ನವದೆಹಲಿ: ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಗೆಲ್ಲುವಲ್ಲಿ ಪ್ರಮುಖಪಾತ್ರ ವಹಿಸಿದ ರವೀಂದ್ರ ಜಡೇಜಾ ಈಗ ಆಲ್ ರೌಂಡರ್ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಅಜೇಯ 175 ಹಾಗೂ 9 ವಿಕೆಟ್ ಗಳ ನೆರವಿನಿಂದಾಗಿ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ.ಇನ್ನೊಂದೆಡೆಗೆ ಫೆಬ್ರವರಿ 2021 ರಿಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದ ಜಡೇಜಾ (Ravindra jadeja) ಜೇಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿದರು.ಇದಕ್ಕೂ ಮೊದಲು ಜಡೇಜಾ ಆಗಸ್ಟ್ 2017 ರಲ್ಲಿ, ಅವರು ಒಂದು ವಾರಗಳ ಕಾಲ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರು.
ಇದನ್ನೂ ಓದಿ: IND vs SL: ರವೀಂದ್ರ ಜಡೇಜಾ ಆಲ್ರೌಂಡ್ ಪರಾಕ್ರಮಕ್ಕೆ ಬೆಚ್ಚಿದ ಸಿಂಹಳಿಯರು...!
Jadeja reaches the summit 👑
Kohli, Pant move up ⬆️Some big movements in the latest update to the @MRFWorldwide ICC Men's Test Player rankings 📈
Details 👉 https://t.co/BjiD5Avxhk pic.twitter.com/U4dfnrmLmE
— ICC (@ICC) March 9, 2022
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲೇರುವ ಮೂಲಕ ಈಗ 5ನೇ ಸ್ಥಾನಕ್ಕೆ ತಲುಪಿದ್ದಾರೆ.ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್‌ಚಾಗ್ನೆ 936 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದರೆ, ರಿಷಬ್ ಪಂತ್ 10ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: India vs Sri Lanka 1st Test: 35 ವರ್ಷಗಳ ಕಪಿಲ್ ದೇವ್ ದಾಖಲೆ ಮುರಿದ ರವೀಂದ್ರ ಜಡೇಜಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.