Rohit Sharma Retirement: ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ನಿವೃತ್ತಿ!? ವಿಶ್ವಕಪ್ ಬಳಿಕ ಇವರೇ ಟೀಂ ಇಂಡಿಯಾ ಕ್ಯಾಪ್ಟನ್!

Rohit Sharma Retirement after World Cup 2023: ವಿಶ್ವಕಪ್ ಮೆಗಾ ಈವೆಂಟ್‌ನ ನಂತರ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕತ್ವದ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಏಕದಿನ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಟೆಸ್ಟ್ ತಂಡದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸುವುದರೊಂದಿಗೆ ಭಾರತವು ವಿಭಜನೆಯ ನಾಯಕತ್ವವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Jan 22, 2023, 04:13 PM IST
    • ರೋಹಿತ್ ಶರ್ಮಾ ಮೂರು ಸ್ವರೂಪಗಳಲ್ಲಿ ಒಂದು ಸ್ವರೂಪಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆ
    • ವಿಶ್ವಕಪ್ ನಂತರ ಒಂದು ಅಥವಾ ಎರಡು ಫಾರ್ಮ್ಯಾಟ್‌ಗಳಿಂದ ನಿವೃತ್ತರಾಗುತ್ತಾರೆ
    • ಬಿಸಿಸಿಐ ಈಗಾಗಲೇ ಉತ್ತರಾಧಿಕಾರ ಯೋಜನೆಯನ್ನು ರೂಪಿಸಲು ಭಾರೀ ಕಸರತ್ತು ನಡೆಸುತ್ತಿದೆ
Rohit Sharma Retirement: ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ನಿವೃತ್ತಿ!? ವಿಶ್ವಕಪ್ ಬಳಿಕ ಇವರೇ ಟೀಂ ಇಂಡಿಯಾ ಕ್ಯಾಪ್ಟನ್! title=
Rohit Sharma

Rohit Sharma Retirement after World Cup 2023: ಐಸಿಸಿ ಏಕದಿನ ವಿಶ್ವಕಪ್ 2023 ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ಸ್ವರೂಪಗಳಲ್ಲಿ ಒಂದು ಸ್ವರೂಪಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ. ರೋಹಿತ್ ಶರ್ಮಾ ವಿಶ್ವಕಪ್ ನಂತರ ಒಂದು ಅಥವಾ ಎರಡು ಫಾರ್ಮ್ಯಾಟ್‌ಗಳಿಂದ ನಿವೃತ್ತರಾಗುತ್ತಾರೆ ಎಂದು ಭಾರತೀಯ ಮಂಡಳಿಯಲ್ಲಿ ಕೆಲವರು ಅರ್ಥಮಾಡಿಕೊಂಡಿದ್ದು, ಹೀಗಾಗಿ, ಬಿಸಿಸಿಐ ಈಗಾಗಲೇ ಉತ್ತರಾಧಿಕಾರ ಯೋಜನೆಯನ್ನು ರೂಪಿಸಲು ಭಾರೀ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ: IND vs NZ : ಮೂರನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ!

ವಿಶ್ವಕಪ್ ಮೆಗಾ ಈವೆಂಟ್‌ನ ನಂತರ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕತ್ವದ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಏಕದಿನ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಟೆಸ್ಟ್ ತಂಡದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸುವುದರೊಂದಿಗೆ ಭಾರತವು ವಿಭಜನೆಯ ನಾಯಕತ್ವವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

"ಸಹಜವಾಗಿ, ಯಾವಾಗಲೂ ಉತ್ತರಾಧಿಕಾರ ಯೋಜನೆ ಇರುತ್ತದೆ. ಆದರೆ ಭವಿಷ್ಯದ ನಾಯಕತ್ವದ ಬಗ್ಗೆ ಮಾತನಾಡಲು ಇದು ಸಮಯವಲ್ಲ. ರೋಹಿತ್ ನಮ್ಮ ನಾಯಕ. ವಿಶ್ವಕಪ್ ನಂತರ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ರೋಹಿತ್ ವಿಶ್ವಕಪ್ ನಂತರ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಹಾರ್ದಿಕ್ ಅವರು ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂಬ ಆಲೋಚನೆಯೊಂದಿಗೆ ಏಕದಿನ ಪಂದ್ಯಗಳ ಉಪನಾಯಕತ್ವವನ್ನು ನೀಡಲಾಗಿದೆ” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಟೆಸ್ಟ್ ನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಬಗ್ಗೆ ಸದ್ಯ ಬಿಸಿಸಿಐ ಸಂಪೂರ್ಣವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ರಿಷಬ್ ಪಂತ್ ಜೊತೆಗೆ ರಾಹುಲ್ ಕೂಡ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಸದ್ಯ ಅಪಘಾತದಲ್ಲಿ ಗಾಯಗೊಂಡ ಕಾರಣ ರಿಷಭ್ ಪಂತ್ ದೀರ್ಘಾವಧಿಯವರೆಗೆ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಟೆಸ್ಟ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಕಪ್ ನಂತರ ರೋಹಿತ್ ಅವರ ಭವಿಷ್ಯದ ಕುರಿತು ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿಯೊಂದಿಗೆ ಬಿಸಿಸಿಐ ಚರ್ಚೆ ನಡೆಸಲಿದೆ ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ!

ರೋಹಿತ್ ಗೆ ಈಗಾಗಲೇ 36 ವರ್ಷ ವಯಸ್ಸಾಗಿದೆ. ಗಾಯಗಳ ಕಾರಣದಿಂದ ವಿಶ್ವಕಪ ನಂತರ ಮುಂದುವರಿಯುವ ಸಾಧ್ಯತೆ ಕಮ್ಮಿ ಇದೆ. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ ಆಗಿನಿಂದಲೇ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News