WPL 2023 : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023 ಉದ್ಘಾಟನಾ ಆವೃತ್ತಿಗೆ ಸ್ಮೃತಿ ಮಂಧಾನ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದೆ. ಪುರುಷರ ತಂಡದ ಮಾಜಿ ಮತ್ತು ಪ್ರಸ್ತುತ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಈ ಬಗ್ಗೆ ಆರ್‌ಸಿಬಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ ಕೊಹ್ಲಿ, "ಈಗ ಡಬ್ಲ್ಯುಪಿಎಲ್‌ನಲ್ಲಿ ವಿಶೇಷವಾದ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಮತ್ತೊಂದು ನಂ. 18 ರ ಸಮಯ ಬಂದಿದೆ. ಹೌದು, ನಾವು ಸ್ಮೃತಿ ಮಂಧಾನ ಬಗ್ಗೆ ಮಾತನಾಡುತ್ತಿದ್ದೇವೆ. ಸ್ಮೃತಿ ಮುಂದುವರಿಯಿರಿ, ನಿಮಗೆ ಅತ್ಯುತ್ತಮ ತಂಡ ಮತ್ತು ವಿಶ್ವದ ಅತ್ಯುತ್ತಮ ಅಭಿಮಾನಿಗಳು ಇದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ : Virat Kohli : ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ..!
ಇನ್ನು ಡು ಪ್ಲೆಸಿಸ್ ಮಾತನಾಡಿ "ಆರ್‌ಸಿಬಿಯ ನಾಯಕತ್ವಕ್ಕೆ ಇದು ನಂಬಲಾಗದ ಸಂಗತಿ, ನಮ್ಮ ಮಹಿಳಾ ನಾಯಕಿ ಆರ್‌ಸಿಬಿಯನ್ನು ಮುನ್ನಡೆಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಆಲ್ ದಿ ವೆರಿ ಬೆಸ್ಟ್, ಸ್ಮೃತಿ ಮಂಧಾನಾ. ಗೇಮ್ಸ್‌ನಲ್ಲಿ ನಿಮ್ಮನ್ನು ನೋಡೋಣ," ಎಂದು ಹೇಳಿದ್ದಾರೆ.
From one No. 18 to another, from one skipper to another, Virat Kohli and Faf du Plessis announce RCB’s captain for the Women’s Premier League - Smriti Mandhana. #PlayBold #WPL2023 #CaptainSmriti @mandhana_smriti pic.twitter.com/sqmKnJePPu
— Royal Challengers Bangalore (@RCBTweets) February 18, 2023
ಫೆಬ್ರವರಿ 13 ರಂದು ಮುಂಬೈನಲ್ಲಿ ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ಬಿಡ್ಡಿಂಗ್‌ಗೆ ಬಂದ ಮೊದಲ ಹೆಸರು ಮಂಧಾನ. ನಿರೀಕ್ಷೆಯಂತೆ, ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಿ ಬಿಡ್ಡಿಂಗ್ ವಾರ್ ಮಾಡಿದವು. ಕೊನೆಗೆ ಆರ್‌ಸಿಬಿ ಮಂಧಾನ ಅವರನ್ನು 3.4 ಕೋಟಿಗೆ (USD 415,000 ಅಂದಾಜು) ಬೆಳೆಗೆ ಖರೀದಿಸಿತು. ಇವರನ್ನು ಬಿಟ್ಟರೆ ಈ ಹರಾಜಿನಲ್ಲಿ ಯಾವುದೇ ಆಟಗಾರತಿ ಅತ್ಯಧಿಕ ಬೆಲೆ ಮಾರಾಟವಾಗಿಲ್ಲ.
ಇದನ್ನೂ ಓದಿ : IND vs AUS ಪಂದ್ಯದ ನಡುವೆ ಆಘಾತಕಾರಿ ಸುದ್ದಿ, ಈ ಆಟಗಾರ ಆಸ್ಪತ್ರೆಗೆ ದಾಖಲು.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.