ಕೊಲೊಂಬೋ: ಇಲ್ಲಿನ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಶುಭಾರಂಭವನ್ನು ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ (Sri Lanka) ತಂಡವು ೯ ವಿಕೆಟ್ ಗಳ ನಷ್ಟಕ್ಕೆ ೨೬೨ ರನ್ ಗಳನ್ನು ಗಳಿಸಿತು, ಶ್ರೀಲಂಕಾದ ಪರವಾಗಿ ಕರುನಾ ರತ್ನೆ ೪೩, ಶಂಕರಾ ೩೮ ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ೨೫೦ ರ ಗಡಿ ದಾಟಿಸುವಲ್ಲಿ ನೆರವಾದರು.
ಇದನ್ನೂ ಓದಿ- IND VS SL: ಕೊರೊನಾ ಕಾರಣ ಭಾರತ-ಶ್ರೀಲಂಕಾ ಸರಣಿ ಮೇಲೆ ಬಿತ್ತು ಬ್ರೇಕ್! ಇಲ್ಲಿದೆ ಹೊಸ ಶೆಡ್ಯೂಲ್!
ಇನ್ನೊಂದೆಡೆಗೆ ಭಾರತದ ಪರವಾಗಿ ಚಹಾರ್,ಚಹಾಲ್, ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಗಳನ್ನುಕಬಳಿಸುವ ಮೂಲಕ ತಂಡದ ರನ್ ವೇಗಕ್ಕೆ ಕಡಿವಾಣವನ್ನು ಹಾಕಿದರು.
ನಂತರ ೨೬೩ ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಇನ್ನೂ ೧೩.೨ ಓವರ್ ಗಳು ಬಾಕಿ ಇರುವಂತೆಯೇ ಗೆಲುವಿನ ಗುರಿಯನ್ನು ತಲುಪಿತು. ಭಾರತದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಪೃಥ್ವಿ ಷಾ ಕೇವಲ ೨೪ ಎಸೆತಗಳಲ್ಲಿ ೯ಬೌಂಡರಿಗಳ ನೆರವಿನೊಂದಿಗೆ ೪೩ ರನ್ ಗಳನ್ನು ಗಳಿಸಿ ಉತ್ತಮ ಅಡಿಪಾಯವನ್ನು ಹಾಕಿದರು.
A comprehensive 7-wicket win for #TeamIndia to take 1-0 lead in the series🙌
How good were these two in the chase! 👏👏
8⃣6⃣* runs for captain @SDhawan25 👊
5⃣9⃣ runs for @ishankishan51 on ODI debut 💪Scorecard 👉 https://t.co/rf0sHqdzSK #SLvIND pic.twitter.com/BmAV4UiXjZ
— BCCI (@BCCI) July 18, 2021
ಇದನ್ನೂ ಓದಿ-IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
ಇನ್ನೊಂದೆಡೆಗೆ ಭದ್ರವಾಗಿ ಕೊನೆಯವರೆಗೆ ಅಜೇಯನಾಗಿ ಉಳಿದ ಶಿಖರ್ ಧವನ್ ೮೬ ರನ್ ಗಳನ್ನು ಗಳಿಸಿದರು.ಇಶಾನ್ ಕಿಶನ್ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ 59 ರನ್ ಗಳನ್ನು ಗಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.