ಧೋನಿಯ ಜೀವಗೆ ಬೆದರಿಕೆ ಹಿನ್ನಲೆಯಲ್ಲಿ ಪೊಲೀಸರು ಅಲರ್ಟ್, ಮಹಿ ಮನೆ ಮುಂದೆ ಭದ್ರತೆ ಹೆಚ್ಚಳ

ಧೋನಿಯ ಸಿಮ್ಲಿಯಾದಲ್ಲಿನ ಫಾರ್ಮ್ ಹೌಸ್ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಂಚಿ ನಗರದ ಸಿಮ್ಲಿಯಾ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಅಲ್ಲದೆ ಧೋನಿಯ ಮನೆಯ ಹೊರಗೆ ಸ್ಥಿರ ಬಲವನ್ನು ಸಹ ನಿಯೋಜಿಸಲಾಗಿದೆ.

Last Updated : Oct 11, 2020, 05:00 PM IST
  • ಜೀವ ಧೋನಿಗೆ ಅತ್ಯಾಚಾರದ ಬೆದರಿಕೆ
  • ಸೋಶಿಯಲ್ ಮೀಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಯವರ 5 ವರ್ಷದ ಮಗಳು ಜೀವ ಧೋನಿಗೆ ಬೆದರಿಕೆ
  • ಈ ಹಿನ್ನಲೆಯಲ್ಲಿ ಧೋನಿಯ ಮನೆಯ ಸುತ್ತ ಭದ್ರತೆ ಹೆಚ್ಚಿಸಿರುವ ಪೊಲೀಸರು
ಧೋನಿಯ ಜೀವಗೆ ಬೆದರಿಕೆ ಹಿನ್ನಲೆಯಲ್ಲಿ ಪೊಲೀಸರು ಅಲರ್ಟ್, ಮಹಿ ಮನೆ ಮುಂದೆ ಭದ್ರತೆ ಹೆಚ್ಚಳ  title=
File Image

ರಾಂಚಿ: ಐಪಿಎಲ್ 2020 ರಲ್ಲಿ ಎಂಎಸ್ ಧೋನಿ (MS Dhoni) ಅವರ ವೈಫಲ್ಯದ ಬಗ್ಗೆ ಅಕ್ರೋಶವ್ಯಕ್ತಪಡಿಸಿರುವ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ (Mahendra Singh Dhoni)ಯವರ  5 ವರ್ಷದ ಮಗಳು ಜೀವ ಧೋನಿ (Ziva Dhoni) ಅವರೊಂದಿಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಲ್ಲದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧೋನಿ ಅವರ ಪತ್ನಿ ಸಾಕ್ಷಿ ರಾವತ್ ಅವರೊಂದಿಗೂ ಕೂಡ ಕೆಲವು ಸಮಾಜ ವಿರೋಧಿಗಳು ಅತ್ಯಂತ ಅಸಭ್ಯವಾಗಿ ಪ್ರತಿಕ್ರಿಯಿಸಿವೆ.

ಈ ಬೆದರಿಕೆಯ ನಂತರ ರಾಂಚಿ ಪೊಲೀಸರು ಎಚ್ಚೆತ್ತುಕೊಂಡಿದ್ದು ಧೋನಿಯ ಸಿಮಾಲಿಯಾ (ಸಿಮಾಲಿಯಾ) ನಲ್ಲಿನ ಫಾರ್ಮ್ ಹೌಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಮ್ಲಿಯಾ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಅಲ್ಲದೆ ಧೋನಿಯ ಮನೆಯ ಹೊರಗೆ ಸ್ಥಿರ ಬಲವನ್ನು ನಿಯೋಜಿಸುವುದರ ಜೊತೆಗೆ ಅವರ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ರೀತಿ ಅಸಹ್ಯಕರವಾದ ಹೇಳಿಕೆ ನೀಡಿರುವವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದು ಶೀಘ್ರದಲ್ಲೇ ಅಂತಹ ಕಾಮೆಂಟ್ ಮಾಡಿರುವ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಕಾನೂನಿನ ಕೈಗಳು ಉದ್ದವಾಗಿದ್ದು ಈ ರೀತಿ ಬೆದರಿಕೆ ಹಾಕಿರುವ ವ್ಯಕ್ತಿ ಶೀಘ್ರದಲ್ಲೇ ಜೈಲು ಕಂಬಿಗಳ ಹಿಂದೆ ಇರುತ್ತಾರೆ ಎಂದು ಗ್ರಾಮೀಣ ಎಸ್‌ಪಿ ನೌಶಾದ್ ಆಲಂ ಅವರು ಹೇಳಿದ್ದಾರೆ.

ಧೋನಿಯ ಮಗಳು ಝೀವಾರ ಅತ್ಯಂತ ಕ್ಯೂಟ್ ವಿಡಿಯೋ

ಇನ್ನು ಚಿಕ್ಕ ಮಗುವಿನ ಮೇಲೆ ಈ ರೀತಿ ಬೆದರಿಕೆ ಹಾಕಿರುವುದು ಸೋಶಿಯಲ್ ಮಿಡಿಯಾದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರು ಈ ಬಗ್ಗೆ ಕಿಡಿಕಾರಿದ್ದಾರೆ. ನಟಿ ಮತ್ತು ರಾಜಕಾರಣಿ ನಾಗ್ಮಾ ಅವರು 'ನಾವು ರಾಷ್ಟ್ರವಾಗಿ ಎಲ್ಲಿಗೆ ಹೋಗುತ್ತಿದ್ದೇವೆ? ಧೋನಿಯ ಐದು ವರ್ಷದ ಮಗಳು ಜೀವಾ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿರುವುದು ಎಷ್ಟು ವಿಚಿತ್ರ. ಪ್ರಧಾನಿಯವರೇ ನಮ್ಮ ದೇಶದಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ ಕರ್ನಾಟಕದ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸೌಮ್ಯ ರೆಡ್ಡಿ (Sowmya Reddy) ಯವರು ಈ ಬಗ್ಗೆ ಮಾತನಾಡಿದ್ದು ನಾವು ಎಲ್ಲಿಗೆ ಹೋಗುತ್ತಿದ್ದೇವೆ? ನಮ್ಮ ಸಮಾಜದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

IPL 2020: ವೈರಲ್ ಆಗುತ್ತಿದೆ MS Dhoni ಅವರ 'ಸೂಪರ್‌ಮ್ಯಾನ್ ಕ್ಯಾಚ್'- watch video

ರಾಜ್ಯಸಭಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಕೆಟ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
 

Trending News