IPL 2024: ಐಪಿಎಲ್ ಟ್ರೋಫಿ ನೋಡುತ್ತಿದ್ದಂತೆ ಕೈಮುಗಿದ RCB ನಾಯಕ… ಫಾಫ್ ನಡೆಗೆ ಮೆಚ್ಚುಗೆಯ ಮಹಾಪೂರ!

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ವೇದಿಕೆ ಮೇಲೆ ಬರುತ್ತಿದ್ದಂತೆ ಐಪಿಎಲ್ ಟ್ರೋಫಿಗೆ ಕೈಮುಗಿಯುತ್ತಾ ಆಗಮಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಅರೆಕ್ಷಣ ಶಾಕ್ ಒಳಗಾಗಿದ್ದು, ಬಳಿಕ ನಾಯಕನ ನಡೆಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

Written by - Bhavishya Shetty | Last Updated : Mar 22, 2024, 08:01 PM IST
    • ಬಹುನಿರೀಕ್ಷಿತ ಐಪಿಎಲ್ ಸೀಸನ್ 17 ಪ್ರಾರಂಭ
    • ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ
    • ಐಪಿಎಲ್ ಟ್ರೋಫಿಗೆ ಕೈಮುಗಿಯುತ್ತಾ ಆಗಮಿಸಿದ ಫಾಫ್ ಡು ಪ್ಲೆಸಿಸ್
IPL 2024: ಐಪಿಎಲ್ ಟ್ರೋಫಿ ನೋಡುತ್ತಿದ್ದಂತೆ ಕೈಮುಗಿದ RCB ನಾಯಕ… ಫಾಫ್ ನಡೆಗೆ ಮೆಚ್ಚುಗೆಯ ಮಹಾಪೂರ!  title=
Faf du Plessis

IPL 2024: ಬಹುನಿರೀಕ್ಷಿತ ಐಪಿಎಲ್ ಸೀಸನ್ 17 ಪ್ರಾರಂಭವಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಲಿದೆ. ಈ ಹಣಾಹಣಿಗೂ ಮುನ್ನ ಐಪಿಎಲ್ ಓಪನಿಂಗ್ ಸೆರೆಮನಿ ನಡೆದಿದೆ. ಈ ವೇಳೆ ಆರ್ ಸಿ ಬಿ ನಾಯಕ ತೋರಿದ ಆ ಒಂದು ನಡೆಗೆ ಸದ್ಯ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಇತಿಹಾಸ ಸೃಷ್ಟಿಸಲು ಧೋನಿ-ಕೊಹ್ಲಿ ಸಜ್ಜು… ಈ ವಿಶೇಷ ದಾಖಲೆಗಳ ಮೇಲೆ ಗುರು-ಶಿಷ್ಯರ ಕಣ್ಣು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ವೇದಿಕೆ ಮೇಲೆ ಬರುತ್ತಿದ್ದಂತೆ ಐಪಿಎಲ್ ಟ್ರೋಫಿಗೆ ಕೈಮುಗಿಯುತ್ತಾ ಆಗಮಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಅರೆಕ್ಷಣ ಶಾಕ್ ಒಳಗಾಗಿದ್ದು, ಬಳಿಕ ನಾಯಕನ ನಡೆಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಕೈ ಮುಗಿಯುತ್ತಾ ಬಂದ ನಾಯಕನನ್ನು ನಿಜವಾದ ಮಣ್ಣಿನ ಮಗ ಎಂದೆಲ್ಲಾ ಫ್ಯಾನ್ ಕೊಂಡಾಡುತ್ತಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಈ 3 ರಾಶಿಗಳಿಗೆ ಶುಕ್ರದೆಸೆ: ಪ್ರತಿದಿನವೂ ಲಾಭದ ಜೊತೆ ಅದೃಷ್ಟ… ಕೈಯಿಟ್ಟ ಎಲ್ಲಾ ಕೆಲಸದಲ್ಲೂ ಸಕ್ಸಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಟಾಮ್ ಕರ್ರಾನ್, ಲ್ಯೂಕ್ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News