IND vs AUS: ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ಜಡ್ಡು: ಕಪಿಲ್ ದೇವ್ ಬಳಿಕ ಈ ರೆಕಾರ್ಡ್ ಮಾಡಿದ್ದು ಇವರು ಮಾತ್ರ

Ravindra Jadeja record: ಆಸ್ಟ್ರೇಲಿಯಾ ವಿರುದ್ಧದ ಇಂದೋರ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ತಂಡಕ್ಕೆ ಮೊದಲ ಯಶಸ್ಸು ನೀಡಿದ್ದಾರೆ. ಟ್ರಾವಿಸ್ ಹೆಡ್ ಅವರನ್ನು ರವೀಂದ್ರ ಜಡೇಜಾ ಎಲ್ಬಿಡಬ್ಲ್ಯು ಮೂಲಕ ಔಟ್ ಮಾಡಿದರು. ಈ ವಿಕೆಟ್ ಪಡೆದ ನಂತರ, ಜಡೇಜಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ದಾಖಲಿಸಿದರು.

Written by - Bhavishya Shetty | Last Updated : Mar 1, 2023, 04:57 PM IST
    • ಡ್ಯಾಶಿಂಗ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ.
    • ರವೀಂದ್ರ ಜಡೇಜಾ ಏಷ್ಯಾ ಕಪ್ 2022 ರಿಂದ ತಂಡದಿಂದ ಹೊರಗುಳಿಯುತ್ತಿದ್ದರು.
    • ಆದರೆ ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ತಂಡಕ್ಕೆ ಮರಳಿದ್ದಾರೆ.
IND vs AUS: ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ಜಡ್ಡು: ಕಪಿಲ್ ದೇವ್ ಬಳಿಕ ಈ ರೆಕಾರ್ಡ್ ಮಾಡಿದ್ದು ಇವರು ಮಾತ್ರ title=
Ravindra Jadeja

Ravindra Jadeja record: ಭಾರತ ಕ್ರಿಕೆಟ್ ತಂಡದ ಡ್ಯಾಶಿಂಗ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ರವೀಂದ್ರ ಜಡೇಜಾ ಏಷ್ಯಾ ಕಪ್ 2022 ರಿಂದ ತಂಡದಿಂದ ಹೊರಗುಳಿಯುತ್ತಿದ್ದರು. ಆದರೆ ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ  ತಂಡಕ್ಕೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಒಂದರ ನಂತರ ಒಂದರಂತೆ ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ. ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲೂ ರವೀಂದ್ರ ಜಡೇಜಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: “Jaddu B***DK Dekh”: ಮೈದಾನದಲ್ಲೇ ಜಡೇಜಾಗೆ ಅವಾಚ್ಯ ಶಬ್ದದಿಂದ ನಿಂದಿಸಿದ ರೋಹಿತ್! ಕಾರಣ??

ಆಸ್ಟ್ರೇಲಿಯಾ ವಿರುದ್ಧದ ಇಂದೋರ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ತಂಡಕ್ಕೆ ಮೊದಲ ಯಶಸ್ಸು ನೀಡಿದ್ದಾರೆ. ಟ್ರಾವಿಸ್ ಹೆಡ್ ಅವರನ್ನು ರವೀಂದ್ರ ಜಡೇಜಾ ಎಲ್ಬಿಡಬ್ಲ್ಯು ಮೂಲಕ ಔಟ್ ಮಾಡಿದರು. ಈ ವಿಕೆಟ್ ಪಡೆದ ನಂತರ, ಜಡೇಜಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ದಾಖಲಿಸಿದರು. ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆದ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳನ್ನು ಸಂಯೋಜಿಸುವ ಮೂಲಕ ತಮ್ಮ 500 ವಿಕೆಟ್‌ಗಳನ್ನು ಪೂರೈಸಿದರು.

ರವೀಂದ್ರ ಜಡೇಜಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್ ಹಾಗೂ 5000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಅವರು ಕಪಿಲ್ ದೇವ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ರನ್ ಮತ್ತು 500 ವಿಕೆಟ್‌ಗಳನ್ನು ಗಳಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಯಾವುದೇ ಭಾರತೀಯ ಆಟಗಾರರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಈ ಸರಣಿಯಲ್ಲಿ ರವೀಂದ್ರ ಜಡೇಜಾ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

ಇದನ್ನೂ ಓದಿ: IND vs AUS: ಇಂಡೋ-ಆಸೀಸ್ ಟೆಸ್ಟ್ ಮುಗಿಯುತ್ತಿದ್ದಂತೆ ನಿವೃತ್ತಿ ಘೋಷಿಸಲಿದ್ದಾರೆ ಈ 5 ಆಟಗಾರರು!

ಭಾರತದ ಮಾಜಿ ನಾಯಕ ಮತ್ತು ಶ್ರೇಷ್ಠ ಆಲ್‌ರೌಂಡರ್ ಕಪಿಲ್ ದೇವ್ ಭಾರತದ ಅತ್ಯಂತ ಯಶಸ್ವಿ ಆಲ್‌ರೌಂಡರ್. ಅವರು ಭಾರತಕ್ಕಾಗಿ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಕಪಿಲ್ ದೇವ್ 5248 ರನ್ ಮತ್ತು 434 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇನ್ನೊಂದೆಡೆ ಏಕದಿನದಲ್ಲಿ ಅವರು 3783 ರನ್ ಮತ್ತು 253 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟವರು ಕಪಿಲ್ ದೇವ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News