IPL 2022 RCB Team: ಈ ಬಾರಿ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದೆ RCB ಬಲಿಷ್ಠ ಪ್ಲೇಯಿಂಗ್ XI

IPL 2022: ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆರ್​​ಸಿಬಿ ಬಲಿಷ್ಠ ಪ್ಲೇಯಿಂಗ್ XI (IPL 2022 RCB Team) ಕಟ್ಟಲು ಸಿದ್ಧವಾಗಿದೆ. ಮೊದಲಿಗೆ ಆರ್ ಸಿಬಿ ತಂಡಕ್ಕೆ ನಾಯಕನ ಅಗತ್ಯವಿದೆ. ಸದ್ಯ ಆರ್​ಸಿಬಿಯಲ್ಲಿ ಒಟ್ಟು 21 ಆಟಗಾರರಿದ್ದಾರೆ. 

Edited by - Chetana Devarmani | Last Updated : Feb 14, 2022, 11:36 AM IST
IPL 2022 RCB Team: ಈ ಬಾರಿ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದೆ RCB ಬಲಿಷ್ಠ ಪ್ಲೇಯಿಂಗ್ XI  title=
ಆರ್‌ಸಿಬಿ

ನವದೆಹಲಿ: ಆರ್‌ಸಿಬಿ (RCB) ಹರಾಜಿನಲ್ಲಿ ತಮ್ಮ ಪ್ರದರ್ಶನಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದೆ. ಆದರೆ ಇದು ಸಮತೋಲಿತ ತಂಡವನ್ನು ಒಟ್ಟುಗೂಡಿಸಲು ಕೆಲವು ಉತ್ತಮ ಆಯ್ಕೆಗಳನ್ನು ಮಾಡಿದೆ ಎಂದು ಒಪ್ಪಿಕೊಳ್ಳಲೇಬೇಕು. ರಾಯಲ್ ಚಾಲೆಂಜರ್ಸ್ ಇನ್ನೂ ಐಪಿಎಲ್ (IPL) ಟ್ರೋಫಿ ಗೆಲ್ಲದ ಕೆಲವೇ ತಂಡಗಳಲ್ಲಿ ಒಂದಾಗಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ಹರಾಜಿನಲ್ಲಿ 18 ಆಟಗಾರರನ್ನು ಖರೀದಿ ಮಾಡಿದೆ. ಹರಾಜಿಗು ಮೊದಲು ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಸದ್ಯ ಆರ್​ಸಿಬಿಯಲ್ಲಿ ಒಟ್ಟು 21 ಆಟಗಾರರಿದ್ದಾರೆ. 

ಇದನ್ನೂ ಓದಿ: IPL 2022 Mega Auction ನಂತರ, ಈ ಆಟಗಾರನೆ RCB ಕ್ಯಾಪ್ಟನ್!

ತಂಡಕ್ಕೆ ನಾಯಕನ ಅಗತ್ಯ: ಮೊದಲಿಗೆ ಆರ್ ಸಿಬಿ ತಂಡಕ್ಕೆ ನಾಯಕನ ಅಗತ್ಯವಿದೆ. ಕ್ಯಾಪ್ಟನ್ ಆಗುವ ಸಂಭವನೀಯರ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ಅವರ ಹೆಸರು ಮುಂಚೂಣಿಯಲ್ಲಿದೆ. 

ಐಪಿಎಲ್ ಮೆಗಾ ಆಕ್ಷನ್​ನ ಮೊದಲ ದಿನ ಫಾಫ್ ಡು ಪ್ಲೆಸಿಸ್ ಅವರನ್ನ  7 ಕೋಟಿ ಕೊಟ್ಟು ಖರೀದಿ ಮಾಡಿತು. ಬಳಿಕ 10.75 ಕೋಟಿಗೆ ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ಅವರನ್ನು ಖರೀದಿಸಿತು.

ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅಗತ್ಯವಿರುವ ಕಾರಣ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು 5.50 ಕೋಟಿಗೆ ಮತ್ತು ಜೋಶ್ ಹೇಜಲ್‌ವುಡ್ 7.75 ಕೋಟಿಗೆ ಆರ್ ಸಿಬಿ ಪಾಲಾದರು.

