1 ವರ್ಷದ ಬಳಿಕ ಟೀಂ ಇಂಡಿಯಾಗೆ ಲಗ್ಗೆಯಿಟ್ಟ ಲೆಗ್ ಬ್ರೇಕ್ ಬೌಲಿಂಗ್ ಮಾಂತ್ರಿಕ! ಇನ್ಮುಂದೆ ಕೊಹ್ಲಿ ಸ್ನೇಹಿತನ ಆಟ ಶುರು

India vs West Indies, 1st T20: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಗಾಗಿ, ಟೀಂ ಇಂಡಿಯಾ ತನ್ನ ಅತಿದೊಡ್ಡ ಪಂದ್ಯ ವಿಜೇತ ಆಟಗಾರನನ್ನು ಇದ್ದಕ್ಕಿದ್ದಂತೆ ಹಿಂದಿರುಗಿ ಕರೆತಂದಿದೆ.

Written by - Bhavishya Shetty | Last Updated : Aug 3, 2023, 11:22 AM IST
    • ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿ
    • ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆಲ್ಲಲು ಬಿಸಿಸಿಐ ಮಾಸ್ಟರ್ ಪ್ಲಾನ್
    • ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವ ಜವಾಬ್ದಾರಿ ರವಿ ಬಿಷ್ಣೋಯ್ ಮೇಲಿದೆ.
1 ವರ್ಷದ ಬಳಿಕ ಟೀಂ ಇಂಡಿಯಾಗೆ ಲಗ್ಗೆಯಿಟ್ಟ ಲೆಗ್ ಬ್ರೇಕ್ ಬೌಲಿಂಗ್ ಮಾಂತ್ರಿಕ! ಇನ್ಮುಂದೆ ಕೊಹ್ಲಿ ಸ್ನೇಹಿತನ ಆಟ ಶುರು title=
india vs west indies

India vs West Indies, 1st T20: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯ ಮೊದಲ ಪಂದ್ಯವು ಇಂದು ರಾತ್ರಿ 8 ರಿಂದ ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್) ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಈ ಟಿ20 ಸರಣಿಯನ್ನು ಗೆಲ್ಲಲು ಬಿಸಿಸಿಐ ದೊಡ್ಡ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಇನ್ನು ಈ ಟಿ20 ಸರಣಿಗೆ ಬಿಸಿಸಿಐ, 1 ವರ್ಷದ ಬಳಿಕ ದಿಢೀರ್ ಆಗಿ ಮಾರಣಾಂತಿಕ ಆಟಗಾರನೊಬ್ಬನನ್ನು ಕರೆತಂದಿದ್ದು, ತಂಡಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದೆ.

ಇದನ್ನೂ ಓದಿ: ಗಂಟೆಗೆ 157km ವೇಗದ ಬೌಲರ್, IPLನಲ್ಲಿ ಸ್ಟಂಪ್ ಪುಡಿಮಾಡಿದ ಯಾರ್ಕರ್ ಕಿಂಗ್: ಈ ಇಬ್ಬರಿಂದಲೇ T20ಯಲ್ಲಿ ಗೆಲ್ಲುತ್ತೆ ಭಾರತ!

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಗಾಗಿ, ಟೀಂ ಇಂಡಿಯಾ ತನ್ನ ಅತಿದೊಡ್ಡ ಪಂದ್ಯ ವಿಜೇತ ಆಟಗಾರನನ್ನು ಇದ್ದಕ್ಕಿದ್ದಂತೆ ಹಿಂದಿರುಗಿ ಕರೆತಂದಿದೆ. ಈ ಬೆಳವಣಿಗೆ ಕಾರಣದಿಂದ ಕೆರಿಬಿಯನ್ ತಂಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ,

ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಲೆಗ್ ಬ್ರೇಕ್ ಬೌಲಿಂಗ್ ಮಾಂತ್ರಿಕ ರವಿ ಬಿಷ್ಣೋಯ್. ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವ ಜವಾಬ್ದಾರಿ ರವಿ ಬಿಷ್ಣೋಯ್ ಅವರ ಮೇಲಿದೆ.

