ಮುಂಬೈ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾರಂತೂ ಕಂಗೆಟ್ಟುಹೋಗಿದ್ದಾರೆ. ಮುಂಬೈ ಪಾಲಿಗೆ ವಿಜಯಲಕ್ಷ್ಮಿ ಪದೇ ಪದೇ ಕೈಕೊಡುತ್ತಿದ್ದು, ಆಟಗಾರರಿಗೆ ದೊಡ್ಡ ತಲೆನೋವಾಗಿದೆ. ಕಳೆದ ಆವೃತ್ತಿಯಲ್ಲಿ ಮುಂಬೈ ಚೆನ್ನಾಗಿ ಆಡಿದ್ದರೂ ರನ್‍ರೇಟ್ ಆಧಾರದ ಮೇಲೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಲೀಗ್ ಹಂತದಲ್ಲಿಯೇ ರೋಹಿತ್ ಪಡೆ ಗಂಟುಮೂಟೆ ಕಟ್ಟಿತ್ತು.
ಪ್ರಸಕ್ತ ಟೂರ್ನಿಯಲ್ಲಿ ಸತತ 8 ಸೋಲು ಕಾಣುವ ಮೂಲಕ ಮುಂಬೈ ಐಪಿಎಲ್ ಇತಿಹಾಸದಲ್ಲಿಯೇ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ. 5 ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದ ರೋಹಿತ್ ಪಡೆ ಸತತ ಸೋಲು ಕಾಣುತ್ತಿರುವುದು ಮುಂಬೈ ಅಭಿಮಾನಿಗಳಿಗೆ ದೊಡ್ಡ ನೋವನ್ನುಂಟುಮಾಡಿದೆ. ಇಂದು ಗೆಲ್ಲುತ್ತೆ, ನಾಳೆ ಗೆಲ್ಲುತ್ತೆ ಅಂತಾ ನಿರೀಕ್ಷೆಯಲ್ಲಿ ಮೈದಾನಕ್ಕೆ ಬರುವ ಹಾಗೂ ಪಂದ್ಯಗಳ ನೇರಪ್ರಸಾರ ವೀಕ್ಷಿಸುವ ಲಕ್ಷಾಂತರ ಅಭಿಮಾನಿಗಳಿಗೆ ಮುಂಬೈ ಗೆಲುವಿನ ಸಿಹಿ ನೀಡಲು ಸಾಧ‍್ಯವಾಗುತ್ತಿಲ್ಲ.
ಇದನ್ನೂ ಓದಿ: ಐಪಿಎಲ್ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್
ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠ ತಂಡವೆನಿಸಿಕೊಂಡಿದ್ದ ಮುಂಬೈ ತಂಡಕ್ಕೆ ಅದೃಷ್ಟ ಪದೇ ಪದೇ ಕೈಕೊಡುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಸತತ ವೈಫಲ್ಯ ಅನುಭವಿಸುತ್ತರುವ ಮುಂಬೈ ತಂಡದ ಮೇಲೆ ನಿರಾಸೆಯ ಕಾರ್ಮೋಡ ಕವಿದಿದೆ. ಸತತ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿರುವ ಹಿನ್ನೆಲೆ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್ ಸಂದೇಶ ಹಂಚಿಕೊಂಡಿರುವ ಹಿಟ್‍ಮ್ಯಾನ್, ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.
We haven’t put our best foot forward in this tournament but that happens,many sporting giants have gone through this phase but I love this team and it’s environment. Also want to appreciate our well wishers who’ve shown faith and undying loyalty to this team so far 💙@mipaltan
— Rohit Sharma (@ImRo45) April 25, 2022
‘ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಮ್ಮಿಂದ ಶ್ರೇಷ್ಠ ಪ್ರದರ್ಶನ ನೀಡಲು ಸಾಧ‍್ಯವಾಗಿಲ್ಲ. ಆದರೆ, ಕೆಲ ಬಾರಿ ಈ ರೀತಿ ಆಗುತ್ತದೆ. ಅನೇಕ ದೈತ್ಯ ತಂಡಗಳು ಈ ಬಾರಿ ಅದ್ಭುತ ಪ್ರದರ್ಶನ ನೀಡುತ್ತಿವೆ. ನಾನು ಮುಂಬೈ ತಂಡವನ್ನು ಮತ್ತು ಇಲ್ಲಿನ ವಾತಾವರಣವನ್ನು ತುಂಬಾ ಇಷ್ಟಪಡುತ್ತೇನೆ. ಇಲ್ಲಿವರೆಗೆ ಈ ತಂಡದ ಮೇಲೆ ನಂಬಿಕೆ ಹಾಗೂ ನಿಷ್ಠೆ ತೋರಿರುವ ನಮ್ಮ ಎಲ್ಲ ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ರೋಹಿತ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Krunal Pandya: ಕೃನಾಲ್ ಮೇಲೆ ಕೋಪಗೊಂಡ ಪೊಲಾರ್ಡ್: ಮಾಡಿದ್ದೇನು ನೋಡಿ
ಮುಂಬೈ ಐಪಿಎಲ್ ಇತಿಹಾಸಲ್ಲಿಯೇ ಆರಂಭಿಕ ಪಂದ್ಯಗಳಲ್ಲಿ ಸತತ 8 ಸೋಲು ಕಂಡ ಮೊದಲ ತಂಡವೆಂಬ ಅಪಖ್ಯಾತಿಗೆ ಗುರಿಯಾಗಿದೆ. ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಮುಖ್ಯ ಕಾರಣವೆಂದು ರೋಹಿತ್ ಶರ್ಮಾ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.