Shubman Gill : ಸಚಿನ್‌ ಪುತ್ರಿ ಜೊತೆ ಗಿಲ್‌ ಡೇಟಿಂಗ್‌ ಪಕ್ಕಾ...! ಸಾರಾ ʼಶುಭ್‌ʼ ಸಮಾಚಾರ

ಭಾರತ ಕ್ರಿಕೆಟ್‌ ತಂಡದ ಯುವ ಆಟಗಾರ ಶುಭ್‌ಮನ್‌ ಗಿಲ್‌ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ 200 ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಗಳಿಸಿದವರ ಲಿಸ್ಟ್‌ಗೆ ಎಂಟ್ರೀ ಕೊಟ್ಟರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ ದ್ವಿಶತಕಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ, ಇದರ ಜೊತೆ ಸಾರಾ ಎಂಬ ಹೆಸರು ಭಾರಿ ಸದ್ದು ಮಾಡಿತ್ತು.

Written by - Krishna N K | Last Updated : Jan 21, 2023, 07:52 PM IST
  • ಗಿಲ್‌ ಜೊತೆ ಸಚಿನ್‌ ಪುತ್ರಿ ಸಾರಾ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.
  • ಶುಭ್‌ಮನ್‌ ಗಿಲ್‌ ಅವರನ್ನು ಡೇಟಿಂಗ್ ಬಗ್ಗೆ ಕೇಳಿದಾಗ, ʼಸಾರಾʼ ಎಂಬ ಒಂದೇ ಒಂದು ಪದ ಹೇಳಿ ನಿಲ್ಲಿಸಿದರು.
  • ಸಬ್‌ಮನ್ ಗಿಲ್ ಡೇಟಿಂಗ್ ಮಾಡುತ್ತಿರುವ ಸಂದೇಶಕ್ಕೆ ನಟಿ ಸೋನಮ್ ಬಾಜ್ವಾ ಪ್ರತಿಕ್ರಿಯಿಸಿದ್ದಾರೆ.
Shubman Gill : ಸಚಿನ್‌ ಪುತ್ರಿ ಜೊತೆ ಗಿಲ್‌ ಡೇಟಿಂಗ್‌ ಪಕ್ಕಾ...! ಸಾರಾ ʼಶುಭ್‌ʼ ಸಮಾಚಾರ title=

Shubman gill Sara : ಭಾರತ ಕ್ರಿಕೆಟ್‌ ತಂಡದ ಯುವ ಆಟಗಾರ ಶುಭ್‌ಮನ್‌ ಗಿಲ್‌ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ 200 ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಗಳಿಸಿದವರ ಲಿಸ್ಟ್‌ಗೆ ಎಂಟ್ರೀ ಕೊಟ್ಟರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ ದ್ವಿಶತಕಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ, ಇದರ ಜೊತೆ ಸಾರಾ ಎಂಬ ಹೆಸರು ಭಾರಿ ಸದ್ದು ಮಾಡಿತ್ತು.

ಹೌದು.. ಗಿಲ್‌ ಜೊತೆ ಸಚಿನ್‌ ಪುತ್ರಿ ಸಾರಾ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಜೊತೆ ಕೆಲವರು ಸಾರಾ ಅಲಿ ಖಾನ್‌ ಹೆಸರನ್ನೂ ಸಹ ತೆಗೆದುಕೊಂಡಿದ್ದರು. ಅಲ್ಲದೆ, ಇತ್ತೀಚೆಗೆ ಪಂಜಾಬಿ ಟಿವಿ ಶೋವೊಂದರಲ್ಲಿ ಭಾಗವಹಿಸಿದ್ದ ಶುಭ್‌ಮನ್‌ ಗಿಲ್‌ ಅವರನ್ನು ಡೇಟಿಂಗ್ ಬಗ್ಗೆ ಕೇಳಿದಾಗ, ʼಸಾರಾʼ ಎಂಬ ಒಂದೇ ಒಂದು ಪದ ಹೇಳಿ ನಿಲ್ಲಿಸಿದರು. ಇದು ಅವರ ಅಭಿಮಾನಿಗಳಿಗೆ ತಲೆಕಡಿಸಿತ್ತು.

ಇದನ್ನೂ ಓದಿ: ICC Men’s ODI Ranking: ಐತಿಹಾಸಿಕ ಸಾಧನೆಗೆ ಒಂದೇ ಮೆಟ್ಟಿಲು: ಮೂರು ಸ್ವರೂಪದಲ್ಲೂ ಅಗ್ರಸ್ಥಾನ ಪಡೆಯುತ್ತಾ ಟೀಂ ಇಂಡಿಯಾ?

ಅಷ್ಟಕ್ಕೂ ಗಿಲ್‌ ಹೇಳಿದ ಸಾರಾ ಸಚಿನ್ ಮಗಳೇ? ಅಥವಾ ಬಾಲಿವುಡ್ ನಟಿ ಸಾರಾ ಅಲಿಕಾನಾ? ಎಂದು ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿರುವಾಗ ಅಭಿಮಾನಿಗಳು ಸಾರಾ... ಸಾರಾ... ಎಂದು ಘೋಷಣೆ ಕೂಗಿದರು. ಆಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತರ್ಜಾಲದಲ್ಲಿ ಮೀಮ್‌ಗಳು ಮತ್ತು ವದಂತಿಗಳು ಹರಿದಾಡುತ್ತಿವೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಸಬ್‌ಮನ್ ಗಿಲ್ ಡೇಟಿಂಗ್ ಮಾಡುತ್ತಿರುವ ಸಂದೇಶಕ್ಕೆ ನಟಿ ಸೋನಮ್ ಬಾಜ್ವಾ ಪ್ರತಿಕ್ರಿಯಿಸಿದ್ದಾರೆ.

ಸೋನಮ್‌ ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ, ಶುಭ್‌ಮನ್‌ ಗಿಲ್‌ ಮತ್ತು ನಟಿ ಸಾರಾ ಅಲಿ ಖಾನ್ ಡೇಟಿಂಗ್ ವದಂತಿಯನ್ನು ಹಾಸ್ಯಮಯವಾಗಿ ಉಲ್ಲೇಖಿಸಿದ್ದಾರೆ. ನಗುವ ಎಮೋಜಿಯೊಂದಿಗೆ ʼಎಲ್ಲಾ ಸುಳ್ಳುʼ  ಎಂದು ಶೀರ್ಷಿಕೆ ಬರೆದಿದ್ದಾರೆ. ಇದೀಗ ಇದನ್ನೇ ಮೂಲವನ್ನಾಗಿಸಿಕೊಂಡ ಗಿಲ್‌ ಅಭಿಮಾನಿಗಳು ಸಾರಾ ಅಲಿ ಖಾನ್ ಜೊತೆ ಶುಭ್‌ಮನ್‌ ಡೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಅಲ್ಲದೆ, ಸಚಿನ್ ಪುತ್ರಿ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಂಬಿದ್ದಾರೆ. ಆದರೆ ಸಚಿನ್ ಪುತ್ರಿ ಸಾರಾ ಹಾಗೂ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಸಬ್ಮನ್ ಗಿಲ್ ಈ ವದಂತಿಗೆ ಯಾವುದೇ ಸ್ಪಷ್ಟತೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News