ಏಷ್ಯಾಕಪ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆರೋಪ: 38ರ ಹರೆಯದ ಸ್ಟಾರ್ ಸ್ಪಿನ್ನರ್ ಬಂಧನ!

Sachithra Senanayake Match fixing: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರಾ ಸೇನಾನಾಯಕೆ ಅವರನ್ನು ಕ್ರೀಡಾ ಭ್ರಷ್ಟಾಚಾರ ತನಿಖಾ ದಳ ಬಂಧಿಸಿದೆ. ಮೂರು ವಾರಗಳ ಹಿಂದೆ ವಿದೇಶಕ್ಕೆ ತೆರಳದಂತೆ ನ್ಯಾಯಾಲಯ ನಿಷೇಧ ಹೇರಿತ್ತು. 2020ರ ಲಂಕಾ ಪ್ರೀಮಿಯರ್ ಲೀಗ್‌’ನ ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

Written by - Bhavishya Shetty | Last Updated : Sep 7, 2023, 07:27 AM IST
    • ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಸಚಿತ್ರ ಸೇನಾನಾಯಕ್ ಬಂಧನ
    • ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಬಂಧಿಸಿದ ಕ್ರೀಡಾ ಭ್ರಷ್ಟಾಚಾರ ತನಿಖಾ ದಳ
    • ಮೂರು ವಾರಗಳ ಹಿಂದೆ ವಿದೇಶಕ್ಕೆ ತೆರಳದಂತೆ ನ್ಯಾಯಾಲಯ ನಿಷೇಧ ಹೇರಿತ್ತು
ಏಷ್ಯಾಕಪ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆರೋಪ: 38ರ ಹರೆಯದ ಸ್ಟಾರ್ ಸ್ಪಿನ್ನರ್ ಬಂಧನ! title=
Sachitra Senanayake

Sachithra Senanayake Match fixing: ಶ್ರೀಲಂಕಾದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಬುಧವಾರ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಸಚಿತ್ರ ಸೇನಾನಾಯಕ್ ಅವರನ್ನು ಬಂಧಿಸಲಾಗಿದೆ. ಜನವರಿ 2012 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದ ಸಚಿತ್ರಾ ಸೇನಾನಾಯಕೆ, ತಮ್ಮ ಬೌಲಿಂಗ್ ಆಕ್ಷನ್‌’ನಿಂದಾಗಿ ಸಖತ್ ಸುದ್ದಿ ಮಾಡಿದ್ದರು. ಆದರೆ ಇದೀಗ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ: 2026ರವರೆಗೆ ಈ ರಾಶಿಗೆ ಪ್ರತಿ ಘಳಿಗೆಯೂ ವರವೇ: 30 ವರ್ಷಗಳ ಬಳಿಕ ಶನಿಯಿಂದ ದುಡ್ಡಿನ ಮಳೆ, ಹೊಳೆಯಲಿದೆ ಅದೃಷ್ಟ

ಮ್ಯಾಚ್ ಫಿಕ್ಸಿಂಗ್ ಆರೋಪ!

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರಾ ಸೇನಾನಾಯಕೆ ಅವರನ್ನು ಕ್ರೀಡಾ ಭ್ರಷ್ಟಾಚಾರ ತನಿಖಾ ದಳ ಬಂಧಿಸಿದೆ. ಮೂರು ವಾರಗಳ ಹಿಂದೆ ವಿದೇಶಕ್ಕೆ ತೆರಳದಂತೆ ನ್ಯಾಯಾಲಯ ನಿಷೇಧ ಹೇರಿತ್ತು. 2020ರ ಲಂಕಾ ಪ್ರೀಮಿಯರ್ ಲೀಗ್‌’ನ ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರವಾಣಿ ಮೂಲಕ ಫಿಕ್ಸಿಂಗ್ ಮಾಡಲು ಇಬ್ಬರು ಆಟಗಾರರನ್ನು ಪ್ರಚೋದಿಸಿದ್ದರು ಎಂದು ಹೇಳಲಾಗುತ್ತಿದೆ.

ವಿದೇಶ ಪ್ರಯಾಣ ನಿರ್ಬಂಧ:

ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ತಿಂಗಳು ಸಚಿತ್ರಾ ಸೇನಾನಾಯಕೆ ಅವರ ಮೇಲೆ ಪ್ರಯಾಣ ನಿಷೇಧ ಹೇರುವಂತೆ ವಲಸೆ ಮತ್ತು ವಲಸೆಗಾರರ ​​ನಿಯಂತ್ರಕ ಜನರಲ್‌’ಗೆ ಆದೇಶಿಸಿತ್ತು. ಅಟಾರ್ನಿ ಜನರಲ್ ಇಲಾಖೆಯು ನ್ಯಾಯಾಲಯದ ಈ ಆದೇಶವನ್ನು ಸ್ವೀಕರಿಸಿತ್ತಿ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕದಿಂದ ಅಟಾರ್ನಿ ಜನರಲ್ ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಇದನ್ನೂ ಓದಿ: ಇಂದು ಜನ್ಮಾಷ್ಟಮಿ ಶುಭದಿನ: ಈ ರಾಶಿಯ ಜನರಿಗೆ ಸಕಲ ಸಂಪತ್ತು ನೀಡಿ ಅದೃಷ್ಟ ಬೆಳಗುವರು ಮುರಾರಿ

ಶ್ರೀಲಂಕಾ ಪರ ಅಂಕಿಅಂಶ:

38 ವರ್ಷ ವಯಸ್ಸಿನ ಸಚಿತ್ರಾ ಸೇನಾನಾಯಕೆ 2012 ಮತ್ತು 2016 ರ ನಡುವೆ ಶ್ರೀಲಂಕಾ ಪರ ಒಂದು ಟೆಸ್ಟ್, 49 ODI ಮತ್ತು 24 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಟೆಸ್ಟ್‌’ನಲ್ಲಿ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ODI ನಲ್ಲಿ 53 ಮತ್ತು T20 ನಲ್ಲಿ 25 ವಿಕೆಟ್’ಗಳನ್ನು ಪಡೆದಿದ್ದಾರೆ. ಮೇ 2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಅನುಮಾನಾಸ್ಪದ ಬೌಲಿಂಗ್ ಕ್ರಮಕ್ಕಾಗಿ ಇವರನ್ನು ಐಸಿಸಿ ನಿಷೇಧಿಸಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News