ಏಕದಿನ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾದ 4ನೇ ಕ್ರಮಾಂಕಕ್ಕೆ ಈ ಆಟಗಾರ ಫಿಕ್ಸ್!

Team India number 4 Batting: ಭಾರತ ಏಕದಿನ ತಂಡದಲ್ಲಿ ನಂಬರ್-4 ಬ್ಯಾಟಿಂಗ್ ಸ್ಥಾನವು ಬಹಳ ಸಮಯದಿಂದ ಚರ್ಚೆಯ ವಿಷಯವಾಗಿ ಉಳಿದಿದೆ. ಆದರೆ ಇದೀಗ ಆ ಸ್ಥಾನಕ್ಕೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌’ನ ಆಯ್ಕೆಯಾಗುವ ಸಾಧ್ಯತೆ ಇದೆ.

Written by - Bhavishya Shetty | Last Updated : Feb 19, 2024, 01:40 PM IST
    • ರಾಜ್‌ಕೋಟ್‌’ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯ
    • ಸರ್ಫರಾಜ್ ಖಾನ್ ತಮ್ಮ ಸ್ಫೋಟಕ ಬ್ಯಾಟಿಂಗ್‌’ನ ಟ್ರೇಲರ್ ಅನ್ನು ತೋರಿಸಿದ್ದಾರೆ
    • ನಂಬರ್-4 ಬ್ಯಾಟಿಂಗ್ ಸ್ಥಾನವು ಬಹಳ ಸಮಯದಿಂದ ಚರ್ಚೆಯ ವಿಷಯವಾಗಿ ಉಳಿದಿದೆ
ಏಕದಿನ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾದ 4ನೇ ಕ್ರಮಾಂಕಕ್ಕೆ ಈ ಆಟಗಾರ ಫಿಕ್ಸ್!  title=
sarfaraz khan

Team India number 4 Batting: ರಾಜ್‌ಕೋಟ್‌’ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ತಮ್ಮ ಸ್ಫೋಟಕ ಬ್ಯಾಟಿಂಗ್‌’ನ ಟ್ರೇಲರ್ ಅನ್ನು ತೋರಿಸಿದ್ದಾರೆ. ಟೆಸ್ಟ್‌’ನ ಎರಡೂ ಇನ್ನಿಂಗ್ಸ್‌’ಗಳಲ್ಲಿ ಅರ್ಧಶತಕ ಗಳಿಸಿದ ಸರ್ಫರಾಜ್ ಖಾನ್, ಮೊದಲ ಇನ್ನಿಂಗ್ಸ್‌’ನಲ್ಲಿ 62 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌’ನಲ್ಲಿ ಅಜೇಯ 68 ರನ್‌ ತ್ವರಿತ ಇನ್ನಿಂಗ್ಸ್ ಆಡಿದ್ದಾರೆ. ಎರಡನೇ ಇನ್ನಿಂಗ್ಸ್‌’ನಲ್ಲಿ ಸರ್ಫರಾಜ್ ಖಾನ್ ಐದನೇ ವಿಕೆಟ್‌’ಗೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ 172 ರನ್‌’ಗಳ ಮುರಿಯದ ಜೊತೆಯಾಟವನ್ನು ಆಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಿಂದ ಬುಮ್ರಾ ಹೊರಕ್ಕೆ! ತಂಡದಲ್ಲಿ ಈ ಫಾಸ್ಟ್ ಬೌಲರ್ ಸ್ಥಾನ ತುಂಬುವವರು ಯಾರು ? 

ಭಾರತ ಏಕದಿನ ತಂಡದಲ್ಲಿ ನಂಬರ್-4 ಬ್ಯಾಟಿಂಗ್ ಸ್ಥಾನವು ಬಹಳ ಸಮಯದಿಂದ ಚರ್ಚೆಯ ವಿಷಯವಾಗಿ ಉಳಿದಿದೆ. ಆದರೆ ಇದೀಗ ಆ ಸ್ಥಾನಕ್ಕೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌’ನ ಆಯ್ಕೆಯಾಗುವ ಸಾಧ್ಯತೆ ಇದೆ. ಅವರೇ ಸರ್ಫರಾಜ್ ಖಾನ್. ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾಕ್ಕೆ ದೊಡ್ಡ ಕೊಡುಗೆ ನೀಡುವ ಸಾಮಾರ್ಥ್ಯ ಇವರಿಗಿದೆ.

ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಪ್ರಸ್ತುತ ಸ್ಪಿನ್ನರ್‌’ಗಳು ಮತ್ತು ವೇಗದ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಕ್ರಿಕೆಟ್ ಅನ್ನು ಹೇಗೆ ಆಡಬೇಕೆಂದು ಸರ್ಫರಾಜ್ ಖಾನ್ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಬೌಂಡರಿಗಳ ಮೂಲಕ ರನ್ ಗಳಿಸುವುದರಲ್ಲಿ ನಿಪುಣರಾಗಿರುವ ಸರ್ಫರಾಜ್ ಖಾನ್, ಲಿಸ್ಟ್ ಎ ಪಂದ್ಯಗಳಲ್ಲಿ 34.94 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಕೂಡ ಸಿಡಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 117 ರನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News