ಮೊದಲ ಸೆಷನ್’ನಲ್ಲಿ ಅಬ್ಬರಿಸಿದ ಭಾರತ… ಟೀಂ ಇಂಡಿಯಾಕೆ 56 ರನ್‌ಗಳ ಮುನ್ನಡೆ

mohammedd siraj : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್‌ ಪಂದ್ಯ ನ್ಯೂಲ್ಯಾಂಡ್‌ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಸೆಷನ್‌ ಅಲ್ಲೆ ಕೇವಲ 55 ರನ್‌ ಗಳಿಗೆ ಆಲ್‌ಔಟ್‌ ಆಯಿತು. ಮತ್ತು ಭಾರತದ ಪರ ವೇಗಿ ಸಿರಾಜ್‌  6 ಪಡೆದು ಕೊಂಡರು. 

Written by - Zee Kannada News Desk | Last Updated : Jan 3, 2024, 07:10 PM IST
  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ ಪಂದ್ಯ
  • ದಕ್ಷಿಣ ಆಫ್ರಿಕಾವನ್ನು ಕೇವಲ 55 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಭಾರತ
  • ಭಾರತದ ಪರ ಮೊಹಮ್ಮದ್ ಸಿರಾಜ್‌ 6 ವಿಕೆಟ್‌ ಪಡೆದು ಮಿಂಚಿದರು
ಮೊದಲ ಸೆಷನ್’ನಲ್ಲಿ ಅಬ್ಬರಿಸಿದ ಭಾರತ… ಟೀಂ ಇಂಡಿಯಾಕೆ 56 ರನ್‌ಗಳ ಮುನ್ನಡೆ title=

INd vs SA 2nd test : ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಸೆಷನ್‌ನಲ್ಲೇ ಭಾರಿ ಆಘಾತ ಎದುರಾಗಿದೆ. ಮೊದಲ ಟೆಸ್ಟ್‌ ನಲ್ಲಿ ಭಾರಿ ಸೋಲನ್ನು ಅನುಭವಿಸಿದ್ದ ಭಾರತವು 2ನೇ ಟೆಸ್ಟ್‌ ಪಂದ್ಯದಲ್ಲಿ ಸಂಪೂರ್ಣ ಸೇಡು ತೀರಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಭಾರತದ ಬೌಲರ್ಸ್‌ಗಳ ಸಪೋರ್ಟ್‌ ಸಿಕ್ಕಿದ್ದು, ಹರಿಣ ಬ್ಯಾಟರ್ಸ್‌ಗಳನ್ನು ಬೆಂಡೆತ್ತಿದ್ದಾರೆ. 

ಭಾರತದ ಸ್ಪೀಡ್‌ ಬೌಲರ್‌ ಮೊಹಮ್ಮದ್ ಸಿರಾಜ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾವು ಕೇವಲ 14 ಒವರ್‌ಗಳಲ್ಲಿಯೇ ತನ್ನೆಲ್ಲ ವಿಕೇಟ್‌ ಕಳೆದು ಕೊಂಡಿದೆ. ಜಸ್ಪ್ರಿತ್‌ ಬುಮ್ರಾ ಮತ್ತು ಮುಕೆಶ್‌ ಕುಮಾರ್‌ ಕೂಡ ಈ ಒಂದು ಚಮತ್ಕಾರದಲ್ಲಿ  ಸಿರಾಜ್‌ಗೆ ಜೊತೆಯಾದರು.

ಇದನ್ನು ಓದಿ-2024ರಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಬಹುದಾದ 5 ಪ್ರಮುಖ ದಾಖಲೆಗಳಿವು

ಭಾರತವು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಹೀನಾಯವಾಗಿ ಸೋತಿತ್ತು, ಮೂರನೇ ದಿನವೇ ಭಾರತವನ್ನು ಸೋಲಿಸಿ ಪಂದ್ಯವನ್ನು ಗೆದಿತ್ತು. ಅದೇ ಬೆನ್ನಲ್ಲೆ ಭಾರತವು 2ನೇ ಟೆಸ್ಟ್‌ ಪಂದ್ಯದಲ್ಲಿ ಎಚ್ಚೆತ್ತುಕೊಂಡಿದೆ. ಈಗ ದಕ್ಷಿಣ ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್‌ ಬನಲ್ಲಿ ಸಂಪೂರ್ಣವಾಗಿ ಬಗ್ಗುಬಡಿದೆ.

