Shubman Gill Century : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಶುಭ್‌ಮನ್ ಸ್ಫೋಟಕ ಬ್ಯಾಟಿಂಗ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಶತಕ ಸಿಡಿಸಿದ್ದಾರೆ. ಇವರಿಂದಾಗಿ ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ 513 ರನ್ ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಗಿಲ್ ಶತಕ ಸಿಡಿಸಿದ್ದು ಹಲವು ಸ್ಟಾರ್ ಆಟಗಾರರ ಸ್ಥಾನ ಅಪಾಯದಲ್ಲಿರುವಂತಿದೆ. ಹಾಗಿದ್ರೆ, ಯಾವ ಆಟಗಾರರಿಗೆ ಟೆನ್ಷನ್ ಶುರುವಾಗಿದೆ? ಯಾಕೆ? ಇಲ್ಲಿದೆ ನೋಡಿ..
ಭರ್ಜರಿ ಶತಕ ಸಿಡಿಸಿದ ಶುಭಮನ್ ಗಿಲ್
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ದುಡುಕಿನ ರೀತಿಯಲ್ಲಿ ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 110 ರನ್ ಗಳಿಸಿದರು, ಇದರಲ್ಲಿ 10 ಬೌಂಡರಿ ಮತ್ತು ಮೂರು ಲಾಂಗ್ ಸಿಕ್ಸರ್‌ಗಳು ಸೇರಿವೆ. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಹಲ್ಲು ಶಾಕ್ ಆಗಿದ್ದರೆ. ಇದು ಶುಭಮನ್ ಗಿಲ್ ಅವರ ಮೊದಲ ಟೆಸ್ಟ್ ಶತಕವಾಗಿದೆ. ಈ ಸ್ಫೋಟಕ ಇನ್ನಿಂಗ್ಸ್ ನಂತರ, ಅವರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : Cheteshwar Pujara : ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬೌಲರ್‌ಗಳನ್ನು ಕಾಡಿದ ಚೇತೇಶ್ವರ ಪೂಜಾರ!
ಈ ಆಟಗಾರರಿಗೆ ಶುರುವಾಗಿದೆ ಟೆನ್ಷನ್
ಕೆಲ ದಿನಗಳಿಂದ ಸ್ಟಾರ್ ಬ್ಯಾಟ್ಸಮನ್ ಕೆಎಲ್ ರಾಹುಲ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿ ಆಡುತ್ತಿಲ್ಲ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ಗೆ ಒಳ್ಳೆಯ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ರಾಹುಲ್ ಮೊದಲ ಇನಿಂಗ್ಸ್‌ನಲ್ಲಿ 22 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 23 ರನ್ ಗಳಿಸಿದ್ದಾರೆ. ಹಾಗೆ, ಮಯಾಂಕ್ ಅಗರ್ವಾಲ್ ಈಗಾಗಲೇ ಕಳಪೆ ಫಾರ್ಮ್‌ನಿಂದ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಇದೀಗ ಶುಭಮನ್ ಗಿಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಕಾರಣ ಮಯಾಂಕ್ ಟೀಂಗೆ ಮರಳುವುದು ಕಷ್ಟಕರವಾಗಿದೆ. ಮತ್ತೊಂದೆಡೆ, ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಅವರಿಗೆ ಪ್ಲೇಯಿಂಗ್ 11 ನಿಂದ ಹೊರಗುಳಿಯುವ ಸಾಧ್ಯತೆ ಇದೆ.
ಶತಕ ನಂತರ ಮಾತನಾಡಿದ ಶುಭಮನ್ ಗಿಲ್
ಪಂದ್ಯದ ನಂತರ ಮಾತನಾಡಿದ ಶುಭಮನ್ ಗಿಲ್, 'ಮೊದಲ ಟೆಸ್ಟ್ ಶತಕ ಸಿಡಿಸಲು ಬಹಳ ಸಮಯ ಹಿಡಿಯಿತು ಎಂದು ನನಗೇ ಅನಿಸಿತು. ಈ ಶತಕವು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನನ್ನು ಬೆಂಬಲಿಸಿದ ನನ್ನ ಸ್ನೇಹಿತರಿಗೆ ಅರ್ಪಿಸುತ್ತೇನೆ. ಯಾವುದೇ ಆಟಗಾರನಿಗೆ ಇದು ವಿಶೇಷ ಕ್ಷಣ - ಮೊದಲ ಟೆಸ್ಟ್ ಶತಕವನ್ನು ಹೊಡೆದಿರುವುದು ನನಗೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Big Bash League 2022-23 :15 ರನ್ ಗಳಿಗೆ ಸಿಡ್ನಿ ಥಂಡರ್ ತಂಡ ಆಲೌಟ್...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.