ಧೋನಿ ಜೀ, ನಿಮ್ಮ ಆಟದ ಅಗತ್ಯ ದೇಶಕ್ಕಿದೆ, ನಿವೃತ್ತಿ ಹೊಂದಬೇಡಿ: ಲತಾ ಮಂಗೇಶ್ಕರ್

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಧೋನಿಯವರಿಗೆ ನಿವೃತ್ತಿ ಆಗದಂತೆ ಮನವಿ ಮಾಡಿದ್ದಾರೆ

Last Updated : Jul 11, 2019, 05:58 PM IST
ಧೋನಿ ಜೀ, ನಿಮ್ಮ ಆಟದ ಅಗತ್ಯ ದೇಶಕ್ಕಿದೆ, ನಿವೃತ್ತಿ ಹೊಂದಬೇಡಿ: ಲತಾ ಮಂಗೇಶ್ಕರ್  title=

ನವದೆಹಲಿ: ವಿಶ್ವಕಪ್ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರಾಭವಗೊಂಡ ಬೆನ್ನಲ್ಲೇ ಎಂ.ಎಸ್.ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದು, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಧೋನಿಯವರಿಗೆ ನಿವೃತ್ತಿ ಆಗದಂತೆ ಮನವಿ ಮಾಡಿದ್ದಾರೆ

ಈ ಬಗ್ಗೆ ಟ್ವೀಟ್ ಮಾಡಿರುವ ಲತಾ ಮಂಗೇಶ್ಕರ್, "ನಮಸ್ಕಾರ ಧೋನಿಜೀ, ನೀವು ಕ್ರಿಕೆಟ್ ನಿಂದ ನಿವೃತ್ತಿಯಾಗಲು ಬಯಸಿದ್ದೀರಿ ಎಂಬ ಬಗ್ಗೆ ನಾನು ಕೇಳ್ಪಟ್ಟೆ. ಆದರೆ, ನೀವು ಆ ಬಗ್ಗೆ ಯೋಚನೆಯನ್ನೂ ಸಹ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ಇದು ನನ್ನ ಮನವಿ ಸಹ..." ಎಂದಿದ್ದಾರೆ.

ಲತಾ ಮಂಗೇಶ್ಕರ್ ಅವರ ಟ್ವೀಟ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 72ಸಾವಿರ ಮಂದಿ ಲೈಕ್, 17 ಸಾವಿರ ಮಂದಿ ರೀಟ್ವೀಟ್ ಮತ್ತು 2.9 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. 

Trending News