Team India: ಮಂಗಳವಾರದಂದು ಅಭ್ಯಾಸದ ವೇಳೆ ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಬಳಿಕ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಬುಧವಾರ ನೆಟ್ ಅಭ್ಯಾಸದ ವೇಳೆ ಗಾಯಗೊಂಡರು. ಹರ್ಷಲ್ ಪಟೇಲ್ ಎಸೆದ ಬಾಲ್ ಕೊಹ್ಲಿ ತೊಡೆಸಂದುಗೆ ಸಿಕ್ಕ ಪರಿಣಾಮ ಅವರು ಕೊಂಚ ಗಾಯಗೊಂಡರು. ಆದರೆ ಗಾಯಗೊಂಡ ಕೆಲವೇ ನಿಮಿಷಗಳಲ್ಲಿ ಕೊಹ್ಲಿ ಮತ್ತೆ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದುದನ್ನು ಕಂಡ ಅಭಿಮಾನಿಗಳು ಕೊಂಚ ನಿರಾಳವಾಗಿದ್ದಾರೆ.
ಇದನ್ನೂ ಓದಿ: World Cup 2022 ಫೈನಲ್ ನಲ್ಲಿ ಇಂಡೋ-ಪಾಕ್ ಮುಖಾಮುಖಿ! ಹೇಗೆ ಸಾಧ್ಯ? ಏನಿದು ಲೆಕ್ಕಾಚಾರ?
ಇದು ಐಚ್ಛಿಕ ಅಭ್ಯಾಸದ ಅವಧಿಯಾಗಿದ್ದು, ಇದರಲ್ಲಿ ಕೊಹ್ಲಿ ವಿವಿಧ ನೆಟ್ಗಳಲ್ಲಿ 40 ನಿಮಿಷಗಳ ಕಾಲ ಬ್ಯಾಟ್ ಮಾಡಿದರು. ಅವರು ಆರಂಭದಲ್ಲಿ ಸುಮಾರು 25 ನಿಮಿಷಗಳ ಕಾಲ ರಘು ಅವರಿಂದ ಥ್ರೋಡೌನ್ಗಳನ್ನು ತೆಗೆದುಕೊಂಡರು. ನಂತರ ಹರ್ಷಲ್ ಮತ್ತು ಇತರ ನೆಟ್ ಬೌಲರ್ಗಳ ವಿರುದ್ಧ ಅಭ್ಯಾಸ ಮಾಡಿದರು. ಹರ್ಷಲ್ ಅವರ ವೇಗದ ಎಸೆತವು ಕೊಹ್ಲಿ ಸೊಂಟದ ಒಳಭಾಗಕ್ಕೆ ತಗುಲಿತು, ಇದು ಅವರಿಗೆ ಸ್ವಲ್ಪ ಅನಾನುಕೂಲತೆಯನ್ನು ಉಂಟುಮಾಡಿತು.
ಇದಾದ ನಂತರ ತಂಡದ ಫಿಸಿಯೋ ಮತ್ತು ವೈದ್ಯರು ಅವರನ್ನು ಪರೀಕ್ಷಿಸಿದರು. ಇದಾದ ನಂತರ ಕೊಹ್ಲಿ ಕೆಲವೇ ನಿಮಿಷಗಳಲ್ಲಿ ಸ್ಪಾಟ್ ಜಂಪಿಂಗ್ ಮಾಡುತ್ತಿರುವುದು ಕಂಡುಬಂದಿತು. ಇದೇ ಸಮಯದಲ್ಲಿ, ಭಾರತೀಯ ನಾಯಕ ರೋಹಿತ್ ಶರ್ಮಾ ಮಾನಸಿಕ ಅಳವಡಿಕೆ ತರಬೇತುದಾರ ಪ್ಯಾಡಿ ಆಪ್ಟನ್ ಅವರೊಂದಿಗೆ ಚರ್ಚಿಸುತ್ತಿದ್ದರು. ರೋಹಿತ್ ಬಹುಶಃ ತಮ್ಮ ಬ್ಯಾಟಿಂಗ್ನಲ್ಲಿ ಬರುತ್ತಿರುವ ಮಾನಸಿಕ ತಡೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರು ಎಂದನಿಸಿತ್ತು.
ಇದನ್ನೂ ಓದಿ: T20 World Cup : ಸೆಮಿಫೈನಲ್ ಗೆದ್ದ ಬಳಿಕ ಭಾರತಕ್ಕೆ ಓಪನ್ ಚಾಲೆಂಜ್ ನೀಡಿದ ಪಾಕ್!
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಪ್ರವಾಸದಲ್ಲಿ ವೈಯಕ್ತಿಕ ಕುಕ್ ಜೊತೆ ಬಂದ ಮೊದಲ ಭಾರತೀಯ ಕ್ರಿಕೆಟಿಗ ಅಂದರೆ ಅದು ಪಾಂಡ್ಯ. ಪಾಂಡ್ಯ ಅವರ ಕುಕ್ ಆರಿಫ್ ಸಾಮಾನ್ಯವಾಗಿ ಭಾರತ ತಂಡ ನೆಲೆಸಿರುವ ನಗರಗಳಲ್ಲಿನ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುತ್ತಾರೆ. ಪಾಂಡ್ಯ ಅವರ ಅಗತ್ಯಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ತಯಾರಿಸಿ ತಂಡದ ಹೋಟೆಲ್ಗೆ ತಲುಪಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.