IPL 2024 ರಲ್ಲಿ ಈ ತಂಡಕ್ಕಾಗಿ ಆಡಲಿದ್ದಾರೆ ರಚಿನ್ ರವೀಂದ್ರ.. ಹೊಸ ಇತಿಹಾಸ ಬರೆಯೋದು ಫಿಕ್ಸ್‌!!

Rachin Ravindra Joins RCB In IPL 2024 : ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ RCB ತಂಡದಲ್ಲಿ ಆಡುವುದನ್ನು ನೋಡಲು ಕ್ರಿಕೆಟ್‌ ಫ್ಯಾನ್ಸ್‌ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.  

Written by - Chetana Devarmani | Last Updated : Nov 11, 2023, 10:47 AM IST
  • ಆರ್‌ ಸಿಬಿ ತಂಡ ಸೇರುತ್ತಾರಾ ರಚಿನ್ ರವೀಂದ್ರ?
  • ಐಪಿಎಲ್‌ 2024 ರಲ್ಲಿ ರಚಿನ್ ರವೀಂದ್ರ
  • ರಚಿನ್ ರವೀಂದ್ರ ಐಪಿಎಲ್‌ ಆಡಲಿರುವ ತಂಡ
IPL 2024 ರಲ್ಲಿ ಈ ತಂಡಕ್ಕಾಗಿ ಆಡಲಿದ್ದಾರೆ ರಚಿನ್ ರವೀಂದ್ರ.. ಹೊಸ ಇತಿಹಾಸ ಬರೆಯೋದು ಫಿಕ್ಸ್‌!! title=
Rachin Ravindra

Rachin Ravindra Joins RCB In IPL 2024 : ವಿಶ್ವಕಪ್‌ ಬಳಿಕ ಕ್ರಿಕೆಟ್ ಅಭಿಮಾನಿಗಳ ಬಹುನೀರೀಕ್ಷಿತ ಐಪಿಎಲ್ 2024 ಆರಂಭವಾಗಲಿದೆ. ಐಪಿಎಲ್ ಅನ್ನು ವಿಶ್ವದ ಅತಿದೊಡ್ಡ ಕ್ರಿಕೆಟ್‌ ಲೀಗ್ ಎಂದು ಪರಿಗಣಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ ಎಲ್ಲಾ ಕ್ರಿಕೆಟಿಗರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಕ್ರಿಕೆಟಿಗನು ಈ ಲೀಗ್‌ನಲ್ಲಿ ಆಡುವ ಕನಸು ಕಾಣುತ್ತಾನೆ. ಐಪಿಎಲ್‌ ಅನೇಕ ಆಟಗಾರರ ಅದೃಷ್ಟವನ್ನೇ ಬದಲಿಸಿದೆ. 

ವಿಶ್ವಕಪ್ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅಲ್ಲದೇ ಈ ಬಾರಿ ಮೊಟ್ಟ ಮೊದಲ ಸಲ ಐಪಿಎಲ್‌ 2024 ಹರಾಜು ಪ್ರಕ್ರಿಯೆ ವಿದೇಶದಲ್ಲಿ ನಡೆಯುತ್ತಿದೆ.  ಐಪಿಎಲ್‌ 2024 ಹರಾಜು ಪ್ರಕ್ರಿಯೆ ಸನಿಹವಾಗುತ್ತಿರುವ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ದೊರೆತಿದೆ.

ಇದನ್ನೂ ಓದಿ : ಇವರೇ ಟೀಮ್‌ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ? 

ರಚಿನ್ ರವೀಂದ್ರ ವಿಶ್ವಕಪ್‌ನಲ್ಲಿ ತಮ್ಮ ಆಟದ ಮೂಲಕ ಕ್ರಿಕೆಟ್‌ ಅಭಿಮಾನಿಗಳ ಗಮನಸೆಳೆದಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ RCB ತಂಡದಲ್ಲಿ ಆಡುವುದನ್ನು ನೋಡಲು ಕ್ರಿಕೆಟ್‌ ಫ್ಯಾನ್ಸ್‌ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.  

ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರಚಿನ್ ರವೀಂದ್ರ ಆಡುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಐಪಿಎಲ್ ಹರಾಜಿನ ನಂತರವೇ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ. ಪ್ರಸ್ತುತ ರಚಿನ್ ರವೀಂದ್ರ ಅವರ ಟ್ವೀಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್‌ ಮೂಲಕ ತಾವು ಐಪಿಎಲ್ 2024 ರಲ್ಲಿ ಆರ್‌ಸಿಬಿ ಭಾಗವಾಗಲಿದ್ದಾರೆ ಎಂದು ರಚಿನ್ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.

 

 

ಆದರೆ, ರಚಿನ್ ರವೀಂದ್ರ ಅವರ ಈ ಟ್ವೀಟ್ ಅವರ ಅಧಿಕೃತ ಖಾತೆಯಿಂದಲೇ ಪೋಸ್ಟ್‌ ಆಗಿದ್ದಾ ಅಥವಾ ಬೇರೆ ಯಾರೋ ಈ ಟ್ವೀಟ್‌ ಮಾಡಿದ್ದಾರಾ ಎಂಬ ಅನುಮಾನವೂ ಕಾಡುತ್ತಿದೆ. ಆದರೆ ಈ ಟ್ವೀಟ್ ಅನ್ನು ನೋಡಿದ ನಂತರ RCB ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅದೊಂದು ವೇಳೆ ರಚಿನ್ ರವೀಂದ್ರ ಅವರು ಈ ಬಾರಿ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದರೆ, ಆರ್‌ಸಿಬಿ ತಂಡದ ಬಲ ಹೆಚ್ಚಲಿದೆ. ಹೀಗಾಗಿ ʻಈ ಸಲ ಕಪ್‌ ನಮ್ದೇʼ ಎನ್ನುತ್ತಿದ್ದಾರೆ ಆರ್‌ ಸಿಬಿ ಫ್ಯಾನ್ಸ್‌.  

ಇದನ್ನೂ ಓದಿ : IPL 2024 : CSK ಫ್ಯಾನ್ಸ್‌ ಗೆ ಬಿಗ್‌ ಶಾಕ್..‌ ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News