Rohit Sharma: ODI ನಾಯಕನಾದ ನಂತರ ರೋಹಿತ್ ಮೊದಲ ಪ್ರತಿಕ್ರಿಯೆ, ಟೀಕಾಕಾರರಿಗೆ ಪ್ರತ್ಯುತ್ತರ

Rohit Sharma Captaincy: ಟೀಂ ಇಂಡಿಯಾದ ಸೀಮಿತ ಓವರ್‌ಗಳ ನಾಯಕನಾದ ನಂತರ, ರೋಹಿತ್ ಶರ್ಮಾ ತನ್ನ ಗುರಿಯನ್ನು ಸಾಧಿಸುವುದು ನನ್ನ ಗುರಿಯಾಗಿದೆ. ನಾನು ಜನರ ಮಾತಿಗೆ ಹೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

Written by - Yashaswini V | Last Updated : Dec 13, 2021, 07:25 AM IST
  • ನಾಯಕತ್ವದ ಬಗ್ಗೆ ರೋಹಿತ್ ಮೊದಲ ಹೇಳಿಕೆ
  • ನಾಯಕ ರೋಹಿತ್ ಶರ್ಮಾ ಬಹಳ ಮುಖ್ಯವಾದ ವಿಷಯವನ್ನು ಹೇಳಿದ್ದಾರೆ
  • ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ
Rohit Sharma: ODI ನಾಯಕನಾದ ನಂತರ ರೋಹಿತ್ ಮೊದಲ ಪ್ರತಿಕ್ರಿಯೆ, ಟೀಕಾಕಾರರಿಗೆ ಪ್ರತ್ಯುತ್ತರ title=
Rohit Sharma's first reaction after becoming ODI captain

Rohit Sharma Captaincy: ಭಾರತ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಬಿಸಿಸಿಐನ ಈ ನಿರ್ಧಾರ ಸರಿಯಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಆಭಿಮಾನಿಗಳು ಬಿಸಿಸಿಐ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ಬಗ್ಗೆ ರೋಹಿತ್ ಮೊದಲ ಪ್ರತಿಕ್ರಿಯೆ:
ಭಾರತ ಏಕದಿನ ತಂಡದ ನಾಯಕನಾದ ನಂತರ ಮೊದಲ ಬಾರಿಗೆ ರೋಹಿತ್ ಶರ್ಮಾ (Rohit Sharma ODI captaincy) ಹೇಳಿಕೆ ನೀಡಿದ್ದಾರೆ. ವಿಶೇಷ ಸಂದರ್ಶನವೊಂದರಲ್ಲಿ ಅವರು ಬಿಸಿಸಿಐಗೆ ಬಹಿರಂಗವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಇದನ್ನು ಮಂಡಳಿಯು ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ-   Harbhajan Singh tattoo:ಎದೆಯ ಮೇಲೆ ರಜನಿಕಾಂತ್ ಹಚ್ಚೆ ಹಾಕಿಸಿಕೊಂಡ ಹರ್ಭಜನ್ ಸಿಂಗ್

ಒಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ ರೋಹಿತ್ ಶರ್ಮಾ:
ಜನರು ಹೊರಗೆ ಏನು ಹೇಳುತ್ತಿದ್ದಾರೆಂಬುದನ್ನುಕ್ಕೆ ನಾನು ಹೆದರುವುದಿಲ್ಲ. ತಂಡದ ಸಂಪೂರ್ಣ ಗಮನವು ತಮ್ಮ ಗುರಿಗಳನ್ನು ಸಾಧಿಸುವುದರ ಮೇಲೆ ಇರಬೇಕು. ಇದಕ್ಕಾಗಿ ಆಟಗಾರರ ನಡುವೆ ಬಲವಾದ ಬಾಂಧವ್ಯವನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು 'ಹಿಟ್‌ಮ್ಯಾನ್'  ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಗುರಿಯತ್ತ ಗಮನ ಹರಿಸುವುದು ಮುಖ್ಯ:
'ಟೀಮ್ ಇಂಡಿಯಾ (Team India) ಪರ ಕ್ರಿಕೆಟ್ ಆಡುವಾಗ ನಿಮ್ಮ ಮೇಲೆ ಯಾವಾಗಲೂ ಒತ್ತಡವಿರುತ್ತದೆ. ಜನರು ನಿಮ್ಮ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕವಾಗಿ ಮಾತನಾಡುತ್ತಾರೆ. ವೈಯಕ್ತಿಕವಾಗಿ ಕ್ರಿಕೆಟಿಗರಾಗಿರುವುದರಿಂದ ನಿಮ್ಮ ಕೆಲಸದ ಮೇಲೆ ಗಮನ ಹರಿಸುವುದು ಹೆಚ್ಚು ಮುಖ್ಯ. ಜನರು ಏನು ಹೇಳುತ್ತಾರೆಂದು ಅದರ ಬಗ್ಗೆ ಗಮನ ಕೇಂದ್ರೀಕರಿಸುವುದು ಅನಿವಾರ್ಯವಲ್ಲ. ಜನರು ಏನು ಮಾತನಾಡುತ್ತಿದ್ದಾರೆ ಎಂಬುದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಈ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ ಈಗ ಹೇಳುತ್ತಿದ್ದೇನೆ. ತಂಡಕ್ಕೂ ಕೂಡ ಇದೇ ಸಂದೇಶ ನೀಡಲು ಇಚ್ಚಿಸುತ್ತೇನೆ. ಗುರಿಯತ್ತ ನಮ್ಮ ಗಮನ ಕೆಂದ್ರೀಕರಿಸುವುದು ಅತ್ಯಗತ್ಯ ಎಂದು ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ-  IPL 2022 Mega Auction : ಕೆಎಲ್ ರಾಹುಲ್, ರಶೀದ್ ಖಾನ್ ಗೆ ಸಹಿ ಮಾಡಿಲ್ಲ ಲಕ್ನೋ, ಅಹಮದಾಬಾದ್ ಫ್ರಾಂಚೈಸಿಗಳು : ಯಾಕೆ? 

ಜನರು ಏನು ಹೇಳಿದರೂ ಪರವಾಗಿಲ್ಲ:
ನಾವು ಉನ್ನತ ಮಟ್ಟದ ಪಂದ್ಯಾವಳಿಗಳನ್ನು ಆಡಿದಾಗ ಹಲವು ರೀತಿಯ ವಿಷಯಗಳು ಎದುರಾಗುತ್ತವೆ ಎಂಬುದನ್ನು ತಂಡವು ಅರ್ಥಮಾಡಿಕೊಳ್ಳಬೇಕು. ಆದರೆ ನಾವು ಯಾವಾಗಲೂ ನಮ್ಮ ಕೈಯಲ್ಲಿ ಏನಿದೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು. ನಮಗೆ ತಿಳಿದಿರುವ ರೀತಿಯಲ್ಲಿ ಆಡುವುದು ಮತ್ತು ಪಂದ್ಯಗಳನ್ನು ಗೆಲ್ಲುವುದು ನಮ್ಮ ಗುರಿ. ಜನರು ಏನು ಹೇಳಿದರೂ ಪರವಾಗಿಲ್ಲ. ಹೊರಗೆ ಏನೇ ನಡೆದರೂ ನಮಗೆ ಉಪಯೋಗವಿಲ್ಲ. ನಾವು ಪರಸ್ಪರರ ಬಗ್ಗೆ ಏನು ಯೋಚಿಸುತ್ತೇವೆ ಎಂಬುದು ನಮಗೆ ಮುಖ್ಯವಾಗಿದೆ. ನಾವು ಆಟಗಾರರ ನಡುವೆ ಬಲವಾದ ಸಂಬಂಧವನ್ನು ನಿರ್ಮಿಸಬೇಕಾಗಿದೆ, ಇದು ಗುರಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ಇದಕ್ಕೆ ರಾಹುಲ್ ಭಾಯ್ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News