RCB ಫ್ಯಾನ್ಸ್‌ಗೆ ಬಿಗ್‌ ಶಾಕ್‌, ಈ ಇಬ್ಬರು ಅನುಭವಿಗಳನ್ನು ತಂಡದಿಂದ ಕೈಬಿಡಲು ನಿರ್ಧಾರ!

Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಈಗಾಗಲೇ ಐಪಿಎಲ್ 2024 ಗಾಗಿ ತಯಾರಿ ಆರಂಭಿಸಿದೆ. RCB ತನ್ನ ತಂಡದಿಂದ 2 ಅನುಭವಿಗಳನ್ನು ಕೈಬಿಡಲಿದೆ.  

Written by - Chetana Devarmani | Last Updated : Jul 17, 2023, 07:49 PM IST
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
  • ಐಪಿಎಲ್ 2024 ಗಾಗಿ ತಯಾರಿ ಆರಂಭಿಸಿದ ಆರ್‌ಸಿಬಿ
  • ಈ ಇಬ್ಬರು ಅನುಭವಿಗಳನ್ನು ಕೈಬಿಡಲು ನಿರ್ಧಾರ!
RCB ಫ್ಯಾನ್ಸ್‌ಗೆ ಬಿಗ್‌ ಶಾಕ್‌, ಈ ಇಬ್ಬರು ಅನುಭವಿಗಳನ್ನು ತಂಡದಿಂದ ಕೈಬಿಡಲು ನಿರ್ಧಾರ!   title=
RCB

IPL 2024, Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ನಲ್ಲಿ ಇನ್ನೂ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಐಪಿಎಲ್ 2024ಕ್ಕೆ ತಯಾರಿ ಆರಂಭಿಸಿದೆ. ವರದಿಗಳ ಪ್ರಕಾರ, RCB ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರ ಒಪ್ಪಂದಗಳನ್ನು ಫ್ರಾಂಚೈಸಿ ಪರಿಶೀಲಿಸುತ್ತಿದೆ. ಪಂದ್ಯಾವಳಿಯ ಕೊನೆಯ ಸೀಸನ್‌ನಲ್ಲಿ RCB ತಂಡವು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರೂ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫ್ರಾಂಚೈಸಿ ಈಗ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. 

RCB ತಂಡ ಈ ದೊಡ್ಡ ಹೆಜ್ಜೆ ಇಡಲಿದೆ

ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಕೋಚ್ ಸಂಜಯ್ ಬಂಗಾರ್ ಅವರ ಒಪ್ಪಂದವನ್ನು RCB ನವೀಕರಿಸಿಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಕಾರ್ಯಕ್ಷಮತೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆರ್‌ಸಿಬಿ ಸೂಚಿಸಿದೆ. ಆರ್‌ಸಿಬಿ ಜೊತೆಗಿನ ಅವರ ಒಪ್ಪಂದ ಇನ್ನೂ ಕೊನೆಯಾಗಿಲ್ಲ. ತಂಡವು ಇನ್ನೂ ಪರಿಶೀಲನೆ ಪ್ರಕ್ರಿಯೆಯಲ್ಲಿದೆ. ಯಾವುದೇ ಹೊಸ ಮಾಹಿತಿ ಇದ್ದರೆ ನಾವು ನಿಮಗೆ ತಿಳಿಸುತ್ತೇವೆ ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ. ಹೆಸ್ಸನ್ 2019 ರಲ್ಲಿ ಫ್ರಾಂಚೈಸ್‌ನೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಐಪಿಎಲ್ 2022 ರ ಮೊದಲು ವೈಯಕ್ತಿಕ ಕಾರಣಗಳಿಂದ ಸೈಮನ್ ಹಿಂದೆ ಸರಿದ ನಂತರ ಬಂಗಾರ್ ಅವರಿಗೆ ಜವಾಬ್ದಾರಿಯನ್ನು ನೀಡಲಾಯಿತು.

ಇದನ್ನೂ ಓದಿ: Smriti Mandana: ಕ್ರಿಕೆಟ್ ಲೋಕದ ಕ್ರಶ್ ಸ್ಮೃತಿ ಮಂದಾನಾಗೆ ಹುಟ್ಟುಹಬ್ಬದ ಸಂಭ್ರಮ

ಟೀಂ ಇಂಡಿಯಾ ಕೋಚ್ ಆಗಿದ್ದ ಸಂಜಯ್ ಬಂಗಾರ್ 

ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಬಂಗಾರ್ 2014 ರಿಂದ 2019 ರವರೆಗೆ ಭಾರತೀಯ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಆದರೆ 2019 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ, ಸಂಜಯ್ ಬಂಗಾರ್ ಬದಲಿಗೆ ವಿಕ್ರಮ್ ರಾಥೋಡ್ ಅವರನ್ನು ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಯಿತು. ಸಂಜಯ್ ಬಂಗಾರ್ ಅವರು 2001 ಮತ್ತು 2004 ರ ನಡುವೆ ಭಾರತಕ್ಕಾಗಿ 12 ಟೆಸ್ಟ್ ಮತ್ತು 15 ODI ಪಂದ್ಯಗಳನ್ನು ಆಡಿದ್ದಾರೆ. ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ RCB ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಆಪ್ತರು.

ಲಕ್ನೋ ಸೂಪರ್ ಜೈಂಟ್ಸ್  ಕೋಚ್ ಕೂಡ ಚೇಂಜ್‌ 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯ ಕೋಚ್ ಆಗಿ ವಿದೇಶಿಯರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಭಾರತೀಯರ ಮೇಲೆ ಬೆಟ್ಟಿಂಗ್ ನಡೆಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಸ್ತುತ ಬೌಲಿಂಗ್ ಕೋಚ್ ಆಡಮ್ ಗ್ರಿಫಿತ್ ಅವರನ್ನು ತೆಗೆದುಹಾಕಲು ಬಯಸುತ್ತದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಐಪಿಎಲ್ ತಂಡಗಳು ಈಗಾಗಲೇ ತಮ್ಮ ಕೋಚಿಂಗ್ ಸೆಟಪ್‌ನಲ್ಲಿ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿವೆ ಎಂದು ಹೇಳಲಾಗಿದೆ. ಇತ್ತೀಚೆಗೆ, ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಹುದ್ದೆಯಿಂದ ಆಂಡಿ ಫ್ಲವರ್ ಅವರನ್ನು ತೆಗೆದುಹಾಕಿತು ಮತ್ತು ಆಸ್ಟ್ರೇಲಿಯಾದ ಮಾಜಿ ಓಪನರ್ ಜಸ್ಟಿನ್ ಲ್ಯಾಂಗರ್ ಅವರಿಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಿದೆ.

ಇದನ್ನೂ ಓದಿ: 15 ದಿನದಲ್ಲಿ 3 ಬಾರಿ ಕಾದಾಡಲಿದೆ ಭಾರತ-ಪಾಕಿಸ್ತಾನ: ಎಲ್ಲಿ? ಯಾವಾಗ..? ಏಷ್ಯಾಕಪ್ 2023 ವೇಳಾಪಟ್ಟಿಯಲ್ಲಿ ಬಹಿರಂಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News