ಈ ಆಟಗಾರನಿಂದ ಭಾರತ ತಂಡಕ್ಕೆ ಹಿನ್ನಡೆಯಾಗಿದೆ ಎಂದ ಗಿಲ್ ಕ್ರಿಸ್ಟ್..!

ಅಡಿಲೇಡ್ ನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿರುವುದು ಈಗ ತಂಡವನ್ನು ಸಾಕಷ್ಟು ಚಿಂತೆಗೀಡು ಮಾಡಿದೆ.

Last Updated : Dec 20, 2020, 08:53 PM IST
ಈ ಆಟಗಾರನಿಂದ ಭಾರತ ತಂಡಕ್ಕೆ ಹಿನ್ನಡೆಯಾಗಿದೆ ಎಂದ ಗಿಲ್ ಕ್ರಿಸ್ಟ್..!  title=
Photo Courtesy: Twitter

ನವದೆಹಲಿ: ಅಡಿಲೇಡ್ ನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿರುವುದು ಈಗ ತಂಡವನ್ನು ಸಾಕಷ್ಟು ಚಿಂತೆಗೀಡು ಮಾಡಿದೆ.

'ಇಶಾಂತ್ ಶರ್ಮಾ ಫಿಟ್ ಆಗಿದ್ದರೆ ಅವರನ್ನು ಈಗ ಆಸ್ಟ್ರೇಲಿಯಾಕ್ಕೆ ಕಳುಹಿಸಿ'

ಅದರಲ್ಲೂ ಆರಂಭಿಕ ಆಟಗಾರ ಪೃಥ್ವಿ ಶಾ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿತ್ತು,ಆದರೆ ಅವರು ಎರಡು ಇನಿಂಗ್ಸ್ ನಲ್ಲಿ ಕ್ರಮವಾಗಿ 0 ಹಾಗೂ 4 ರನ್ ಗಳನನ್ನು ಮಾತ್ರ ಗಳಿಸಲು ಯಶಸ್ವಿಯಾಯಿತು.ಈ ಹಿನ್ನಲೆಯಲ್ಲಿ ಭಾರತ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಅದರಲ್ಲೂ ಭಾರತ ತಂಡವು ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಕಳಪೆ ಮೊತ್ತವನ್ನು ಕಳಿಸಿದ ಕುಖ್ಯಾತಿಗೆ ಪಾತ್ರವಾಯಿತು ಎರಡನೇ ಇನಿಂಗ್ಸ್ ನಲ್ಲಿ ಕೇವಲ 36 ರನ್ ಗಳಿಗೆ 9 ವಿಕೆಟ್ ಗಳನ್ನು ಕಳೆದುಕೊಂಡಿತು.

'ಭಾರತ ಕ್ರಿಕೆಟ್ ತಂಡವನ್ನು ರಕ್ಷಿಸಲು ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಕಳಿಸಿ'

ಆಸಿಸ್ ಪಿಚ್ ನಲ್ಲಿ ಭಾರತ ತಂಡದ ಬ್ಯಾಟ್ಸಮನ್ ಗಳು ಪರದಾಡುತ್ತಿರುವುದು ಈಗ ಸಾಕಷ್ಟು ಚಿಂತೆಗೀಡು ಮಾಡುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಈಗ ಭಾರತ ತಂಡದ ಈ ಹೀನಾಯ ಸೋಲಿನ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಆಸಿಸ್ ಆಟಗಾರ ಆಡಂ ಗಿಲ್ ಕ್ರಿಸ್ಟ್ 'ಎರಡೂ ಇನ್ನಿಂಗ್ಸ್‌ಗಳಲ್ಲಿ, ಪೃಥ್ವಿ ಶಾ ಅವರ ಆರಂಭಿಕ ವಿಕೆಟ್ ಕಳೆದುಕೊಂಡಿದ್ದು ತಂಡವನ್ನು ಹಿಂಬದಿಗೆ ತಳ್ಳಿತು.

ಪೃಥ್ವಿ ಶಾ ತಂಡದಿಂದ ಹೊರಗುಳಿದರೆ ಉತ್ತಮ ಎಂದ ಈ ಆಟಗಾರ...!

ಕಳೆದ ಭಾರತ ಸರಣಿಯ ಸಂದರ್ಭದಲ್ಲಿ ಶಾ ತಂಡದ ಭಾಗವಾಗಿದ್ದರು, ಮತ್ತು ಯುವಕನ ಸುತ್ತಲೂ ಸಾಕಷ್ಟು ಪ್ರಚೋದನೆಗಳು ಮತ್ತು ರಚನೆಗಳು ನಡೆದಿವೆ. ಇದರರ್ಥ ಅವರ ತಂತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ ಮತ್ತು ಅವರ ಬ್ಯಾಟ್ ಮತ್ತು ಪ್ಯಾಡ್ ನಡುವಿನ ಅಂತರವನ್ನು ಬಳಸಿಕೊಳ್ಳುವ ಸ್ಪಷ್ಟ ಯೋಜನೆ ಇತ್ತು, ಅದು ಯುವಕನಿಗೆ ಕಳವಳಕಾರಿ ಸಂಗತಿಯಾಗಿದೆ,' ಎಂದು ಅವರು ಹೇಳಿದ್ದಾರೆ.

Trending News