RCB vs CSK: ಆರ್‌ಸಿಬಿಯಲ್ಲಿರುವ ಧೋನಿ ಸ್ನೇಹಿತನಿಂದಲೇ CSKಕೆಗೆ ಸೋಲು ಪಕ್ಕಾ! 

RCB vs CSK prediction 2024 : IPL 2024 ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ RCB vs CSK ರೋಚಕ ಪಂದ್ಯಕ್ಕೆ ಸಚ್ಚಾಗಿದೆ. ಅಭಿಮಾನಿಗಳು ಈ ಪಂಧ್ಯವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಮ್ಯಾಚ್‌ನ ಬಗ್ಗೆ ಕೆಲವೊಂದಿಷ್ಟು ಅಪ್‌ಡೇಟ್‌ಗಳು ಹೊರಬಿಳುತ್ತಿವೆ.. 

Written by - Krishna N K | Last Updated : Mar 22, 2024, 02:33 PM IST
  • CSK vs RCB ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿದೆ.
  • ವಿರಾಟ್‌ ಕೊಹ್ಲಿ ಪಡೆ ಈ ಬಾರಿ ಕಪ್‌ ಗೆಲ್ಲುವ ಉತ್ಸಾಹದಲ್ಲಿದೆ.
  • 2023ರ ನಂತರ ಮತ್ತೆ ಕಪ್‌ ಗೆಲ್ಲುವ ಗುರಿಯಲ್ಲಿ ಸಿಎಸ್‌ಕೆ ಸಿದ್ಧವಾಗಿದೆ.
RCB vs CSK: ಆರ್‌ಸಿಬಿಯಲ್ಲಿರುವ ಧೋನಿ ಸ್ನೇಹಿತನಿಂದಲೇ CSKಕೆಗೆ ಸೋಲು ಪಕ್ಕಾ!  title=
MS Dhoni

RCB vs CSK : WPL RCB ಗೆಲುವಿನ ಬೆನ್ನಲ್ಲೆ ಉತ್ಸಾಹಗೊಂಡಿರುವ IPL ಬಾಯ್ಸ್‌ ಟೀಂ ಈ ಬಾರಿ ಕಪ್‌ಗೆಲ್ಲಲು ರೆಡಿಯಾಗಿದೆ. ಅಲ್ಲದೆ, 2023 ರಲ್ಲಿ ಚಾಂಪಿಯನ್‌ ಆಗಿದ್ದ, ಧೋನಿ ಟೀಂ ಈ ಋತುವಿನಲ್ಲಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಇನ್ನು ಆಟ ಪ್ರಾರಂಭವಾಗಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಬಾರಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸುವುದು ಪಕ್ಕ ಅಂತ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕ್ರಿಕೆಟ್‌ ಪರಿಣಿತರ ಪ್ರಕಾರ, ಬೆಂಗಳೂರು ತಂಡದಲ್ಲಿರುವ ಎಂಎಸ್‌ ಧೋನಿಯ ಆಪ್ತ ಸ್ನೇಹಿತನೇ ಚೆನ್ನೈ ತಂಡಕ್ಕೆ ಮಾರಕವಾಗಬಹುದು ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:CSK vs RCB :ಕೊಹ್ಲಿ ಅಲ್ಲ ಇವರೇ RCB ಓಪನರ್ !CSK ಬೌಲರ್ ಗಳ ಬೆವರಿಳಿಸುವ ದಾಂಡಿಗ

ಕೂಲ್‌ ಕ್ಯಾಪ್ಟನ್‌ ಧೋನಿ ಗರಡಿಯಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಬೆಳೆದಿದ್ದಾರೆ. MSD ಮುಂದಾಳತ್ವದಲ್ಲಿ ಆಡಿ ತಮ್ಮ ಅನುಭವವನ್ನು ಸುಧಾರಿಸಿಕೊಂಡಿದ್ದಾರೆ. ಇದೀಗ ಇದೇ ಧೋನಿ ಪಡೆಗೆ ಮುಳುವಾಗಿದೆ. ಹೌದು.. ನಾವು ಹೇಳುತ್ತಿರುವ ಆ ಸ್ಟಾರ್‌ ಆಟಗಾರ ಬೇರೆ ಯಾರೂ ಅಲ್ಲ ಆರ್‌ಸಿಬಿ ತಂಡದ ನಾಯಕ ಫಾಫ್‌ ಡುಪ್ಲೇಸಿಸ್‌.

ಡುಪ್ಲೇಸಿಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತೊರೆದು ಕಳೆದ ಕೆಲವು ವರ್ಷಗಳ ಹಿಂದೆ ಆರ್‌ಸಿಬಿ ತಂಡ ಸೇರಿದರು. ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಪ್ತಮಿತ್ರ ಫಾಫ್‌, ಆರ್‌ಸಿಬಿ ಗೆಲುವಿಗೆ ಕಾರಣವಾಗ್ತಾರೆ ಅಂತ ಹೇಳಲಾಗುತ್ತಿದೆ. 

ಇದನ್ನೂ ಓದಿ:CSK vs RCB : ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಕೊಹ್ಲಿ ! ಇಲ್ಲಿಯವರೆಗೆ ಯಾವ ಭಾರತೀಯನೂ ಮಾಡದ ಸಾಧನೆ

ಏಕೆಂದರೆ, ಇದುವರೆಗೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಫಾಫ್ ಡು ಪ್ಲೆಸಿಸ್ 19 ಪಂದ್ಯಗಳನ್ನು ಆಡಿದ್ದು, 36.87 ರ ಸರಾಸರಿಯಲ್ಲಿ 553 ರನ್ ಗಳಿಸಿದ್ದಾರೆ. ಅಲ್ಲದೆ, 4 ಅರ್ಧ ಶತಕಗಳನ್ನು ಸಹ ಸಿಡಿಸಿದ್ದಾರೆ. ಸಧ್ಯ ಇದೇ ಸಿಎಸ್‌ಕೆಗೆ ಮುಳುವಾಗುತ್ತಾ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News