Shubman Gill : ಈ ಅಭಿಮಾನಿಯ ಪ್ರಪೋಸಲ್‌ ಒಪ್ಪಿಕೊಂಡ ಶುಭಮನ್ ಗಿಲ್!! ಸಾರಾ ಗತಿಯೇನು?

Shubman Gill in Dating App : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆದಾಗಲೆಲ್ಲ ಉಭಯ ದೇಶಗಳ ಅಭಿಮಾನಿಗಳು ಥ್ರಿಲ್ ಆಗಿರುತ್ತಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9 ರಂದು ನಡೆಯಿತು. ಆದರೆ ಅದಕ್ಕೂ ಮೊದಲು ಶುಭಮನ್ ಗಿಲ್ ಎಲ್ಲರ ಗಮನ ಸೆಳೆದರು. 

Written by - Chetana Devarmani | Last Updated : Feb 5, 2023, 11:44 AM IST
  • ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ
  • ಅಭಿಮಾನಿಯ ಆಸೆ ಈಡೇರಿಸಿದ ಶುಭಮನ್‌ ಗಿಲ್‌
  • ಎಲ್ಲರ ಗಮನ ಸೆಳೆದ ಟೀ ಇಂಡಿಯಾ ಆಟಗಾರ
Shubman Gill : ಈ ಅಭಿಮಾನಿಯ ಪ್ರಪೋಸಲ್‌ ಒಪ್ಪಿಕೊಂಡ ಶುಭಮನ್ ಗಿಲ್!! ಸಾರಾ ಗತಿಯೇನು? title=
Shubman Gill

Shubman Gill accepted this fan proposal : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆದಾಗಲೆಲ್ಲ ಉಭಯ ದೇಶಗಳ ಅಭಿಮಾನಿಗಳು ಥ್ರಿಲ್ ಆಗಿರುತ್ತಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9 ರಂದು ನಡೆಯಿತು. ಆದರೆ ಅದಕ್ಕೂ ಮೊದಲು ಶುಭಮನ್ ಗಿಲ್ ಎಲ್ಲರ ಗಮನ ಸೆಳೆದರು. ಟೀಂ ಇಂಡಿಯಾದ ಬ್ಯಾಟಿಂಗ್ ಪವರ್ ಆಗಿ ಛಾಪು ಮೂಡಿಸುತ್ತಿರುವ ಗಿಲ್ ಡೇಟಿಂಗ್ ವಿಚಾರದಲ್ಲಿಯೂ ಸಂಚಲನ ಮೂಡಿಸಿದ್ದಾರೆ. 

 

 

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಬಿರುಸಿನ ಶತಕ ಸಿಡಿಸಿದ್ದಾರೆ. ಅವರು 126 ರನ್‌ಗಳ ಇನಿಂಗ್ಸ್‌ ಆಡಿದ್ದರು. ಇದರ ನಂತರ, ಅಭಿಮಾನಿ ಹುಡುಗಿಯೊಬ್ಬರು ಗಿಲ್ ಅವರ ಫೋಟೋವನ್ನು ಕೈಯಲ್ಲಿ ಹಿಡಿದಿರುವ ಚಿತ್ರವು ವೈರಲ್ ಆಗಿತ್ತು.

ಇದನ್ನೂ ಓದಿ : IND Vs AUS: 'ಈ ಇಬ್ಬರ ಆಟಗಾರರ ಅನುಪಸ್ಥಿತಿಯಿಂದ ಟೀಂ ಇಂಡಿಯಾ ದುರ್ಬಲವಾಗಿದೆ'

ಅಭಿಮಾನಿ ಹುಡುಗಿಯ ಫೋಟೋ ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ ಟಿಂಡರ್‌ ಡೇಟಿಂಗ್‌ ಆಪ್‌ ಗಿಲ್‌ ಜೊತೆ ಮ್ಯಾಚ್‌ ಮಾಡು ಎಂಬ ವಿನಂತಿಯಿತ್ತು. ಇದೀಗ ಶುಭಮನ್ ಗಿಲ್ ಅವರು ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ತಮ್ಮ ಖಾತೆಯನ್ನು ರಚಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅವರು, 'ದೇಖ್ ತೊ ಲಿಯಾ, ಅಬ್ ತುಮ್ ದೇಖೋ' ಎಂದು ಬರೆದಿದ್ದಾರೆ. ನಂತರ ಗಿಲ್ ಇದು ಜಾಹೀರಾತು ಪೋಸ್ಟ್ ಎಂದು ಹೇಳಿದ್ದಾರೆ.

 

 

ಶುಬ್ಮನ್ ಗಿಲ್ ಕೆಲವು ಸಮಯದಿಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಭಾರತದ ಪರ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಐದನೇ ಬ್ಯಾಟ್ಸ್‌ಮನ್. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

 

 

ಇದನ್ನೂ ಓದಿ : IND vs AUS : ಸರಣಿಗೆ ಈ 2 ವಿಕೆಟ್‌ಕೀಪರ್‌ ಎಂಟ್ರಿ : Playing 11 ನಲ್ಲಿ ಚಾನ್ಸ್ ಕೊಡ್ತಾರಾ ರೋಹಿತ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News