ಭಾರತದ ಬೌಲರ್ಸ್‌ಗಳು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಪ್ಲಾನ್‌ ಉಲ್ಟಾ ಮಾಡಿದೆ. ದಕ್ಷಿಣ ಆಫ್ರಿಕಾ ತಂಡಸ ಆರಂಭಿಕರಾಗಿ ಕಣಕ್ಕಿಳಿದ ಐಡೆನ ಮಾರ್ಕ್ರಂ ಮತ್ತು ಡೀನ್‌ ಎಲ್ಗರ್‌ರವರು ಬ್ಯಾಟಿಂಗ್ ಆರಂಭಿಸಿದ ಕೆಲವೇ ಒವರ್‌ಗಳಲ್ಲಿ ತಮ್ಮ ವಿಕೆಟ್‌ಗಳನ್ನು ಸಿರಾಜ್‌ ಗೆ ಒಪ್ಪಿಸಿದರು. ಯಾವೊಬ್ಬ ಆಟಗಾರನು 15 ರನ್‌ಗಳ ಮೇಲೆ ದಾಟಲು ಸಾಧ್ಯವಾಗಿಲ್ಲ.

ಇದನ್ನು ಓದಿ-2ನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟ: 2 ಬದಲಾವಣೆ ಜೊತೆ ಇಬ್ಬರು ಆಟಗಾರರು ತಂಡಕ್ಕೆ ಎಂಟ್ರಿ!

ಸಿರಾಜ್‌ ಬವಲಿಂಗ್‌ ದಾಳಿಗೆ ತತ್ತರಿಸದ ದಕ್ಷಿಣ ಆಫ್ರಿಕವು 14.2 ಒವರ್‌ಗಳಲ್ಲಿ ಕೇವಲ 55 ರನ್‌ಗಳಿಸಿ ಆಲ್‌ ಔಟ್‌ ಆಗಬೇಕಾಯಿತು. ಭಾರತದ ಪರ ಸಿರಾಜ್‌ 6 ವಿಕೆಟ್‌ ಪಡೆದರೇ, ಬುಮ್ರಾ ಮತ್ತು ಮುಕೇಶ್‌ ತಲಾ 2 ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಆಲ್‌ ಔಟ್‌ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಇನ್ನು ಮೊದಲ ಸೆಷನ್‌ನಲ್ಲೇ  ಭಾರತವು ಬ್ಯಾಟಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದು, ತಂಡದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಲ್‌ ಮತ್ತು ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಆರಂಭಿಸಿದರು. ಯಶಸ್ವಿ ಜೈಸ್ವಾಲ್‌ ಶೂನ್ಯಕ್ಕೆ ಔಟ್‌ ಆಗಿ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಭಾರತಚವು ಮೊದಲ ಸೆಷನ್‌ ಅಲ್ಲಿ 50 ರನ್ ಗಳಿಸಿದೆ. 

ಎರಡನೇ ಸೆಷನ್‌ ಆರಂಭವಾಗುತ್ತಿದಂತಲೇ 39 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ಕೂಡ ಪೆವಿಲಿಯನ್‌ ಗೆ ಮರಳಿದರು. ಇನ್ನು ಶುಭ್ಮನ್‌ ಗಿಲ್‌ ಕೂಡ 36 ರನ್‌ ಗಳಿಸಿ ಔಟ್‌ ಆದರೆ ಶ್ರೇಯಸ್ಯ ಐಯ್ಯರ್‌ ಯಾವುದೇ ಖಾತೆ ತೆರೆಯದೆ ಬಂದದಾರಿಯಲ್ಲೆ ಮರಳಿದರು.  ಎರಡನೇ ಸೆಷನ್‌ ಕೂಡ ಮುಗಿದಿದ್ದು ಭಾರತವು 4 ವಿಕೆಟ್‌ಗಳಿಗೆ 111 ರನ್‌ಗಳಿಸಿ 56 ರನ್‌ಗಳಿಂದ ಮುನ್ನಡೆ ಸಾಧಿಸಿದೆ.

ಮೊದಲ ದಿನದ ಪಂದ್ಯ ಮುಗಿಯಲು ಇನ್ನು 42.4 ಒವರ್‌ಗಳು ಬಾಕಿ ಇದ್ದು, ಟೀಂ ಇಂಡಿಯಾ ಪರ ವಿರಾಟ್‌ ಕೊಹ್ಲಿ ಮತ್ತು ಕನ್ನಡಿಗ ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ನಡೆಸುತ್ತಿದ್ಧಾರೆ. 2ನೇ ಸೆಷನ್‌ ಅಂತ್ಯಕ್ಕೆ  ವಿರಾಟ್‌ 20 ಗಳಿಸಿದ್ಧಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News