Team India : ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳಲಿದ್ದಾರೆ ಈ ಸ್ಪೋಟಕ ಬ್ಯಾಟ್ಸ್‌ಮನ್!

ಟಿ20 ಹಾಗೂ ಏಕದಿನ ಸರಣಿಗೂ ಮುನ್ನವೇ ತಂಡದ ಸ್ಪೋಟಕ ಬ್ಯಾಟ್ಸ್‌ಮನ್‌ ತಂಡ ಸೇರಿಕೊಳ್ಳಲಿದ್ದಾರೆ.

Written by - Channabasava A Kashinakunti | Last Updated : Jul 3, 2022, 06:13 PM IST
  • ಈ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ತಂಡಕ್ಕೆ ಎಂಟ್ರಿ
  • ಏಕದಿನ ಮತ್ತು ಟಿ20 ಸರಣಿ ಜವಾಬ್ದಾರಿ
  • ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
Team India : ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳಲಿದ್ದಾರೆ ಈ ಸ್ಪೋಟಕ ಬ್ಯಾಟ್ಸ್‌ಮನ್! title=

Team India Tour Of ENG : ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಪ್ರವಾಸವು ಟೆಸ್ಟ್ ಪಂದ್ಯದೊಂದಿಗೆ ಆರಂಭಗೊಂಡಿದೆ. ಹಾಗೆ, ಈ ಪ್ರವಾಸದಲ್ಲಿ ತಂಡವು ಟಿ 20 ಮತ್ತು ಏಕದಿನ ಸರಣಿಯನ್ನು ಸಹ ಆಡಬೇಕಾಗಿದೆ. ಈ ಮಹತ್ವದ ಪ್ರವಾಸದ ನಡುವೆ ಟೀಂ ಇಂಡಿಯಾದಿಂದ ಒಂದು ಬಿಗ್ ಗುಡ್ ನ್ಯೂಸ್ ಹೊರಬಿದ್ದಿದೆ. ಟಿ20 ಹಾಗೂ ಏಕದಿನ ಸರಣಿಗೂ ಮುನ್ನವೇ ತಂಡದ ಸ್ಪೋಟಕ ಬ್ಯಾಟ್ಸ್‌ಮನ್‌ ತಂಡ ಸೇರಿಕೊಳ್ಳಲಿದ್ದಾರೆ.

ಈ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ತಂಡಕ್ಕೆ ಎಂಟ್ರಿ!

ಇಂಗ್ಲೆಂಡ್ ಪ್ರವಾಸದ ಆರಂಭವು ಟೀಂ ಇಂಡಿಯಾಕ್ಕೆ ತುಂಬಾ ಕೆಟ್ಟದಾಗಿ ಕಂಡು ಬಂದಿತ್ತು. ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಆಯಿತು, ಹೀಗಾಗಿ ಅವರನ್ನ ತಂಡದಿಂದ ಹೊರಗಿಡಲಾಯಿತು. ಆದ್ರೆ, ಸಧ್ಯ ರೋಹಿತ್ ಶರ್ಮಾ  ಕರೋನಾ ರಿಪೋರ್ಟ್ ನೆಗೆಟಿವ್ ಬಂದಿದೆ ಎಂಬುವುದು ತಂಡಕ್ಕೆ ಸಿಹಿ ಸುದ್ದಿ. ಶೀಘ್ರದಲ್ಲೇ ರೋಹಿತ್ ಟೀಂಗೆ ಮರಳಲಿದ್ದಾರೆ. 

ಏಕದಿನ ಮತ್ತು ಟಿ20 ಸರಣಿ ಜವಾಬ್ದಾರಿ

ಈ ಎರಡೂ ಪ್ರಮುಖ ಸರಣಿಗಳಿಗೆ ಟೀಂ ಇಂಡಿಯಾ ಅಂತರ್ಗರರ ಲಿಸ್ಟ್ ಅನ್ನು ಇತ್ತೀಚೆಗೆ ಪ್ರಕಟಿಸಿದೆ. ಬಿಸಿಸಿಐ ಈಗಾಗಲೇ ಏಕದಿನ ಹಾಗೂ ಟಿ20 ಸರಣಿಗೆ ಹಿಟ್ ಮ್ಯಾನ್ ರೋಹಿತ್ ತಂಡಕ್ಕೆ ಸೇರಿಸಿಕೊಂಡಿದೆ. ರೋಹಿತ್ ಮರಳಿರುವುದು ತಂಡ ಶಕ್ತಿ ತುಂಬಿದೆ, ಏಕೆಂದರೆ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಈ ಮ್ಯಾಚ್ ನಿಂದ ಔಟ್ ಆಗಿದ್ದಾರೆ. 

ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್

1ನೇ ಟಿ20ಐ : ರೋಹಿತ್ ಶರ್ಮಾ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್, ವೆಂಕಟೇಶ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಸಿಂಗ್ ಮಲಿಕ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್.

2ನೇ ಮತ್ತು 3ನೇ ಟಿ20ಐ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪಿ ಬಿಶ್ನೋ ಪಟೇಲ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಅವೇಶ್ ಖಾನ್.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News