ರೋಹಿತ್ ಶರ್ಮಾಗೆ ಕೊಹ್ಲಿ ಸಿಡಿಸಿದ ಈ ಶತಕ ಫೇವರಿಟ್ ಅಂತೆ..!

ಶುಕ್ರವಾರದಿಂದ ಮೊಹಾಲಿಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಭಾರತ ಕ್ರಿಕೆಟ್ ತಂಡ ಸಿದ್ಧವಾಗಿದೆ.ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಹಲವು ಕಾರಣಗಳಿಗಾಗಿ ಮೊಹಾಲಿ ಟೆಸ್ಟ್ ವಿಶೇಷವಾಗಿದೆ.

Written by - Zee Kannada News Desk | Last Updated : Mar 3, 2022, 09:32 PM IST
  • ಶುಕ್ರವಾರದಿಂದ ಮೊಹಾಲಿಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಭಾರತ ಕ್ರಿಕೆಟ್ ತಂಡ ಸಿದ್ಧವಾಗಿದೆ.ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಹಲವು ಕಾರಣಗಳಿಗಾಗಿ ಮೊಹಾಲಿ ಟೆಸ್ಟ್ ವಿಶೇಷವಾಗಿದೆ.
 ರೋಹಿತ್ ಶರ್ಮಾಗೆ ಕೊಹ್ಲಿ ಸಿಡಿಸಿದ ಈ ಶತಕ ಫೇವರಿಟ್ ಅಂತೆ..! title=
Photo Courtesy: Twitter

ನವದೆಹಲಿ: ಶುಕ್ರವಾರದಿಂದ ಮೊಹಾಲಿಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಭಾರತ ಕ್ರಿಕೆಟ್ ತಂಡ ಸಿದ್ಧವಾಗಿದೆ.ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಹಲವು ಕಾರಣಗಳಿಗಾಗಿ ಮೊಹಾಲಿ ಟೆಸ್ಟ್ ವಿಶೇಷವಾಗಿದೆ.

ಇದನ್ನೂ ಓದಿ: Rohit Sharma : ರೋಹಿತ್ ನಾಯಕತ್ವಕ್ಕೆ ಅಚ್ಚರಿಗೊಂಡ ಇಡೀ ಕ್ರಿಕೆಟ್ ಜಗತ್ತು!

ಏಕೆಂದರೆ ಈ ಅವರು ಮೊಹಾಲಿಯಲ್ಲಿ 100 ನೇ ಟೆಸ್ಟ್ ಆಡಲಿದ್ದಾರೆ,ಆ ಮೂಲಕ ಕೆಲವೇ ಭಾರತೀಯ ಕ್ರಿಕೆಟ್ ಆಟಗಾರರು ಮಾಡಿರುವ ಸಾಧನೆಯ ಸಾಲಿಗೆ ಕೊಹ್ಲಿ ಸೇರ್ಪಡೆಯಾಗಲಿದ್ದಾರೆ.ಜೊತೆಗೆ ಈಗ ಅವರು ಟೆಸ್ಟ್ ಪಂದ್ಯದಲ್ಲಿ  8,000 ಟೆಸ್ಟ್ ರನ್ ಪೂರೈಸಲು ಕೇವಲ 38 ರನ್‌ಗಳು ಬಾಕಿ ಇವೆ.ಈ ಹಿನ್ನಲೆಯಲ್ಲಿ ಈಗ ವಿರಾಟ್ ಕೊಹ್ಲಿ ಸಿಡಿಸಿರುವ ಫೆವರಿಟ್ ಶತಕಗಳ ಬಗ್ಗೆ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಒಬ್ಬ ಬ್ಯಾಟ್ಸಮನ್ ಆಗಿ, ನಾನು 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಶತಕ ನೆನಪಿದೆ.ನಾವು ಆಡಿದ ಆ ಪಿಚ್ ಸವಾಲಿನದ್ದಾಗಿತ್ತು ಮತ್ತು ನಾವು ಡೇಲ್ ಸ್ಟೇನ್, ಮೋರ್ನೆ ಮೊರ್ಕೆಲ್, ವೆರ್ನಾನ್ ಫಿಲಾಂಡರ್ ಮತ್ತು ಜಾಕ್ವೆಸ್ ಕಾಲಿಸ್ ಅವರಂತಹ ಬೌಲರ್‌ಗಳನ್ನು ಎದುರಿಸಿದ್ದೇವೆ.ಇದು ನಿಜಕ್ಕೂ ಸುಲಭವಾಗಿರಲಿಲ್ಲ' ಎಂದು ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ ರಷ್ಯಾ

'ಇದು ಬೌನ್ಸಿ ಟ್ರ್ಯಾಕ್ ಆಗಿತ್ತು ಮತ್ತು ನಾವೆಲ್ಲರೂ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೆವು, ಆಗ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ನೂರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿದರು.ನನಗೆ ಆ ಶತಕ ಫೇವರಿಟ್ ಆಗಿದೆ. ನಂತರ 2018 ರಲ್ಲಿ ಗಳಿಸಿದ ಪರ್ತ್ ಶತಕವಿದೆ, ಆದರೆ 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ ಶತಕ ಪರ್ತ್ ಗಿಂತಲೂ ಶ್ರೇಷ್ಠ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News