 

 

ಶಹಬಾಜ್ ಅಹ್ಮದ್ 2.40 ಕೋಟಿ, ಅನುಜ್ ರಾವತ್ 3.4 ಕೋಟಿ, ಆಕಾಶ್ ದೀಪ್ ಸಿಂಗ್ 20 ಲಕ್ಷ ರೂ., ಮಹಿಪಾಲ್ ಲೊಮ್ರೋರ್ 95 ಲಕ್ಷ ರೂ., ಫಿನ್ ಅಲೆನ್ 80 ಲಕ್ಷ ರೂ., ಶೆರ್ಫೇನ್ ರುದರ್‌ಫೋರ್ಡ್ 1 ಕೋಟಿ ರೂ., ಜೇಸನ್ ಬೆಹ್ರೆಂಡಾರ್ಫ್ ರೂ. 75 ಲಕ್ಷ, ಸುಯಶ್ ಪ್ರಭುದೇಸಾಯಿ ರೂ. 30 ಲಕ್ಷ, ಚಾಮಾ ಮಿಲಿಂದ್ ರೂ. 25 ಲಕ್ಷ, ಅನೀಶ್ವರ್ ಗೌತಮ್ ರೂ. 20 ಲಕ್ಷ, ಕರ್ಣ್ ಶರ್ಮಾ 50 ಲಕ್ಷ, ಲುವ್ನಿತ್ ಸಿಸೋಡಿಯಾ 20 ಲಕ್ಷ, ಸಿದ್ಧಾರ್ಥ್ ಕೌಲ್ 75 ಲಕ್ಷ, ಡೇವಿಡ್ ವಿಲ್ಲೆ 2 ಕೋಟಿಗೆ ಖರೀದಿಸಿತು. 

ಇದನ್ನೂ ಓದಿ: IPL 2022 Mega Auction: ಈ ಆಟಗಾರನನ್ನು ಮರಳಿ ಪಡೆಯಲು 14 ಕೋಟಿ ಪಾವತಿಸಿದ CSK

ಬಲಿಷ್ಠ ಪ್ಲೇಯಿಂಗ್ XI  ಕಟ್ಟಲು ಸಿದ್ಧ: ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆರ್​​ಸಿಬಿ ಬಲಿಷ್ಠ ಪ್ಲೇಯಿಂಗ್ XI (IPL 2022 RCB Team) ಕಟ್ಟಲು ಸಿದ್ಧವಾಗಿದೆ. ಆರಂಭಿಕರಾಗಿ ಫಾಫ್ ಡುಪ್ಲೆಸಿಸ್​ ಸ್ಥಾನ ಖಚಿತ ಎನ್ನಲಾಗುತ್ತಿದೆ.  ದಕ್ಷಿಣ ಆಫ್ರಿಕಾದ ಆಟಗಾರ ಅನುಜ್ ರಾವತ್ ಅವರೊಂದಿಗೆ ಆರಂಭಿಕರಾಗಬಹುದು. ಕೆಲವು ಸಂದರ್ಭಗಳಲ್ಲಿ ಕೊಹ್ಲಿ ಕೂಡ ಓಪನಿಂಗ್ ಮಾಡಬಹುದು. ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.  

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ನಾಲ್ಕನೇ ಕ್ರಮಾಂಕದಲ್ಲಿ ಬರಬಹುದು. ಕಳೆದ ಸೀಸನ್​ನಲ್ಲೂ ಇದೇ ಕ್ರಮಾಂಕದಲ್ಲಿ ಆಡಿದ್ದ ಮ್ಯಾಕ್ಸ್‌ವೆಲ್ ಯಶಸ್ಸು ಕಂಡಿದ್ದರು. ಅನುಭವಿ ಬ್ಯಾಟರ್-ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಐದನೇ ಕ್ರಮಾಂಕದಲ್ಲಿ ಆಡಬಹುದು. 

ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೊರ್, ವನಿಂದು ಹಸರಂಗ, ಹರ್ಷಲ್ ಪಟೇಲ್ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ. ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್ ನಂತರ ಆಡಬಹುದು. 

RCB ಸಂಭವನೀಯ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ನದೀಮ್, ಮಹಿಪಾಲ್ ಮಹಿಪಾಲ್ ಲೊಮ್ರೊರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೆಜಲ್‌ವುಡ್

ಇದನ್ನೂ ಓದಿ: IPL 2022 Mega Auction: ಮುಂಬೈ ಇಂಡಿಯನ್ಸ್ ತಂಡಕ್ಕೆ 30 ಲಕ್ಷ ರೂ.ಗೆ ಹರಾಜಾದ ಅರ್ಜುನ್ ತೆಂಡೂಲ್ಕರ್..!

RCB ಪೂರ್ಣ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹೆಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಹಝರ್ ವಾನ್, ಶಹಬಾ ಪಟೇಲ್, ವಾನ್ ಅಹ್ಮದ್, ಮಹಿಪಾಲ್ ಲೊಮ್ರೊರ್, ಶೆರ್ಫೇನ್‌ ರುದರ್‌ಫೋರ್ಡ್‌, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್

ತಂಡದ ಸಾಮರ್ಥ್ಯ: 22 (14 ಭಾರತೀಯ, 8 ಸಾಗರೋತ್ತರ)

ಉಳಿದಿರುವ ಮೊತ್ತ: 1.55 ಕೋಟಿ ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News