನೀಡಿದ ಸಲಹೆಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: “ಒಂದು ವರ್ಷದಿಂದ ಭಾರತ ತಂಡ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದೆ”: Team India ಕೋಚ್ ಹೇಳಿಕೆ

ಕೆಎಲ್ ರಾಹುಲ್’ಗೆ ಸುನೀಲ್ ಶೆಟ್ಟಿ ಎಚ್ಚರಿಕೆ..!

ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ತಮ್ಮ ಅಳಿಯ ಕೆಎಲ್ ರಾಹುಲ್ ಗೆ ಎಚ್ಚರಿಕೆ ನೀಡಿರುವ ಬಗ್ಗೆ ಮಾತನಾಡಿದ್ದಾರೆ. "ಕೀಳರಿಮೆ ತೋರುವಷ್ಟು ಸುಂದರವಾದ ಮನುಷ್ಯರಾಗಬೇಡಿ, ಎಲ್ಲರ ಜೊತೆಯೂ ನೀವು ಒಳ್ಳೆಯ ಹುಡುಗರಂತಿರಲು ಸಾಧ್ಯವಿಲ್ಲ, ಅವನು ತುಂಬಾ ಒಳ್ಳೆಯ ಹುಡುಗ, ನಾನು ಯಾವಾಗಲೂ ಅಥಿಯಾಗೆ ಹೇಳುತ್ತೇನೆ, ರಾಹುಲ್ ನನ್ನು ಪಡೆಯಲು ಪುಣ್ಯ ಮಾಡಿದ್ದೆ” ಎಂದು ಹೇಳಿದ್ದಾರೆ

ತನ್ನ ಮಗಳು ಆಥಿಯಾಗೆ ಸಹ ಸಲಹೆ ನೀಡಿದ ಶೆಟ್ಟಿ, "ನಿನ್ನ ಸಂಗಾತಿಯನ್ನು ಕುರುಡಾಗಿ ನಂಬುವ ವ್ಯಕ್ತಿಯಾಗು. ಅವನನ್ನು ಸಂಪೂರ್ಣವಾಗಿ ನಂಬಿ. ಅವನು ಕ್ರೀಡಾಪಟು, ಎಲ್ಲಾ ಕಡೆ ಪ್ರಯಾಣಿಸುತ್ತಾನೆ. ಹಾಗಂತ ನಿನಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಆದರೆ ಆತನ ಜೊತೆ ಎಂದೆಂದು ನಿಂತಿರು, ಎಲ್ಲ ಸೆಲೆಬ್ರಿಟಿಗಳಂತೆ ಅವು ಸಹ ಏರಿಳಿತ ಕಂಡವನು. ನನ್ನ ಕಾಲದಲ್ಲಿ ನಾನು ಸುನಿಲ್ ಗವಾಸ್ಕರ್ ಅವರನ್ನು ನಂಬಿದ್ದೆ. ನನ್ನ ಸಾಯುವ ದಿನದವರೆಗೂ ಅವರೇ ನನ್ನ ನಾಯಕ” ಎಂದಿದ್ದಾರೆ.

ಇದನ್ನೂ ಓದಿ: “ಭಾರತ ಇಲ್ಲದಿದ್ದರೆ ಪಾಕ್ ಇಲ್ಲ… ಮತ್ತೆ ಒಂದಾಗೋಣ” ಎಂದು ಕಣ್ಣೀರಾದ ಪಾಕ್ ಕ್ರಿಕೆಟಿಗ!

ಅಥಿಯಾ-ಕೆಎಲ್ ರಾಹುಲ್…

ಜನವರಿ 23, 2023 ರಂದು ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ವಿವಾಹವಾದರು. ವಿವಾಹವು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಡೆಯಿತು. ಇದರಲ್ಲಿ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News