ಬಾಲಿವುಡ್ ಖ್ಯಾತ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ಹಿಟ್ ಮ್ಯಾನ್..!

‘ನಮ್ಮ ಅತ್ಯಂತ ಸ್ವಂತ ಚಾಚಾ ನೆಹರೂ’ ಎಂದ ಕ್ರಿಕೆಟರ್ ಕೇದಾರ್ ಜಾಧವ್.

Written by - Puttaraj K Alur | Last Updated : Aug 1, 2021, 03:11 PM IST
  • ಬಿಳಿ ಟೀ ಶರ್ಟ್, ಬೆಳ್ಳಿಯ ಚೈನ್ ಮತ್ತು ಹಳದಿ ಸನ್ ಗ್ಲಾಸ್ ಧರಿಸಿದ್ದ ರಿಷಭ್ ಪಂತ್
  • ರಿಷಭ್ ಪಂತ್ ಕ್ರಿಕೆಟ್ ಜರ್ನಿ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಬಿಸಿಸಿಐ
  • 'ಜೀವನದಲ್ಲಿ ಬಹಳಷ್ಟು ಏರಿಳಿತ ಕಂಡಿದ್ದೇನೆ, ನಿಮ್ಮ ತಪ್ಪುಗಳಿಂದ ನೀವು ಕಲಿಯುತ್ತೀರಿ' ಎಂದಿರುವ ಪಂತ್
ಬಾಲಿವುಡ್ ಖ್ಯಾತ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ಹಿಟ್ ಮ್ಯಾನ್..! title=
ಬಾಲಿವುಡ್ ಖ್ಯಾತ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಕೆ

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ರಿಷಬ್ ಪಂತ್(Rishabh Pant) ಅವರನ್ನು ಬಾಲಿವುಡ್ ನ ಖ್ಯಾತ ರ‍್ಯಾಪರ್ ಬಾದ್‌ಶಾ ಜೊತೆ ಹೋಲಿಕೆ ಮಾಡಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಫೋಟೋ ಹಂಚಿಕೊಂಡಿದ್ದಾರೆ.  

ವಿಕೆಟ್ ಕೀಪರ್-ಬ್ಯಾಟ್ಸ್‌ ಮನ್ ರಿಷಭ್ ಪಂತ್ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಮೈದಾನದ ಒಳಗೂ ಮತ್ತು ಹೊರಗೆ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 2 ತಿಂಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಆಕರ್ಷಕ ಫಾರ್ಮ್‌ನಲ್ಲಿದ್ದು, ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ.

23 ವರ್ಷದ ಯುವ ಬ್ಯಾಟ್ಸ್ ಮನ್ ಪಂತ್ ಅವರನ್ನು ಬಾಲಿವುಡ್ ನ ಜನಪ್ರಿಯ ರ‍್ಯಾಪರ್ ಬಾದ್‌ಶಾ(Badshah)ಗೆ ಹೋಲಿಸಲಾಗಿದೆ. ಪಂತ್ ಬಿಳಿ ಟೀ ಶರ್ಟ್, ಬೆಳ್ಳಿಯ ಚೈನ್ ಮತ್ತು ಹಳದಿ ಸನ್ ಗ್ಲಾಸ್ ಹಾಕಿಕೊಂಡು (ಬಾದ್‌ಶಾ)ನಂತೆಯೇ ಇರುವ ಉಡುಪನ್ನು ಧರಿಸಿದ್ದರು. ಈ ಫೋಟೋವನ್ನು ಟೀಮ್ ಇಂಡಿಯಾ ಓಪನರ್ ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಇಲ್ಲಿ ನಮ್ಮದೇ ಬಾದ್‌ಶಾನನ್ನು ಹೊಂದಿದ್ದೇವೆ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Tokyo Olympics Discus throw: ಫೈನಲ್ ಗೆ ಲಗ್ಗೆ ಇಟ್ಟ ಕಮಲ್‌ ಪ್ರೀತ್ ಕೌರ್, ಚಿನ್ನದ ಬೇಟೆಗೆ ಸಜ್ಜು

ಈ ಪೋಸ್ಟ್‌ ಗೆ ಕೇದಾರ್ ಜಾಧವ್ ಮತ್ತು ಪಂತ್ ಸ್ವತಃ ಕಾಮೆಂಟ್ ಮಾಡಿದ್ದಾರೆ. ‘ಹಾಹಾಹ ಕ್ಯಾ ಭಯ ಯಾರ್’ ಎಂದು ಪಂತ್ ಕಾಮೆಂಟ್ ಮಾಡಿದರೆ ‘ನಮ್ಮ ಅತ್ಯಂತ ಸ್ವಂತ ಚಾಚಾ ನೆಹರೂ’ ಎಂದು ಕ್ರಿಕೆಟರ್ ಕೇದಾರ್ ಜಾಧವ್ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಫೋಟೋಗೆ ರೋಹಿತ್ ಫ್ಯಾನ್ಸ್ ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ರಿಷಭ್ ಪಂತ್(Rishabh Pant) ಮೊದಲೇ ಬಾದ್‌ಶಾ ಆಗಿದ್ದರು ಎಂದು ಹೇಳಿ ಕಾಲೆಳೆದಿದ್ದಾರೆ.

ಪಂತ್ ಅವರ ಕ್ರಿಕೆಟ್ ಜರ್ನಿ ಕುರಿತು ಬಿಸಿಸಿಐ(BCCI) ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅವರು ಮಾತನಾಡಿರುವುದನ್ನು  ಕಾಣಬಹುದು. ‘ಇದು ಒಂದು ಅದ್ಭುತ ಪ್ರಯಾಣ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನನ್ನ ಕ್ರಿಕೆಟ್ ಜೀವನದಲ್ಲಿ ಬಹಳಷ್ಟು ಏರಿಳಿತಗಳು ಕಂಡುಬಂದಿವೆ. ಆದರೆ ಇದು ನನಗೆ ಒಳ್ಳೆಯ ಕಲಿಕೆಯಾಗಿದೆ. ಒಬ್ಬ ಕ್ರಿಕೆಟಿಗನಾಗಿ ನೀವು ವಿಕಸನಗೊಳ್ಳುವಿರಿ, ನಿಮ್ಮ ತಪ್ಪುಗಳಿಂದ ಕಲಿಯುತ್ತಿರಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ, ಮೈದಾನಕ್ಕೆ ಹಿಂತಿರುಗಿ ಮತ್ತು ಉತ್ತಮ ಪ್ರದರ್ಶನ ನೀಡಿ’ ಅಂತಾ ಪಂತ್ ಹೇಳಿಕೊಂಡಿದ್ದಾರೆ.  

ಇದನ್ನೂ ಓದಿ: Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ

ಈ ತಿಂಗಳ ಆರಂಭದಲ್ಲಿ ಪಂತ್ ಅವರಿಗೆ ಕೋವಿಡ್ -19(COVID-19) ಸೋಂಕು ದೃಢಪಟ್ಟಿತ್ತು. ನಂತರ ಅವರು ಪ್ರತ್ಯೇಕವಾಗಿ ಹೋಮ್ ಐಸೋಲೇಷನ್ ಆಗಿದ್ದರು. ಸದ್ಯ ಪಂತ್ ಕೊರೊನಾ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ. ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News