RR vs RCB:ಬೆಂಗಳೂರಿಗೆ ರಾಯಲ್ಸ್‌ ಚಾಲೆಂಜ್..‌ ಇಂದು ನಿರ್ಮಾಣವಾಗಬಹುದು ಹತ್ತು ಹಲವು ದಾಖಲೆ!

RR vs RCB: ಐಪಿಎಲ್​ನ 13ನೇ (IPL 2022) ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

Written by - Chetana Devarmani | Last Updated : Apr 5, 2022, 06:51 PM IST
  • ಐಪಿಎಲ್​ನ 13ನೇ ಪಂದ್ಯ
  • ಬೆಂಗಳೂರಿಗೆ ರಾಯಲ್ಸ್‌ ಚಾಲೆಂಜ್
  • ಇಂದು ನಿರ್ಮಾಣವಾಗಬಹುದು ಹತ್ತು ಹಲವು ದಾಖಲೆ
RR vs RCB:ಬೆಂಗಳೂರಿಗೆ ರಾಯಲ್ಸ್‌ ಚಾಲೆಂಜ್..‌ ಇಂದು ನಿರ್ಮಾಣವಾಗಬಹುದು ಹತ್ತು ಹಲವು ದಾಖಲೆ!  title=
ಐಪಿಎಲ್​

ಐಪಿಎಲ್​ನ 13ನೇ (IPL 2022) ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ವರೆಗಿನ ಗೆಲುವಿನ ಪಟ್ಟಿ ನೋಡೋದಾದ್ರೆ ರಾಜಸ್ಥಾನ್ ರಾಯಲ್ಸ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. 

ಇದನ್ನೂ ಓದಿ: FIH Pro League: ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌: ಭಾರತ ಮಹಿಳಾ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್‌ ಸಂಜು ಸ್ಯಾಮ್ಸನ್ (Sanju Samson) 24 ರನ್ ಗಳಿಸಿದರೆ 2500 ಐಪಿಎಲ್ ರನ್‌ಗಳನ್ನು ಕಲೆ ಹಾಕಿದಂತಾಗುತ್ತದೆ. ಈ ಮೂಲಕ ಅಜಿಂಕ್ಯ ರಹಾನೆ ನಂತರ ಆರ್​ಆರ್​ ಪರ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಲಿದ್ದಾರೆ. ದಿನೇಶ್ ಕಾರ್ತಿಕ್‌ಗೆ ಕೇವಲ ಇನ್ನೆರಡು ಔಟ್​ಗಳನ್ನು ಕಬಳಿಸಿದರೆ ಐಪಿಎಲ್‌ನಲ್ಲಿ ಎಂಎಸ್ ಧೋನಿ (MS Dhoni) ನಂತರ  150 ವಿಕೆಟ್ ಕೀಪಿಂಗ್ ಡಿಸ್​ಮಿಸೆಲ್ ಮಾಡಿದ ಎರಡನೇ ವಿಕೆಟ್‌ಕೀಪರ್ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು ಜೋಸ್ ಬಟ್ಲರ್‌ಗೆ (Buttler) ಇನ್ನೂ ಎರಡು ಸಿಕ್ಸರ್‌ಗಳ ಅಗತ್ಯವಿದೆ. ಇಂದಿನ ಮ್ಯಾಚ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರೆ ಹರ್ಷಲ್ ಪಟೇಲ್ (Harshal Patel) ವಿನಯ್ ಕುಮಾರ್ ಅವರನ್ನು ಹಿಂದಿಕ್ಕಲಿದ್ದಾರೆ ಮತ್ತು RCB ಯ ಅತ್ಯಂತ ಯಶಸ್ವಿ ವೇಗಿಯಾಗಲಿದ್ದಾರೆ. ದಿನೇಶ್ ಕಾರ್ತಿಕ್‌ಗೆ (Dinesh Karthik) ಇನ್ನೂ ಮೂರು ಸಿಕ್ಸರ್‌ಗಳನ್ನು ಇಂದು ಪಡೆದುಕೊಂಡರೆ T20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ ಹೊಡೆದಂತಾಗುತ್ತದೆ. 

ಆರ್.ಅಶ್ವಿನ್‌ (R Ashwin) ಅದೊಂದು ವೇಳೆ ಇಂದು ನಾಲ್ಕು ವಿಕೆಟ್‌ಗಳನ್ನು ಪಡೆದರೆ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ಐದನೇ ಆಟಗಾರನಾಗಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ತಲುಪಲು ಸಿದ್ದಾರ್ಥ್ ಕೌಲ್‌ಗೆ ಇನ್ನೂ ಮೂರು ವಿಕೆಟ್‌ಗಳ ಅಗತ್ಯವಿದೆ. 

ಇದನ್ನೂ ಓದಿ: RR vs RCB, IPL 2022: ಇಂದು ರಾಯಲ್ಸ್ ಗೆ 'ರಾಯಲ್' ಚಾಲೆಂಜ್..!

ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ (Virat Kohli) 550 ಬೌಂಡರಿಗಳನ್ನು ಗಳಿಸಲು ಒಂದು ಬೌಂಡರಿ ಅಗತ್ಯವಿದೆ. ದೇವದತ್ ಪಡಿಕ್ಕಲ್ (Devadat Padikal) ಐಪಿಎಲ್‌ನಲ್ಲಿ 1000 ರನ್ ಪೂರೈಸಲು 68 ರನ್‌ಗಳ ಅಗತ್ಯವಿದೆ. ಸಂಜು ಸ್ಯಾಮ್ಸನ್ T20 ಪಂದ್ಯಗಳಲ್ಲಿ 5000 ರನ್‌ಗಳನ್ನು ಪೂರೈಸಲು 81 ರನ್‌ಗಳ ದೂರದಲ್ಲಿದ್ದಾರೆ.

ಅಲ್ಲದೇ, ಜೋಸ್ ಬಟ್ಲರ್ T20 ಪಂದ್ಯಗಳಲ್ಲಿ 7500 ರನ್ ಪೂರ್ಣಗೊಳಿಸಲು 30 ರನ್ ಅಗತ್ಯವಿದೆ. ಹೀಗೆ ಇಂದಿನ ಪಂದ್ಯ ಬಲು ರೋಚಕವಾಗಿದ್ದು, ಹತ್ತು ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News