Dean elgar century vs ind : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರೆನೆ ದಿನ ಆರಂಭವಾಗಿದೆ. 245 ರನ್ ಗಳಿಗೆ ಭಾರತವನ್ನು ಆಲ್ ಔಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಂದು 256 ರನ್ ಕೆಲೆಹಾಕಿತ್ತು, ಈಗ ಮೂರನೆ ದಿನದಂದು ಬ್ಯಾಟಿಂಗ್ ಮುಂದುವರೆಸಿದ ದಕ್ಷಿಣ ಆಫ್ರಿಕಾ ಪರ ಡೀನ್ ಎಲ್ಗರ್ ಭರ್ಜರಿ ಶತಕ ಸಿಡಿಸಿ ಮಿಂಚಿದರು.
2ನೇ ದಿನದಂತ್ಯಕ್ಕೆ ಇವರು ಬರೊಬ್ಬರಿ 140 ರನ್‌ಗಳಿಸಿ ತಂಡವನ್ನು ಮುನ್ನಡೆಸಿದರು. ಅಷ್ಟೆ ಅಲ್ಲದೇ ಮೂರನೇ ದಿನವು ಭಾರತದ ಬೌಲರ್ಸ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಇವತ್ತಿನ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಮುಂದುವರೆಸಿ 185 ರನ್‌ಗಳನ್ನು ಭಾರಿಸಿದರು. ದ್ವಿಶತಕ ದ ಹೊಸ್ತಿಲಿನಲ್ಲಿರುವಾಗ ಕೀಪರ್ ಕೈಗೆ ಕ್ಯಾಚ್ ನೀಡಿ ತಮ್ಮ ಅಮೋಘ ಇನ್ನಿಂಗ್ಸ್ ಅನ್ನು ಸಮಪ್ತಿಗೊಳಿದರು.
ಇದನ್ನು ಓದಿ-ವಿರಾಟ್ ಕೊಹ್ಲಿ ಹೊಸ ಟ್ರಿಕ್ಸ್ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ! ಇದೇನಿದು ಬೇಲ್ಸ್ ಟ್ರಿಕ್ ?
95 ನೇ ಒವರ್ ಮಾಡಿದ ಭಾರತ ತಂಡದ ಆಪತ್ಭಾಂಧವ ಶಾರ್ದುಲ್ ಠಾಕೂರ್ ಡೀನ್ ಎಲ್ಗರ್‌ರವರ ಇನ್ನಿಂಗ್ಸ್ ಗೆ ಬ್ರೇಕ್ ಹಾಕಿದರು. ದಕ್ಷಿಣ ಆಫ್ರಿಕಾ ತಂಡವು 360 ರೆನ್‌ಗಳಿಸಿರುವಾಗ ಆರಂಭಿಕ ಆಟಗಾರರಾದ ಡೀನ್ ಎಲ್ಗರ್ ಅವರ ವಿಕೇಟ್ ಕಳೆದುಕೊಂಡಿತು.
ಶಾರ್ದುಲ್ ಠಾಕೂರ್ ಮಾಡಿದ ಒವರ್‌ನಲ್ಲಿ ಬಾಲ್‌ಅನ್ನು ಸರಿಯಾಗಿ ಗುರುತಿಸದ ಡೀನ್ ಎಲ್ಗರ್ ವಿಕೇಟ್ ಕೀಪರ್ ಕೆಎಲ್ ರಾಹುಲ್ ಅವರ ಕೈಗೆ ಕ್ಯಾಚ್ ನೀಡಿದರು. ಡೀನ್ ಎಲ್ಗರ್‌ರವರ ದ್ವಿಶತಕದ ಕನಸನ್ನು ಭಗ್ನಗೊಳಿಸಿದ ಶಾರ್ದುಲ್ ಈ ಮೂಲಕ ಭಾರತ ತಂಡಕ್ಕೆ ಮತ್ತೆ ಆಪತ್ಭಾಂಧವರಾದರು.
ಇದನ್ನು ಓದಿ-ಒಂದೇ ಇನ್ನಿಂಗ್ಸ್’ನಲ್ಲಿ ಇಬ್ಬರು ನಾಯಕರ ದಾಖಲೆ ಮುರಿದ ಕೊಹ್ಲಿ: ಈ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದ ವಿರಾಟ್
ಡೀನ್ ಎಲ್ಗರ್ ಎದುರಿಸಿದ 287 ಬಾಲ್‌ಗಳಲ್ಲಿ 28 ಬೌಂಡರಿಗಳನ್ನು ದಾಖಲಿಸಿವುದರ ಜೊತೆಗೆ 185 ರನ್‌ಗಳಿಸಿದರು. ಈ ಸರಣಿಯು ಅವರ ಟೆಸ್ಟ್ ಜೀವನದ ವಿದಾಯ ಪಂದ್ಯವಾಗಿದೆ ಮತ್ತು ಡೀನ್ ಎಲ್ಗರ್ ಟೆಸ್ಟ್ ನಲ್ಲಿ ಇಲ್ಲಿಯ ವೆರೆಗೆ 14 ಶತಕಗಳನ್ನು ಹೊಂದಿದ್ಧಾರೆ. ಅಷ್ಟೇವ ಅಲ್ಲದೇ ತವರಿನಲ್ಲಿ ಭಾರತದ ವಿರುದ್ದ ಬಾರಿಸಿದ ಮೊದಲ ಶತಕ ಇದಾಗಿದೆ.
ದಕ್ಷಿಣ ಆಫ್ರಿಕಾ ತಂಡವು 408 ರನ್ ಗಳಿಸಿ ಡಿಕ್ಲೇರ್ ನೀಡಿದೆ. 108 ಒವರ್‌ಗಳನ್ನು 9 ವಿಕೇಟ್ ಕಳೆದು ಕೊಂಡದ ಆಸ್ಟ್ರೇಲಿಯಾ 163 ರನ್‌ಗಳಿಂದ ಮುನ್ನಡೆ ಸಾಧಿಸಿದೆ. ಭಾರತವು ಬ್ಯಾಟಿಂಗ್‌ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ಧಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