ಸುಮಾರು 1 ವರ್ಷದ ನಂತರ ರವಿ ಬಿಷ್ಣೋಯ್ ಟಿ20 ತಂಡಕ್ಕೆ ಮರಳುತ್ತಿದ್ದಾರೆ. ರವಿ ಬಿಷ್ಣೋಯ್ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಸೆಪ್ಟೆಂಬರ್ 2022 ರಲ್ಲಿ ಪಾಕಿಸ್ತಾನದ ವಿರುದ್ಧ ದುಬೈ ಮೈದಾನದಲ್ಲಿ ಆಡಿದ್ದರು. 4 ಸೆಪ್ಟೆಂಬರ್ 2022 ರಂದು ದುಬೈ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾ ಕಪ್ T20 ಪಂದ್ಯದ ನಂತರ ರವಿ ಬಿಷ್ಣೋಯ್ ಭಾರತದ T20 ತಂಡದಿಂದ ಹೊರಗುಳಿಯುತ್ತಿದ್ದರು. ಆದರೆ ಇದೀಗ ರವಿ ಬಿಷ್ಣೋಯ್ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಿಧ್ವಂಸಕರಾಗಲು ಸಿದ್ಧರಾಗಿದ್ದಾರೆ. ರವಿ ಬಿಷ್ಣೋಯ್ ಆಗಮನದಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ರವಿ ಬಿಷ್ಣೋಯ್ ಅವರ ಅಪಾಯಕಾರಿ ಬೌಲಿಂಗ್‌ ನಿಂದಾಗಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ಹಲವು ಬಾರಿ ಗೊಂದಲಕ್ಕೀಡಾಗಿದ್ದಾರೆ. ಇವರ ಕಿಲ್ಲರ್ ಬೌಲಿಂಗ್ ಬಗ್ಗೆ ಎಲ್ಲರಿಗೂ ತಿಳಿದಿದೆ. 1 ಏಕದಿನದಲ್ಲಿ 1 ವಿಕೆಟ್ ಹಾಗೂ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 4 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10 ರನ್ ಗಳಿಸಿದ್ದಾರೆ. ಇನ್ನು 52 ಐಪಿಎಲ್ ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದು, 28 ರನ್ ಕೂಡ ಗಳಿಸಿದ್ದಾರೆ.

ಭಾರತದ ಟಿ20 ಅಂತರಾಷ್ಟ್ರೀಯ ತಂಡ ಹೀಗಿದೆ:

ಇಶಾನ್ ಕಿಶನ್ (WK), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (VC), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.

ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ ನಡೆಯುವ ಸ್ಥಳ:

1ನೇ ಟಿ20 ಪಂದ್ಯ, ಆಗಸ್ಟ್ 3, ರಾತ್ರಿ 8.00, ಟ್ರಿನಿಡಾಡ್

2ನೇ ಟಿ20 ಪಂದ್ಯ, ಆಗಸ್ಟ್ 6, ರಾತ್ರಿ 8.00, ಗಯಾನಾ

3ನೇ ಟಿ20 ಪಂದ್ಯ, ಆಗಸ್ಟ್ 8, ರಾತ್ರಿ 8.00, ಗಯಾನಾ

4ನೇ ಟಿ20 ಪಂದ್ಯ, ಆಗಸ್ಟ್ 12, ರಾತ್ರಿ 8.00, ಫ್ಲೋರಿಡಾ

ಐದನೇ ಟಿ20 ಪಂದ್ಯ, ಆಗಸ್ಟ್ 13, ರಾತ್ರಿ 8.00, ಫ್ಲೋರಿಡಾ

ಇದನ್ನೂ ಓದಿ: ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧ ಗೆದ್ದ ಭಾರತ: ಆ ಒಂದು ಗೆಲುವಿಗೆ ಮುರಿಯಿತು 6 ವಿಶ್ವದಾಖಲೆಗಳು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News