ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ನಾಯಕ - ಶಿಖರ್ ಧವನ್ ಅವರನ್ನು ಶೀಘ್ರದಲ್ಲೇ ಟೀಮ್ ಇಂಡಿಯಾದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಭಾರತದ ಮಾಜಿ ಆಟಗಾರ ಸಾಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಮುಂಗಡ ಟಿಕೆಟ್ ಬುಕಿಂಗ್‌ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್‌ಡೇಟ್
ಧವನ್ ಏಕದಿನ ಪಂದ್ಯಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಟಿ20ಐ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಸಬಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತ ಟಿ20 ತಂಡದಲ್ಲಿ ಹಲವಾರು ಯುವ ಆಟಗಾರರಿದ್ದಾರೆ ಮತ್ತು ಆಯ್ಕೆದಾರರು ಅವರನ್ನು ನೋಡುತ್ತಿದ್ದಾರೆ ಹೊರತು ಧವನ್ ಕಡೆಗೆ ಅಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: Rashmika Mandanna: ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಕರ್ನಾಟಕದ ಸಂಸದೆ ಆಗ್ತಾರಂತೆ!
T20 ಸ್ವರೂಪ ವಿಭಿನ್ನವಾಗಿದೆ; ಟಿ20 ಕ್ರಿಕೆಟ್‌ನಲ್ಲಿ ಬೇಡಿಕೆಗಳು ವಿಭಿನ್ನವಾಗಿವೆ.ಅಲ್ಲಿ, ಪ್ರಸ್ತುತ ನಾವು ನೋಡುತ್ತಿರುವ ಪ್ರತಿಭಾವಂತ ಆಟಗಾರರ ಸಂಖ್ಯೆ, ಆಯ್ಕೆದಾರರ ಚಿಂತನೆಯು ಶಿಖರ್ ಧವನ್ ಕಡೆಗೆ ಇದೆ ಎಂದು ನಾನು ಭಾವಿಸುವುದಿಲ್ಲ, ”ಎಂದು ಕರೀಮ್ ಇಂಡಿಯಾ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ಅವರ ಸ್ಥಾನ ಖಚಿತವಾಗಿದೆ, ಅವರು ಟೀಮ್ ಇಂಡಿಯಾಗೆ ಅಗತ್ಯವಾಗಿರುವ ಆರಂಭಿಕ ಬ್ಯಾಟ್ಸಮನ್ ಆಗಿದ್ದಾರೆ.ಅದರಲ್ಲೂ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅದ್ಭುತ ಸಂಯೋಜನೆಯಾಗಿದೆ ಎಂದು ಕರೀಮ್ ಹೇಳಿದ್ದಾರೆ. "ಅವರು ಏಕದಿನ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.