ಸ್ನೇಹ ಬದಿಗಿಟ್ಟು ತಂಡದ ಗೆಲುವಿಗಾಗಿ ಪಾಂಡ್ಯ ಮಹತ್ವದ ನಿರ್ಧಾರ: ODIನಲ್ಲಿ ದ್ವಿಶತಕ ಸಿಡಿಸಿದ ಈ ಕ್ರಿಕೆಟಿಗ ಪ್ಲೇಯಿಂಗ್ 11ನಿಂದ ಔಟ್!

IND vs WI t-20 3rd match, Shubman Gill: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಪಂದ್ಯ ಇಂದು ರಾತ್ರಿ 8 ಗಂಟೆಗೆ ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Written by - Bhavishya Shetty | Last Updated : Aug 8, 2023, 12:48 PM IST
    • ಭಾರತ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕು.
    • ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ
    • ಗೆಳೆತನ ಮರೆತು ಈ ಆಟಗಾರನಿಗೆ ಗೇಟ್ ಪಾಸ್ ಕೊಡ್ತಾರಾ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!
ಸ್ನೇಹ ಬದಿಗಿಟ್ಟು ತಂಡದ ಗೆಲುವಿಗಾಗಿ ಪಾಂಡ್ಯ ಮಹತ್ವದ ನಿರ್ಧಾರ: ODIನಲ್ಲಿ ದ್ವಿಶತಕ ಸಿಡಿಸಿದ ಈ ಕ್ರಿಕೆಟಿಗ ಪ್ಲೇಯಿಂಗ್ 11ನಿಂದ ಔಟ್! title=
India vs West Indies

IND vs WI, 3 ನೇ T20: ಹಾರ್ದಿಕ್ ಪಾಂಡ್ಯ ಅವರು ತಮ್ಮ ನಾಯಕತ್ವದಲ್ಲಿ T20 ಅಂತರರಾಷ್ಟ್ರೀಯ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲವುದನ್ನು ನೋಡಲು ಇಷ್ಟಪಡುತ್ತಿಲ್ಲ. ಇದೇ ಕಾರಣದಿಂದ ಅನೇಕ ಟ್ರಿಕ್ಸ್ ಗಳನ್ನು ಮಾಡುತ್ತಿದ್ದಾರೆ ನಾಯಕ.

ಇದನ್ನೂ ಓದಿ: 3ನೇ ಟಿ20ಗೆ ಭಾರತದ Playing 11 ರೆಡಿ: ಒಬ್ಬರಲ್ಲ, ಇಬ್ಬರಲ್ಲ… ನಾಲ್ಕು ಆಟಗಾರರು ತಂಡದಿಂದ ಔಟ್!

ಭಾರತ ಈ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಉಳಿಯಬೇಕಾದರೆ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ತನ್ನ ತಪ್ಪುಗಳಿಂದಾಗಿ 0-2 ಅಂತರದಲ್ಲಿ ಹಿಂದುಳಿದಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಪಂದ್ಯ ಇಂದು ರಾತ್ರಿ 8 ಗಂಟೆಗೆ ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗೆಳೆತನ ಮರೆತು ಈ ಆಟಗಾರನಿಗೆ ಗೇಟ್ ಪಾಸ್ ಕೊಡ್ತಾರಾ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

ಈಗ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಭಾರತದ್ದು. ನಾಯಕ ಹಾರ್ದಿಕ್ ಪಾಂಡ್ಯ ಅವರು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಸೋಲುವ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಇಂದು ನಡೆಯಲಿರುವ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಗೆಳೆತನ ಮರೆತು ಓರ್ವ ಆಟಗಾರನಿಗೆ ವಿಲನ್ ಆಗುವ ಅನಿವಾರ್ಯತೆ ಎದುರಾಗಿದೆ.

ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯ ಶುಭ್ಮನ್ ಗಿಲ್ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಎಲ್ಲಾ ಮೂರು ಟೆಸ್ಟ್, ODI ಮತ್ತು T20 ಸರಣಿಗಳಲ್ಲಿ ಶುಭಮನ್ ಗಿಲ್ ಅವರ ಬ್ಯಾಟ್ ಮೌನವಾಗಿರುವುದೇ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.

ಶುಭ್ಮನ್ ಗಿಲ್ ಐಪಿಎಲ್‌’ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಸಹ ಆಟಗಾರ ಮತ್ತು ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ, ಶುಭಮನ್ ಗಿಲ್ 42.00 ಸರಾಸರಿಯಲ್ಲಿ 126 ರನ್ ಗಳಿಸಿದ್ದಾರೆ. ಟ್ವೆಂಟಿ-20 ಅಂತರಾಷ್ಟ್ರೀಯ ಸರಣಿಯಲ್ಲಿ ಶುಭ್‌ಮನ್ ಗಿಲ್ ಅವರ ಸ್ಥಿತಿ ಇನ್ನೂ ಕೆಟ್ಟದಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯ ಮೊದಲ 2 ಪಂದ್ಯಗಳಲ್ಲಿ, ಶುಬ್ಮನ್ ಗಿಲ್ 5.00 ಸರಾಸರಿಯಲ್ಲಿ ಕೇವಲ 10 ರನ್ ಗಳಿಸಿದ್ದಾರೆ. ಇದೇ ಕಾರಣದಿಂದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಿಂದ ಶುಭಮನ್ ಗಿಲ್ ಅವರನ್ನು ಕೈಬಿಡಬಹುದು ಎನ್ನಲಾಗುತ್ತಿದೆ. ಅವರ ಸ್ಥಾನದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಸ್ಫೋಟಕ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಪ್ಲೇಯಿಂಗ್ XI ನಲ್ಲಿ ಅವಕಾಶ ನೀಡಬಹುದು.

ಇದನ್ನೂ ಓದಿ: ಟಿ20 ಕ್ರಿಕೆಟ್’ನಲ್ಲಿ ಈ ವರ್ಷ ಅತಿ ಹೆಚ್ಚು ಶುಲ್ಕ ಪಡೆದ ಕ್ರಿಕೆಟಿಗ ಯಾರು? ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ

ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವೇಗದ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಈ ಆಟಗಾರನು ಕ್ರೀಸ್‌’ಗೆ ಬಂದ ತಕ್ಷಣ ದೊಡ್ಡ ಬೌಲರ್’ಗಳಿಗೂ ಭಯಪಡದೆ, ಬ್ಯಾಟ್ ಬೀಸುತ್ತಿರುವುದು ಗಮನಾರ್ಹ. ಯಶಸ್ವಿ ಜೈಸ್ವಾಲ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ ಉತ್ತಮ ಆಟದ ಮಾದರಿಯನ್ನು ಪ್ರಸ್ತುತಪಡಿಸಿದ್ದರು. ತಮ್ಮ ವೇಗದ ಬ್ಯಾಟಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದು ಸುಳ್ಳಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇಶಾನ್ ಕಿಶನ್ ಅವರ ಹೊಸ ಆರಂಭಿಕ ಪಾಲುದಾರರಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News