Rohit Sharma Century : 17 ತಿಂಗಳ ನಂತರ ಮೊದಲ ಶತಕ ಭಾರಿಸಿದ ಹಿಟ್‌ಮ್ಯಾನ್‌ ರೋಹಿತ್‌..!

Rohit Sharma century : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಶತಕ ಕಾಯುವಿಕೆ ಕೊನೆಗೊಂಡಿದೆ. ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಅದ್ಭುತ ಶತಕ ಬಾರಿಸಿದ್ದಾರೆ. ಇನಿಂಗ್ಸ್ ನ ಆರಂಭದಿಂದಲೇ ಕಿವೀಸ್ ಬೌಲರ್ ಗಳ ಮೇಲೆ ದಾಳಿ ನಡೆಸಿದ ರೋಹಿತ್ ಕೇವಲ 83 ಎಸೆತಗಳಲ್ಲಿ ಶತಕದ ದಾಖಲೆ ಪಡೆದರು. 

Written by - Krishna N K | Last Updated : Jan 24, 2023, 05:31 PM IST
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಶತಕ ಕಾಯುವಿಕೆ ಕೊನೆಗೊಂಡಿದೆ.
  • ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಅದ್ಭುತ ಶತಕ ಬಾರಿಸಿದ್ದಾರೆ.
  • ಕೇವಲ 83 ಎಸೆತಗಳಲ್ಲಿ ಶತಕ ಹಿಟ್‌ಮ್ಯಾನ್‌ ಶತಕ ಸಿಡಿಸಿದ್ದಾರೆ, 17 ತಿಂಗಳನಂತರದ ಮೊದಲ 100 ಇದಾಗಿದೆ.
Rohit Sharma Century : 17 ತಿಂಗಳ ನಂತರ ಮೊದಲ ಶತಕ ಭಾರಿಸಿದ ಹಿಟ್‌ಮ್ಯಾನ್‌ ರೋಹಿತ್‌..! title=

IND vs NZ, Rohit Sharma Hundred after 17 Months : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಶತಕ ಕಾಯುವಿಕೆ ಕೊನೆಗೊಂಡಿದೆ. ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಅದ್ಭುತ ಶತಕ ಬಾರಿಸಿದ್ದಾರೆ. ಇನಿಂಗ್ಸ್ ನ ಆರಂಭದಿಂದಲೇ ಕಿವೀಸ್ ಬೌಲರ್ ಗಳ ಮೇಲೆ ದಾಳಿ ನಡೆಸಿದ ರೋಹಿತ್ ಕೇವಲ 83 ಎಸೆತಗಳಲ್ಲಿ ಶತಕದ ದಾಖಲೆ ಪಡೆದರು. 

ಹಿಟ್‌ಮ್ಯಾನ್ 9 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದರು. 19 ಜನವರಿ 2020 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಅವರ ಕೊನೆಯ ಟ್ರಿಪಲ್-ಅಂಕಿಯ ಸ್ಕೋರ್ ಆಗಿತ್ತು. ಇದೀಗ ಅವರು ಶತಕ ಬಾರಿಸಿದ್ದು, ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ. ರೋಹಿತ್ ಶರ್ಮಾ ಎಲ್ಲಾ ಮಾದರಿಗಳಲ್ಲಿ 42 ಶತಕಗಳನ್ನು ಗಳಿಸಿದ್ದಾರೆ. ಅವರು ಏಕದಿನದಲ್ಲಿ 30, ಟೆಸ್ಟ್‌ನಲ್ಲಿ 8 ಮತ್ತು ಟಿ20ಯಲ್ಲಿ 4 ಶತಕಗಳನ್ನು ಗಳಿಸಿದ್ದಾರೆ. 

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿಯೇ ನಡೆದ ಅತ್ಯಂತ ಅಪರೂಪದ ಘಟನೆ, ಒಂದೇ ಬಾಲ್ ನಲ್ಲಿ ಬಂತು 16 ರನ್ಸ್... ವಿಡಿಯೋ ನೋಡಿ

ಇತ್ತೀಚಿನ ಶತಕಗಳಲ್ಲಿ ಏಕದಿನದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (30) ಜೊತೆ ಸಮಬಲ ಸಾಧಿಸಿದ್ದಾರೆ. ಶತಕ ಬಾರಿಸಿದ ರೋಹಿತ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ಶತಕದ ಗಡಿ ತಲುಪಿದಾಗ ಮೈದಾನದಲ್ಲಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುವಂತಿತ್ತು.

ಮತ್ತೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಗಿಲ್ ಮೂರನೇ ಏಕದಿನ ಪಂದ್ಯದಲ್ಲೂ ಶತಕ (112) ಗಳಿಸಿದ್ದರು. ಅವರು ಕೇವಲ 72 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಶತಕ ದಾಖಲಿಸಿದರು. ಅದರೊಂದಿಗೆ, ಕಡಿಮೆ ಇನ್ನಿಂಗ್ಸ್‌ಗಳಲ್ಲಿ (21 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕ) ನಾಲ್ಕು ODI ಶತಕಗಳನ್ನು ಗಳಿಸಿದ ಐದನೇ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದರು. ಇದಲ್ಲದೆ, ಅವರು ಭಾರತದ ಮೊದಲ ಆಟಗಾರರಾದರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಕೇವಲ 9 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News