Shoaib Akhtar : ಹಾರ್ದಿಕ್ ಪಾಂಡ್ಯಗೆ ಪ್ರಮುಖ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟರ್..!

ಅಖ್ತರ್ ಟೀಂ ಇಂಡಿಯಾದ ಈ ಆಟಗಾರನಿಗೆ ಮಹತ್ವದ ಸಲಹೆಯನ್ನೂ ನೀಡಿದ್ದು, ಈ ಆಟಗಾರನಿಗೆ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಇವೆ ಎಂದು ಮಹತ್ವದ ಸಲಹೆ ನೀಡಿದ್ದಾರೆ.

Written by - Channabasava A Kashinakunti | Last Updated : Jul 20, 2022, 01:21 PM IST
  • ಈ ಆಟಗಾರನಿಗೆ ಮಹತ್ವದ ಸಲಹೆ ನೀಡಿದ ಅಖ್ತರ್!
  • ಸಂತಸ ವ್ಯಕ್ತಪಡಿಸಿದ ಶೋಯೆಬ್ ಅಖ್ತರ್
  • ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ
Shoaib Akhtar : ಹಾರ್ದಿಕ್ ಪಾಂಡ್ಯಗೆ ಪ್ರಮುಖ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟರ್..! title=

Shoaib Akhtar : ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಯಾವಾಗಲೂ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಂ ಇಂಡಿಯಾದ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಲೇ ಇರುತ್ತಾರೆ. ಅವರು ಇತ್ತೀಚೆಗೆ ಟೀಂ ಇಂಡಿಯಾದ ಸ್ಫೋಟಕ ಆಲ್‌ರೌಂಡರ್ ಬಗ್ಗೆ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ. ಅಖ್ತರ್ ಟೀಂ ಇಂಡಿಯಾದ ಈ ಆಟಗಾರನಿಗೆ ಮಹತ್ವದ ಸಲಹೆಯನ್ನೂ ನೀಡಿದ್ದು, ಈ ಆಟಗಾರನಿಗೆ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಇವೆ ಎಂದು ಮಹತ್ವದ ಸಲಹೆ ನೀಡಿದ್ದಾರೆ.

ಈ ಆಟಗಾರನಿಗೆ ಮಹತ್ವದ ಸಲಹೆ ನೀಡಿದ ಅಖ್ತರ್!

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಹೀರೋ ಆಗಿದ್ದ ಹಾರ್ದಿಕ್ ಪಾಂಡ್ಯಗೆ ಶೋಯೆಬ್ ಅಖ್ತರ್ ಮಹತ್ವದ ಸಲಹೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ ಮತ್ತು ಟೀಂ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Asian Games 2023 ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಏಶಿಯನ್ ಗೇಮ್ಸ್ 2023ರ ಆಯೋಜನೆಗೆ ಮುಹೂರ್ತ ಫಿಕ್ಸ್

ಸಂತಸ ವ್ಯಕ್ತಪಡಿಸಿದ ಶೋಯೆಬ್ ಅಖ್ತರ್

ಹಾರ್ದಿಕ್ ಪಾಂಡ್ಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, 'ಪಾಂಡ್ಯ ಬೌಲರ್ ಆಗಿ ಪ್ರದರ್ಶನ ನೀಡುತ್ತಿರುವುದು ನೋಡಲು ನನಗೆ ಸಂತೋಷವಾಗಿದೆ, ಏಕೆಂದರೆ ಅವರು ತಂಡಕ್ಕೆ ಸಮತೋಲನವನ್ನು ತರುತ್ತಾರೆ. ಅವರು ತಮ್ಮ ಫಿಟ್ನೆಸ್ ಬಗ್ಗೆ ಗಂಭೀರವಾಗಿರುವುದಕ್ಕೆ ನನಗೆ ಖುಷಿಯಾಗಿದೆ. ಕಡಿಮೆ ಫಿಟ್ನೆಸ್‌ನಿಂದಾಗಿ ತಂಡದಿಂದ ಬಹಳ ಕಾಲ ಹೊರಗಿದ್ದ ಅವರು ಆಘಾತಕ್ಕೊಳಗಾಗಿದ್ದರು ಎಂದರು.

ಹೀಗೆ ಮುಂದುವರೆದು ಮಾತನಾಡಿದ ಅವರು, 'ಅವರು ಉತ್ತಮ ಫೀಲ್ಡರ್ ಮತ್ತು ಬೌಲರ್. ವಾಸ್ತವವಾಗಿ, ಅವರು ವೇಗದ ಬೌಲರ್ ಆಯ್ಕೆಯಾಗಿದ್ದಾರೆ. ಅವರು ಉಳಿದ ಬೌಲರ್‌ಗಳಿಗಿಂತ ಬಿನ್ನವಾಗಿದ್ದರೆ. ಪಾಂಡ್ಯಗೆ ಆಟದ ಮೇಲೆ ಕೇಂದ್ರೀಕರಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ ಎಂದರು.

ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಆಟ ಪ್ರದರ್ಶಿಸಿದರು. ಹಾರ್ದಿಕ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದರು. ಈ ಸರಣಿಯಲ್ಲಿ ಅವರು 3 ಪಂದ್ಯಗಳಲ್ಲಿ 100 ರನ್ ಗಳಿಸಿ 6 ವಿಕೆಟ್ ಪಡೆದರು. ಸರಣಿಯ ಕೊನೆಯ ಪಂದ್ಯದಲ್ಲಿ ಅವರು 55 ಎಸೆತಗಳಲ್ಲಿ 71 ರನ್ ಗಳಿಸಿದ್ದರು. ಹಾರ್ದಿಕ್ ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳನ್ನು ಬಾರಿಸಿದರು. ಏಳು ಓವರ್‌ಗಳ ಬೌಲಿಂಗ್‌ನಲ್ಲಿ ಅವರು 24 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. 

ಇದನ್ನೂ ಓದಿ : Team India: ಈ 3 ಆಟಗಾರರ ಬೆನ್ನುಬಿದ್ದ ಆಯ್ಕೆಗಾರರು, ಈಗ ನಿವೃತ್ತಿಯೇ ಕೊನೆಯ ದಾರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News