Rohit Sharma Injury: ರೋಹಿತ್ ಶರ್ಮಾ ಕೈಗೆ ಗಂಭೀರ ಗಾಯ: ರಕ್ತ ಸುರಿಸುತ್ತಲೇ ಮೈದಾನದಿಂದ ಹೊರಬಂದ ನಾಯಕ

Rohit Sharma Injury: ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದ ಎರಡನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಬಾಲ್ ರೋಹಿತ್ ಮುಂದೆ ಬಿದ್ದಿದ್ದು, ಅದನ್ನು ತಡೆಯಲು ಪ್ರಯತ್ನಿಸಿದಾಗ ಗಾಯಗೊಂಡಿದ್ದಾರೆ. ಭಾರತೀಯ ನಾಯಕ ನೋವಿನಿಂದ ಕೈ ಹಿಡಿದುಕೊಂಡಿದ್ದು, ಮೈದಾನದಿಂದ ಹೊರನಡೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಕೈಯಲ್ಲಿ ರಕ್ತ ಬರುತ್ತಿರುವುದು ಕಂಡುಬಂತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ರೋಹಿತ್ ಬದಲಿಗೆ ರಜತ್ ಪಾಟಿದಾರ್ ಬಂದಿದ್ದಾರೆ

Written by - Bhavishya Shetty | Last Updated : Dec 7, 2022, 01:40 PM IST
    • ಭಾರತ ಇಂದು ಢಾಕಾದಲ್ಲಿ ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದೆ
    • ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೆರಳಿಗೆ ಗಾಯ
    • ರಕ್ತಸಿಕ್ತ ಬೆರಳಿನೊಂದಿಗೆ ಮೈದಾನ ತೊರೆದಿದ್ದಾರೆ.
Rohit Sharma Injury: ರೋಹಿತ್ ಶರ್ಮಾ ಕೈಗೆ ಗಂಭೀರ ಗಾಯ: ರಕ್ತ ಸುರಿಸುತ್ತಲೇ ಮೈದಾನದಿಂದ ಹೊರಬಂದ ನಾಯಕ title=
Rohit Sharma

Rohit Sharma Injury: ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ಇಂದು ಢಾಕಾದಲ್ಲಿ ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೆರಳಿಗೆ ಗಾಯವಾಗಿದ್ದು, ರಕ್ತಸಿಕ್ತ ಬೆರಳಿನೊಂದಿಗೆ ಮೈದಾನ ತೊರೆದಿದ್ದಾರೆ.

ಇದನ್ನೂ ಓದಿ: Team India 2023 schedule: 2023ರಲ್ಲಿ ಹೀಗಿರಲಿದೆ ಟೀಂ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ

ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದ ಎರಡನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಬಾಲ್ ರೋಹಿತ್ ಮುಂದೆ ಬಿದ್ದಿದ್ದು, ಅದನ್ನು ತಡೆಯಲು ಪ್ರಯತ್ನಿಸಿದಾಗ ಗಾಯಗೊಂಡಿದ್ದಾರೆ. ಭಾರತೀಯ ನಾಯಕ ನೋವಿನಿಂದ ಕೈ ಹಿಡಿದುಕೊಂಡಿದ್ದು, ಮೈದಾನದಿಂದ ಹೊರನಡೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಕೈಯಲ್ಲಿ ರಕ್ತ ಬರುತ್ತಿರುವುದು ಕಂಡುಬಂತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ರೋಹಿತ್ ಬದಲಿಗೆ ರಜತ್ ಪಾಟಿದಾರ್ ಬಂದಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯ ಇಂದು ಢಾಕಾದಲ್ಲಿ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಾರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ಪಂದ್ಯ ಟೀಂ ಇಂಡಿಯಾ ಪಾಲಿಗೆ ಅತೀ ಅಗತ್ಯವಾಗಿದ್ದು, ಇಂದು ಗೆದ್ದರೆ ಸರಣಿ ಆಸೆ ಜೀವಂತವಾಗಿರಲಿದೆ.

ಇನ್ನು ಸರಣಿಯ ಮೊದಲ ಏಕದಿನ ಪಂದ್ಯವನ್ನು ಬಾಂಗ್ಲಾದೇಶ ಕೇವಲ ಒಂದು ವಿಕೆಟ್‌ನಿಂದ ಗೆದ್ದುಕೊಂಡಿತ್ತು. ಭಾರತದ ಬ್ಯಾಟಿಂಗ್ ವಿಫಲವಾಗಿ ತಂಡ 41.2 ಓವರ್‌ಗಳಲ್ಲಿ ಕೇವಲ 186 ರನ್‌ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಆಗಿದ್ದ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ 73 ರನ್ ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಬಾಂಗ್ಲಾ ಪರ ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ 5 ವಿಕೆಟ್ ಪಡೆದರೆ, ಇಬಾದತ್ ಹುಸೇನ್ 4 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:  Karnataka Kreeda Ratna Award: 2021ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ: ವಿಜೇತರ ಪಟ್ಟಿ ಇಲ್ಲಿದೆ ನೋಡಿ

ಇನ್ನೊಂದೆಡೆ ಇಂದು ಭಾರತ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದು, 21.4 ಓವರ್ ಗೆ 6 ವಿಕೆಟ್ ನಷ್ಟಕ್ಕೆ 85 ರನ್ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News