RCB vs GT: ಕ್ರಿಸ್ ಗೇಲ್ ತ್ರಿವಳಿ ದಾಖಲೆ ಮುರಿದ ಫ್ಯಾಫ್ ಡುಫ್ಲೆಸಿಸ್..! 

 RCB vs GT: ಗುಜರಾತ್ ಟೈಟಾನ್ಸ್ ತಂಡವು ನೀಡಿ 148 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿತು.

Written by - Manjunath N | Last Updated : May 5, 2024, 12:18 AM IST
  • ಬೆಂಗಳೂರು ತಂಡದ ಪರವಾಗಿ ಡು ಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು.
  • ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ದುಪ್ಲೆಸಿಸ್ ಗೆ ಸಾಥ್ ನೀಡಿದರು.
  • ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ.
RCB vs GT: ಕ್ರಿಸ್ ಗೇಲ್ ತ್ರಿವಳಿ ದಾಖಲೆ ಮುರಿದ ಫ್ಯಾಫ್ ಡುಫ್ಲೆಸಿಸ್..!  title=

ಬೆಂಗಳೂರು: ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್ ಪವರ್‌ ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.ಆರ್‌ಸಿಬಿ ಪರ ಆಡುವಾಗ ಗೇಲ್ ಮೂರು ಬಾರಿ ಈ ಸಾಧನೆ ಮಾಡಿದ್ದರು.

ಪವರ್‌ ಪ್ಲೇನಲ್ಲಿ ಆರ್ಸಿಬಿ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು..!

64 - ಫಾಫ್ ಡು ಪ್ಲೆಸಿಸ್ vs GT, 2024
50 - ಕ್ರಿಸ್ ಗೇಲ್ vs PWI, 2012
50 - ಕ್ರಿಸ್ ಗೇಲ್ vs PWI, 2013
50 - ಕ್ರಿಸ್ ಗೇಲ್ vs PBKS, 2015

ಟಾಸ್ ಗೆದ್ದ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಇದೆ ವೇಳೆ ಗುಜರಾತ್ ಟೈಟಾನ್ಸ್ ತಂಡವು ನೀಡಿ 148 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿತು.

ಬೆಂಗಳೂರು ತಂಡದ ಪರವಾಗಿ ಡು ಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು.ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ದುಪ್ಲೆಸಿಸ್ ಗೆ ಸಾಥ್ ನೀಡಿದರು.ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News