Rajasthan vs Delhi, 7th Match: ರಾಜಸ್ಥಾನ ರಾಯಲ್ಸ್ ಗೆ 3 ವಿಕೆಟ್ ಗಳ ರೋಚಕ ಗೆಲುವು

ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ ಏಳನೇ ಪಂದ್ಯದಲ್ಲಿ ದೆಹಲಿ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು ಮೂರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

Last Updated : Apr 15, 2021, 11:57 PM IST
  • ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ ಏಳನೇ ಪಂದ್ಯದಲ್ಲಿ ದೆಹಲಿ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು ಮೂರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
  • ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ದೆಹಲಿ ತಂಡವನ್ನು 20 ಓವರ್ ಗಳಲ್ಲಿ 147 ರನ್ ಗಳಿಗೆ ಕಟ್ಟಿ ಹಾಕಿತು.
Rajasthan vs Delhi, 7th Match: ರಾಜಸ್ಥಾನ ರಾಯಲ್ಸ್ ಗೆ 3 ವಿಕೆಟ್ ಗಳ ರೋಚಕ ಗೆಲುವು  title=
Photo Courtesy: Twitter

ನವದೆಹಲಿ: ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ ಏಳನೇ ಪಂದ್ಯದಲ್ಲಿ ದೆಹಲಿ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು ಮೂರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ದೆಹಲಿ ತಂಡವನ್ನು 20 ಓವರ್ ಗಳಲ್ಲಿ 147 ರನ್ ಗಳಿಗೆ ಕಟ್ಟಿ ಹಾಕಿತು.

ಇದನ್ನೂ ಓದಿ: Robin Uthappa: 'ನಿವೃತ್ತಿಯಾಗುವ ಮುನ್ನ ಧೋನಿ ನಾಯಕತ್ವದಲ್ಲಿ IPL‌ ಗೆಲ್ಲಬೇಕು'

ದೆಹಲಿ ಪರವಾಗಿ ರಿಷಬ್ ಪಂತ್ ಒಬ್ಬರೇ ಅರ್ಧಶತಕವನ್ನು ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಕೂಡ ಮೂವತ್ತರ ಗಡಿ ದಾಟಲಿಲ್ಲ. ನಂತರ 148 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್  ತಂಡವು ಒಂದು ಹಂತದಲ್ಲಿ 42 ರನ್ ಗಳಾಗುವಷ್ಟರಲ್ಲಿ  ಐದು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇದನ್ನೂ ಓದಿ: IPL 2021: ಇಂದಿನಿಂದ ಐಪಿಎಲ್ ಉತ್ಸವ, ಇಲ್ಲಿಯವರೆಗಿನ ಅತಿದೊಡ್ಡ ದಾಖಲೆಗಳಿವು

ಈ ಸಂದರ್ಭದಲ್ಲಿ ಡೇವಿಡ್ ಮಿಲ್ಲರ್ (62) ರಾಜಸ್ಥಾನದ ಪರವಾಗಿ ಭದ್ರವಾಗಿ ನೆಲೆಯೂರಿದರು.ಕೊನೆಯಲ್ಲಿ ಕ್ರಿಸ್ ಮಾರಿಸ್ (38) ಅವರ ವೇಗದ ಬ್ಯಾಟಿಂಗ್ ನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು ಏಳು ವಿಕೆಟ್ ನಷ್ಟಕ್ಕೆ 19.4 ಓವರ್ ಗಳಲ್ಲಿ 150 ರನ್ ಗಳ ಗೆಲುವಿನ ಗುರಿಯನ್ನು ತಲುಪಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News