ವ್ಯರ್ಥವಾದ ಶುಭ್ಮನ್ ಗಿಲ್ ಶತಕ,  ಬಾಂಗ್ಲಾ ವಿರುದ್ಧ ಭಾರತಕ್ಕೆ 6 ರನ್ ಗಳ ಸೋಲು 

ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಹಂತದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿದೆ.

Written by - Manjunath N | Last Updated : Sep 15, 2023, 11:25 PM IST
  • ಅಂತಿಮವಾಗಿ ಟೀಮ್ ಇಂಡಿಯಾ 49.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 259 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು
  • ಆ ಮೂಲಕ ಆರು ರನ್ ಗಳ ಅಂತರದಿಂದ ಸೊಲನ್ನು ಅನುಭವಿಸಿತು
  • ಶುಬ್ಮನ್ ಗಿಲ್ 133 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ 121 ರನ್ ಗಳನ್ನು ಗಳಿಸಿದರು
ವ್ಯರ್ಥವಾದ ಶುಭ್ಮನ್ ಗಿಲ್ ಶತಕ,  ಬಾಂಗ್ಲಾ ವಿರುದ್ಧ ಭಾರತಕ್ಕೆ 6 ರನ್ ಗಳ ಸೋಲು  title=

ಕೊಲೊಂಬೋ: ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಹಂತದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು 50 ಓವರ್ ಗಳಲ್ಲಿ ಎಂಟು ವಿಕೆಟ್ ಗೆ 265 ರನ್ ಗಳಿಗೆ ಕಟ್ಟಿ ಹಾಕಿತು. ಬಾಂಗ್ಲಾದೇಶದ ಪರವಾಗಿ ಶಕೀಬ್ 80, ಹಾಗೂ ತಾಹಿದ್ ಹೃದಯ ಅವರು 54 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಟೀಮ್ ಇಂಡಿಯಾದ ಪರವಾಗಿ ಠಾಕೂರ್ ಹಾಗೂ  ಮೊಹಮ್ಮದ್ ಶಮಿ ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್ ಗಳನ್ನು ಪಡೆದು ಗಮನ ಸೆಳೆದರು.

ಬಾಂಗ್ಲಾ ದೇಶವು ನೀಡಿದ 266 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಆರಂಭದಲ್ಲಿ ತಂಡದ ಮೊತ್ತ 17 ರನ್ ಗಳಾಗುವಷ್ಟರಲ್ಲಿ ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು.ಈ ಹಂತದಲ್ಲಿ ಭದ್ರವಾಗಿ ಏಕಾಂಗಿ ಹೋರಾಟ ನಡೆಸಿದ ಶುಬ್ಮನ್ ಗಿಲ್ 133 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ 121 ರನ್ ಗಳನ್ನು ಗಳಿಸಿದರು.

ಕೊನೆಯಲ್ಲಿ ಅಕ್ಸರ್ ಪಟೇಲ್ ಕೇವಲ 34 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಗಳ ನೆರವಿನೊಂದಿಗೆ 42 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಗುರಿಗೆ ತಲುಪಿಸುವ ಪ್ರಯತ್ನದಲ್ಲಿಯೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 49.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 259 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು.ಆ ಮೂಲಕ ಆರು ರನ್ ಗಳ ಅಂತರದಿಂದ ಸೊಲನ್ನು ಅನುಭವಿಸಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News