ಟೀಂ ಇಂಡಿಯಾ ಜೊತೆ KKRಗೂ ಭಾರೀ ಆಘಾತ: WTC ಫೈನಲ್ ಸೇರಿ IPLನಿಂದಲೂ ಹೊರಬಿದ್ದ ಭಾರತದ ಈ ಸ್ಟಾರ್ ಆಟಗಾರ!

Shreyas Iyer Out From IPL and WTC: ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಅನ್ನು ಸಹ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ತಮ್ಮ ಲೇಖನದಲ್ಲಿ ಹೇಳಿಕೊಂಡಿದೆ.

Written by - Bhavishya Shetty | Last Updated : Mar 22, 2023, 06:03 PM IST
    • ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ IPL 2023 ರಿಂದ ಹೊರಗುಳಿದಿದ್ದಾರೆ.
    • ಶಸ್ತ್ರಚಿಕಿತ್ಸೆಯಿಂದಾಗಿ ಅಯ್ಯರ್ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
    • ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಅನ್ನು ಸಹ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.
ಟೀಂ ಇಂಡಿಯಾ ಜೊತೆ KKRಗೂ ಭಾರೀ ಆಘಾತ: WTC ಫೈನಲ್ ಸೇರಿ IPLನಿಂದಲೂ ಹೊರಬಿದ್ದ ಭಾರತದ ಈ ಸ್ಟಾರ್ ಆಟಗಾರ! title=
Shreyas Iyer

Shreyas Iyer Out From IPL 2023 and WTC Final 2023: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಕ್ಕೆ ಮುಂಚಿತವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಭಾರೀ ಆಘಾತವನ್ನು ಎದುರಿಸಿದೆ. ಕೆಕೆಆರ್ ನಾಯಕ ಮತ್ತು ಟೀಂ ಇಂಡಿಯಾ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ IPL 2023 ರಿಂದ ಹೊರಗುಳಿದಿದ್ದಾರೆ. ಶಸ್ತ್ರಚಿಕಿತ್ಸೆಯಿಂದಾಗಿ ಅಯ್ಯರ್ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇದಲ್ಲದೆ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಅನ್ನು ಸಹ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ತಮ್ಮ ಲೇಖನದಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ: Rohit Sharma-Virat Kohli: ಬೇಕಾಗಿರೋದು ಜಸ್ಟ್ 2 ರನ್… ರೋಹಿತ್-ಕೊಹ್ಲಿ ಜೋಡಿ ನಿರ್ಮಿಸಲಿದೆ ಆ ವಿಶ್ವದಾಖಲೆ!

ಬೆನ್ನಿನ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಆಡಿರಲಿಲ್ಲ. ಆದರೆ, 2ನೇ ಮತ್ತು 3ನೇ ಟೆಸ್ಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಬೆನ್ನುನೋವಿನಿಂದಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಲಿಲ್ಲ. ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದರು. ಆದರೆ ಬೆನ್ನುನೋವಿನಿಂದಾಗಿ ಅವರು ಸರಣಿಯಿಂದ ಹೊರಬಿದ್ದರು. ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಪ್ರಸ್ತುತ ಆಡುತ್ತಿದ್ದಾರೆ.

ಶ್ರೇಯಸ್ ಅಯ್ಯರ್ ಸದ್ಯ ಬಿಸಿಸಿಐ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಶಸ್ತ್ರಚಿಕಿತ್ಸೆಯ ನಂತರ, ಅಯ್ಯರ್ ವಿಶ್ರಾಂತಿ ಪಡೆಯುವುದು ಅಗತ್ಯ. ಈ ಕ್ರಮದಲ್ಲಿ ನೋಡುವುದಾದರೆ ಐಪಿಎಲ್ 2023 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ರಿಂದ ಅಯ್ಯರ್ ದೂರ ಉಳಿಯಬೇಕಾಗುತ್ತದೆ. ಮೇಲಾಗಿ ಈ ವರ್ಷ ಭಾರತದ ನೆಲದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ರಿಂದ ದೂರವಾಗುವ ಸಾಧ್ಯತೆಗಳಿವೆ. ಅಯ್ಯರ್ ಶಸ್ತ್ರಚಿಕಿತ್ಸೆ ಕುರಿತು ಬಿಸಿಸಿಐ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: Virat Kohli Video: ಏನಾಯ್ತು ವಿರಾಟ್ ಕೊಹ್ಲಿಗೆ..? ಮೂರನೇ ಏಕದಿನ ಪಂದ್ಯದಲ್ಲಿ ವಿಚಿತ್ರ ವರ್ತನೆ! ವಿಡಿಯೋ ವೈರಲ್

ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 12.25 ಕೋಟಿ ರೂ. ನೀಡಿದ ಶ್ರೇಯಸ್ ಅಯ್ಯರ್ ಅವರನ್ನು ಖರೀದಿ ಮಾಡಿತ್ತು. ಜೊತೆಗೆ ನಾಯಕನನ್ನಾಗಿಯೂ ನೇಮಿಸಿತ್ತು. ಆದರೆ ಬೆನ್ನಿನ ಗಾಯದಿಂದಾಗಿ ಕೆಕೆಆರ್ ಹೊಸ ನಾಯಕನನ್ನು ನೇಮಿಸಬೇಕಾಗಿದೆ. ಆಂಡ್ರೆ ರಸೆಲ್ ಕೆಕೆಆರ್ ನಾಯಕತ್ವದ ರೇಸ್ ನಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ, ಅಯ್ಯರ್ ಬದಲಿಗೆ ರಾಷ್ಟ್ರೀಯ ಕ್ರಿಕೆಟ್ ಹೀರೋ ಸರ್ಫರಾಜ್ ಖಾನ್ ಅವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News