ಇದು RCBಯ ರಿಟೈನ್‌ ಲಿಸ್ಟ್‌... IPL 2025ಕ್ಕೆ ಈ 3 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ಡು ಪ್ಲೆಸಿಸ್, ವಿರಾಟ್ ಜೊತೆಗೆ ಉಳಿದುಕೊಂಡ ಮತ್ತೊಬ್ಬ ಕ್ರಿಕೆಟಿಗ ಈತನೇ!

RCB Retain List: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರ ಸೀಸನ್‌ಗೆ ಸಜ್ಜಾಗುತ್ತಿದ್ದು, ಮೂವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ.    

Written by - Bhavishya Shetty | Last Updated : Oct 22, 2024, 03:28 PM IST
    • ಐಪಿಎಲ್‌ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ
    • ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ರಿಲೀಸ್‌ ಮಾಡುವುದು ಎಂಬ ಚರ್ಚೆ
    • ಆರ್‌ ಸಿ ಬಿಯ ಫ್ರಾಂಚೈಸಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಇದು RCBಯ ರಿಟೈನ್‌ ಲಿಸ್ಟ್‌... IPL 2025ಕ್ಕೆ ಈ 3 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ಡು ಪ್ಲೆಸಿಸ್, ವಿರಾಟ್ ಜೊತೆಗೆ ಉಳಿದುಕೊಂಡ ಮತ್ತೊಬ್ಬ ಕ್ರಿಕೆಟಿಗ ಈತನೇ! title=
File Photo

RCB retain: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳಲ್ಲಿ ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ರಿಲೀಸ್‌ ಮಾಡುವುದು ಎಂಬ ಚರ್ಚೆ ತೀವ್ರಗೊಂಡಿದೆ. ಈ ಬೆನ್ನಲ್ಲೇ ಆರ್‌ ಸಿ ಬಿಯ ಫ್ರಾಂಚೈಸಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಆಪರೇಶನ್ ಇಲ್ಲದೆಯೇ ಕಣ್ಣ ಪೊರೆ ತೆಗೆದು ಹಾಕಲು ಚಳಿಗಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸಿ !ಮಂದ ದೃಷ್ಟಿ ಮತ್ತೆ ಚುರುಕಾಗುವುದು 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರ ಸೀಸನ್‌ಗೆ ಸಜ್ಜಾಗುತ್ತಿದ್ದು, ಮೂವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ.  

TOI ನ ವರದಿಯ ಪ್ರಕಾರ ಮುಂಬರುವ ಋತುವಿನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿಯಲ್ಲಿ ಖಚಿತವಾಗಿ ಉಳಿದುಕೊಳ್ಳಲಿದ್ದಾರೆ. ಇವೆಲ್ಲದರ ನಡುವೆ, ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಫಾಫ್ ಡು ಪ್ಲೆಸಿಸ್ ಕೂಡ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಇದನ್ನೂ ಓದಿ: ಸ್ಟಾರ್‌ ಕ್ರಿಕೆಟರ್‌ ತಂದೆಯಿಂದ ಕ್ರಿಕೆಟ್ ಕ್ಲಬ್‌​ನಲ್ಲಿ ಮತಾಂತರ! ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್‌ ಇವರೇ ಅಂತಿದ್ದ ಪ್ಲೇಯರ್‌ನ ಸದಸ್ಯತ್ವವನ್ನೇ ರದ್ದುಗೊಳಿಸಿದ ಸಮಿತಿ!

ಸದ್ಯ ಪ್ರತಿ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರ ಒಳಗೆ ತಿಳಿಸಬೇಕೆಂದು ಹೇಳಲಾಗಿದೆ. ಈ ನಡುವೆ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ತಂಡದಲ್ಲಿ ಯಾವೆಲ್ಲಾ ಆಟಗಾರರು ಉಳಿಸಿಕೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News