Rohit Sharma: “ಬಹಳಷ್ಟು ತಪ್ಪಾಗಿದೆ...” ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿದೆದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ!

Ritika Sajde on Mumbai Indians Captaincy: ತಂಡದ ಕೋಚ್ ಮಾರ್ಕ್ ಬೌಚರ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌’ನಲ್ಲಿ ನಾಯಕತ್ವದಲ್ಲಿನ ಈ ದೊಡ್ಡ ಬದಲಾವಣೆಯ ಕುರಿತು ಮಾತನಾಡುವಾಗ ಸಮರ್ಥನೆಯನ್ನು ನೀಡಿದ್ದರು. ಬೌಚರ್ ಅವರ ಪಾಡ್‌ ಕಾಸ್ಟ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು.

Written by - Bhavishya Shetty | Last Updated : Feb 6, 2024, 06:24 PM IST
    • ನಾಯಕತ್ವ ಬದಲಾವಣೆಯ ಕುರಿತು ಮಾತನಾಡಿದ ಕೋಚ್ ಮಾರ್ಕ್ ಬೌಚರ್
    • ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಇನ್ಸ್ಟಾಗ್ರಾಮ್ನಲ್ಲಿ ಕಾಮೆಂಟ್
    • ರಿಕಿ ಪಾಂಟಿಂಗ್ ನಂತರ ರೋಹಿತ್‌’ಗೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ನೀಡಲಾಯಿತು
Rohit Sharma: “ಬಹಳಷ್ಟು ತಪ್ಪಾಗಿದೆ...” ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿದೆದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ!  title=
Ritika Sajdeh Comment on Mumbai Indians

Ritika Sajde on Mumbai Indians Captaincy: ಐಪಿಎಲ್ 2024ರ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ದೊಡ್ಡ ಬದಲಾವಣೆಯನ್ನು ಮಾಡಿ ಸದ್ಯ ಪೇಚಿಗೆ ಸಿಲುಕಿದಂತಿದೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿ, ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ: Viral Video: ಪಾರ್ಕ್ನಲ್ಲಿ ಕಾಣಿಸಿಕೊಂಡ ಭೂತ! ನೋಡಿ ದಂಗಾದ ಪೊಲೀಸರು, ವಿಡಿಯೋ ವೈರಲ್!

ತಂಡದ ಕೋಚ್ ಮಾರ್ಕ್ ಬೌಚರ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌’ನಲ್ಲಿ ನಾಯಕತ್ವದಲ್ಲಿನ ಈ ದೊಡ್ಡ ಬದಲಾವಣೆಯ ಕುರಿತು ಮಾತನಾಡುವಾಗ ಸಮರ್ಥನೆಯನ್ನು ನೀಡಿದ್ದರು. ಬೌಚರ್ ಅವರ ಪಾಡ್‌ ಕಾಸ್ಟ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ನಾಯಕತ್ವದ ನಿರ್ಧಾರವನ್ನು 'ಕ್ರಿಕೆಟಿಂಗ್ ನಿರ್ಧಾರ' ಎಂದು ಬಣ್ಣಿಸಿದ್ದರು. ಆದರೆ ಇದೀಗ ಈ ಬಗ್ಗೆ ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಪ್ರತಿಕ್ರಿಯಿಸಿದ್ದಾರೆ.

ಪಾಡ್‌ ಕ್ಯಾಸ್ಟ್‌’ನಲ್ಲಿ ಬೌಚರ್ ಮಾತನಾಡಿ, 'ಇದು ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನನಗೆ ಇದು ಪರಿವರ್ತನೆಯ ಹಂತವೆಂದೆನಿಸುತ್ತದೆ. ಭಾರತದಲ್ಲಿ ಅನೇಕ ಜನರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ, ಜನರು ತುಂಬಾ ಭಾವುಕರಾಗುತ್ತಾರೆ. ಇದು ಕೇವಲ ಕ್ರಿಕೆಟ್ ನಿರ್ಧಾರ. ಇದು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ರೋಹಿತ್‌’ನಲ್ಲಿನ ಅತ್ಯುತ್ತಮತೆಯನ್ನು ಹೊರತರುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕೆ ಬಂದು ಕೆಲವು ಉತ್ತಮ ರನ್ ಗಳಿಸಲಿ” ಎಂದು ಹೇಳಿದ್ದಾರೆ.

ರಿತಿಕಾ ಕಮೆಂಟ್ ಹೀಗಿದೆ…

ಬೌಚರ್ ಅವರ ಸಂದರ್ಶನವು ಅಂತರ್ಜಾಲದಲ್ಲಿ ವೈರಲ್ ಆದ ಬೆನ್ನಲ್ಲೇ, ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕಾಮೆಂಟ್ ಮಾಡಿದ್ದಾರೆ. ‘ಸ್ವಲ್ಪ ಅಲ್ಲ, ಬಹಳಷ್ಟು ತಪ್ಪಾಗಿದೆ...’ ಎಂದು ಬರೆದಿದ್ದಾರೆ.

2013 ರಲ್ಲಿ ರಿಕಿ ಪಾಂಟಿಂಗ್ ನಂತರ ರೋಹಿತ್‌’ಗೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ನೀಡಲಾಯಿತು. ಅವರ ನಾಯಕತ್ವದಲ್ಲಿ ಮುಂಬೈ ತಂಡ 2013, 2015, 2017, 2019 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದೆ.

ಇದನ್ನೂ ಓದಿ: ಜನರ ಪ್ರಾಣಕ್ಕೆ ಅಪಾಯ ತರಲಿದೆ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗ! L&T ಗೆ PWD ಸೂಚನೆ

ಇನ್ನು ಹಾರ್ದಿಕ್ ಬಗ್ಗೆ ಮಾತನಾಡುವುದಾದರೆ, 2015 ರಲ್ಲಿ ಮುಂಬೈಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್, 2021 ರವರೆಗೆ ಸತತ 6 ಸೀಸನ್‌’ಗಳನ್ನು ಆಡಿದ್ದರು. ಅದಾದ ಬಳಿಕ 2022 ರಲ್ಲಿ, ಗುಜರಾತ್ ಟೈಟಾನ್ಸ್‌ ಪ್ರವೇಶಿಸಿ, ನಾಯಕತ್ವದ ಚೊಚ್ಚಲ ಟೂರ್ನಿಯಲ್ಲೇ ತಂಡವನ್ನು ಚಾಂಪಿಯನ್ ಮಾಡಿದರು. ಅಷ್ಟೇ ಅಲ್ಲದೆ, ಕಳೆದ ಋತುವಿನಲ್ಲಿ ರನ್ನರ್ ಅಪ್ ಕೂಡ ಆಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News