Team India : ಶುಬ್‌ಮನ್ ಗಿಲ್ ದ್ವಿಶತಕದ ನಂತರ ರೋಹಿತ್ ಹಳೆಯ ಟ್ವೀಟ್ ಸಖತ್ ವೈರಲ್!

Shubman Gill : ಟೀಂ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಆಡುತ್ತಿದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ.

Written by - Channabasava A Kashinakunti | Last Updated : Jan 20, 2023, 05:44 PM IST
  • ದ್ವಿಶತಕ ಸಿಡಿಸಿದ ಶುಭಮನ್ ಗಿಲ್
  • ರೋಹಿತ್ ಹಳೆಯ ಟ್ವೀಟ್ ವೈರಲ್
  • ರೋಹಿತ್, ಸಚಿನ್ ಕ್ಲಬ್ ಸೇರಿದ ಗಿಲ್
Team India : ಶುಬ್‌ಮನ್ ಗಿಲ್ ದ್ವಿಶತಕದ ನಂತರ ರೋಹಿತ್ ಹಳೆಯ ಟ್ವೀಟ್ ಸಖತ್ ವೈರಲ್! title=

Rohit Sharma OLD Tweet on Shubman Gill : ಟೀಂ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಆಡುತ್ತಿದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 12 ರನ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಸಾಧಿಸಿದ್ದಾರೆ. ಈ ಮಧ್ಯೆ, ರೋಹಿತ್ ಹಳೆಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದ್ವಿಶತಕ ಸಿಡಿಸಿದ ಶುಭಮನ್ ಗಿಲ್

ಕಿರಿಯ ವಯಸ್ಸಿನಲ್ಲೇ ದ್ವಿಶತಕ ಬಾರಿಸಿ ಸ್ಟಾರ್ ಎನಿಸಿಕೊಂಡಿದ್ದ ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಶುಭಮನ್ ಗಿಲ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ 208 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಗಿಲ್ 149 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ಗಿಲ್ ಅವರ ಇನ್ನಿಂಗ್ಸ್‌ನಿಂದ ಭಾರತ 8 ವಿಕೆಟ್‌ಗೆ 349 ರನ್ ಗಳಿಸಿತು. ಇದಾದ ಬಳಿಕ ಪ್ರವಾಸಿ ತಂಡ 49.2 ಓವರ್‌ಗಳಲ್ಲಿ 337 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ರೋಹಿತ್ ಅವರ ಹಳೆಯ ಟ್ವೀಟ್ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ : Team India : ಅಮೋಘ ದಾಖಲೆ ಬರೆದ ಚೇತೇಶ್ವರ್ ಪೂಜಾರ, ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳಿಗೆ ಶುರುವಾಗಿದೆ ಭಯ!

ರೋಹಿತ್ ಹಳೆಯ ಟ್ವೀಟ್ ವೈರಲ್

ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರ ಹಳೆಯ ಟ್ವೀಟ್ ಈಗ ಸಖತ್ ವೈರಲ್ ಆಗಿದೆ. ಮೇ 1, 2020 ರಂದು, ರೋಹಿತ್ ಗಿಲ್ ಮಾಡಿದ ಟ್ವೀಟ್‌ಗೆ ಉತ್ತರಿಸಿದರು. ರೋಹಿತ್ ಅವರ ಜನ್ಮದಿನದಂದು ಗಿಲ್ ಟ್ವಿಟ್ಟರ್ ನಲ್ಲಿ, ಹಿಟ್‌ಮ್ಯಾನ್‌ಗಿಂತ ಉತ್ತಮವಾಗಿ ಯಾರೂ ಪುಲ್ ಶಾಟ್ ಹೊಡೆಯಲು ಸಾಧ್ಯವಿಲ್ಲ. ಜನ್ಮದಿನದ ಶುಭಾಶಯಗಳು.' ಬರೆದಿದ್ದರು. ಈ ಟ್ವೀಟ್ ಅನ್ನು ರಿಟ್ವಿಟ್ ಮಾಡಿ ರೋಹಿತ್, ಧನ್ಯವಾದಗಳು ಭವಿಷ್ಯ ಎಂದು ಉತ್ತರಿಸಿದ್ದರು. ಇದೀಗ ಈ ಎರಡು ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ರೋಹಿತ್, ಸಚಿನ್ ಕ್ಲಬ್ ಸೇರಿದ ಗಿಲ್

23ರ ಹರೆಯದ ಗಿಲ್ ಬುಧವಾರ ದಿಗ್ಗಜ ಸಚಿನ್, ರೋಹಿತ್ ಕ್ಲಬ್‌ಗೆ ಸೇರ್ಪಡೆಗೊಂಡರು. ಗಿಲ್ ಇಶಾನ್ ಕಿಶನ್ ಅವರ ದಾಖಲೆಯನ್ನು ಮುರಿದು, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಈ ಸಾಧನೆಯನ್ನು ಮೊದಲು ಸಾಧಿಸಿದ್ದು ಶ್ರೇಷ್ಠ ಸಚಿನ್ ತೆಂಡೂಲ್ಕರ್. ನಂತರ ರೋಹಿತ್ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 156 ಎಸೆತಗಳಲ್ಲಿ ದ್ವಿಶತಕ ಗಳಿಸಿದರು, ಇದು ಅವರ 3 ದ್ವಿಶತಕಗಳಲ್ಲಿ ಮೊದಲನೆಯದು. ಏಕದಿನದಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಆಗಿದ್ದಾರೆ.

ಇದನ್ನೂ ಓದಿ : IND vs NZ ಸರಣಿ ಮಧ್ಯ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ ಐಸಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News