ಮುಂಬೈ: ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಅವಕಾಶವನ್ನು ನೀಡಿತು. ಪಂದ್ಯದ ಮೊದಲ ಓವರ್ ನಲ್ಲಿಯೇ ಲಕ್ನೋ ತಂಡವು ಆರ್ಸಿಬಿ ತಂಡದ ಎರಡು ಪ್ರಮುಖ ವಿಕೆಟ್ ಗಳನ್ನು ಕಬಳಿಸುವ ಮೂಲಕ ತನ್ನ ನಿರ್ಧಾರ ಸರಿ ಎನ್ನುವುದನ್ನು ಸಾಬೀತುಪಡಿಸಿತು.ಚಮೀರಾ ಬೌಲಿಂಗ್ ನ ಮೊದಲನೇ ಓವರ್ ನಲ್ಲಿ ಅನುಜ ರಾವತ್ 4, ಹಾಗೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದರು.
ಇದನ್ನೂ ಓದಿ: ಐಪಿಎಲ್ 2022: ಇಂದು ರಾಜಸ್ಥಾನ ರಾಯಲ್ಸ್ - ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ
Back-to-back wins. ✅
A comprehensive performance with the bat and ball. ✅Let’s take this momentum into the next challenge. 💪🏻#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/CwDGTGj2wD
— Royal Challengers Bangalore (@RCBTweets) April 19, 2022
ಈ ಹಂತದಲ್ಲಿ ಕ್ರೀಸ್ ಗೆ ಬಂದ ಡುಫ್ಲೆಸಿಸ್ ಕೇವಲ 64 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ ಬರೋಬ್ಬರಿ 96 ರನ್ ಗಳಿಸಿ ಜೇಸನ್ ಹೋಲ್ಡರ್ ಎಸೆತದಲ್ಲಿ ಸ್ಟೋನಿಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು, ಆ ಮೂಲಕ ಶತಕ ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡರು.
ದುಫ್ಲೆಸಿಸ್ ಗೆ ಸಾಥ್ ನೀಡಿದ ಮ್ಯಾಕ್ಸ್ ವೆಲ್ ಮತ್ತು ಶಹಬಾಜ್ ಅಹಮದ್ ಅವರು ಕ್ರಮವಾಗಿ 23 ಹಾಗೂ 26 ರನ್ ಗಳಿಸಿದರು.ಇನ್ನೊಂದೆಡೆಗೆ ಲಕ್ನೋ ತಂಡದ ಪರವಾಗಿ ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಜೇಸನ್ ಹೋಲ್ಡರ್ ಹಾಗೂ ಚಮೀರಾ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ರನ್ ಮೇಲೆ ನಿಯಂತ್ರಣವನ್ನು ಹೇರಿದರು.ಕೊನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 181 ರನ್ ಗಳನ್ನು ಗಳಿಸಿತು.
3️⃣ runs and a wicket in the 1️⃣9️⃣th over. 🔥🔥
What. A. Spell. 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #LSGvRCB pic.twitter.com/MinVVHnxBf
— Royal Challengers Bangalore (@RCBTweets) April 19, 2022
ಆರ್ಸಿಬಿ ನೀಡಿರುವ ಈ 182 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 163 ರನ್ ಗಳನ್ನು ಮಾತ್ರಗಳಿಸಲು ಸಾಧ್ಯವಾಯಿತು.ಲಕ್ನೋ ಪರವಾಗಿ ಕೆ.ಎಲ್.ರಾಹುಲ್ 30, ಕ್ರುನಾಲ್ ಪಾಂಡ್ಯ 42, ಮಾರ್ಕಸ್ ಸ್ಟೋನಿಸ್ 24 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಪ್ರಯತ್ನಿಸಿದರು.ಆದರೆ ಜೋಶ ಹೇಜಲ್ ವುಡ್ ,ಹಾಗೂ ಹರ್ಷಲ್ ಪಟೇಲ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಲಕ್ನೋ ತಂಡದ ಬ್ಯಾಟ್ಸಮನ್ ಗಳು ರನ್ ಗಳಿಸಲು ಪರದಾಡಿದರು.ಆರ್ಸಿಬಿ ಪರವಾಗಿ ಹೇಜಲ್ ವುಡ್ ನಾಲ್ಕು ವಿಕೆಟ್ ಗಳನ್ನು ಕಬಳಿಸಿದರೆ, ಹರ್ಷಲ್ ಪಟೇಲ್ ಎರಡು ವಿಕೆಟ್ ಗಳನ್ನು ಪಡೆದು ಗಮನ ಸೆಳೆದರು.
ಇದನ್ನು ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.