ಮುಂಬೈ: ಭಾರತದ ವಿಶ್ವಕಪ್ ಚಾಂಪಿಯನ್ ಶಿಖರ್ ಧವನ್ ಗಾಯಗೊಂಡು ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲೆಹೆ ನೀಡಿದ ಬೆನ್ನಲ್ಲೇ ದೆಹಲಿ ರಣಜಿ ಟ್ರೋಫಿ ತಂಡದ ಆಟಗಾರ ರಿಷಬ್ ಪಂತ್ ಲಂಡನ್ ಗೆ ತೆರಳಲಿದ್ದು, ಧವನ್ ಬದಲಾಗಿ ಟೀಮ್ ಇಂಡಿಯಾದಲ್ಲಿ ಆಡಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.
ಕ್ರಿಕೆಟ್ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವಾಗ ಶಿಖರ್ ಧವನ್ ಅವರ ಹೆಬ್ಬರಳಿಗೆ ಚೆಂಡು ಅಪ್ಪಳಿಸಿ, ಮೂಳೆ ಮುರಿದಿದೆ ಎಂದು ವೈದ್ಯರು ಮಂಗಳವಾರ ದೃಢೀಕರಿಸಿದ್ದು, ಮೂರು ವಾರಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಮೂರು ವಾರ ಕಳೆಯುವ ವೇಳೆಗೆ ವಿಶ್ವಕಪ್ ಕ್ರಿಕೆಟ್ ಮುಗಿದು ಹೋಗುವುದರಿಂದ ಭಾರತ ತಂಡದಲ್ಲಿ ಶಿಖರ್ ಬದಲಾಗಿ ರಿಷಬ್ ಪಂತ್ ಗೆ ವಿಶ್ವಕಪ್ ಪಂದ್ಯದಲ್ಲಿ ಸ್ಥಾನ ನೀಡಲು ಮಂಡಳಿ ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಪಂತ್ ಇಂಗ್ಲೆಂಡ್ ಗೆ ತೆರಳಿ ತಂಡವನ್ನು ಸೇರಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ವಿಶ್ವಕಪ್ ನಲ್ಲಿ ಶಿಖರ್ ಧವನ್ ಮೂರು ಶತಕ ಗಳಿಸಿದ ದಾಖಲೆ ಬರೆದಿದ್ದಾರೆ. ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ , ಸೌರವ್ ಗಂಗೂಲಿ ಬಳಿಕ ವಿಶ್ವಕಪ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ.