Paris Olympics Hockey: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ!

India vs Great Britain Men's Hockey Quarterfinal: ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

Written by - Puttaraj K Alur | Last Updated : Aug 4, 2024, 04:13 PM IST
  • ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ​
  • ಪ್ಯಾರಿಸ್ ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್
  • ಭಾರತದ ಪರ ಮಿಂಚಿದ ಗೋಲ್​ ಕೀಪರ್​ ಪಿ.ಆರ್​.ಶ್ರೀಜೇಶ್
Paris Olympics Hockey: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ! title=
ಸೆಮಿಫೈನಲ್‌ ಪ್ರವೇಶಿಸಿದ ಭಾರತ!

India vs Great Britain Men's Hockey Quarterfinal: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದೆ. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆಯು ಬಲಿಷ್ಠ ಗ್ರೇಟ್​ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಅಮೋಘ ಗೆಲುವು ಸಾಧಿಸಿತು.   

4 ಕ್ವಾರ್ಟರ್​ ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶದ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಭಾರಿಸಿತು. ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಬ್ರಿಟನ್​ ತಂಡವನ್ನೇ ಮಣಿಸಿದ್ದ ಭಾರತ ಸೆಮಿಫೈನಲ್​ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಬ್ರಿಟನ್‌ ತಂಡಕ್ಕೆ ಮಣ್ಣುಮುಕ್ಕಿಸುವ ಮೂಲಕ ಭಾರತ ತಂಡವು ಸೆಮಿಸ್‌ಗೆ ಎಂಟ್ರಿ ಪಡೆದಿದೆ. 

ಇದನ್ನೂ ಓದಿ: ಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆ

ಅಮಿತ್ ರೋಹಿದಾಸ್‌ಗೆ ರೆಡ್​ ಕಾರ್ಡ್​!

ಬ್ರಿಟನ್‌ನ ಆಟಗಾರ ವಿಲ್ ಕಲ್ನಾನ್ ಮುಖಕ್ಕೆ ಹಾಕಿ ಸ್ಟಿಕ್​ ತಾಗಿಸಿದ ಪರಿಣಾಮ ಅಮಿತ್ ರೋಹಿದಾಸ್‌ಗೆ ಅಂಪೈರ್​ ರೆಡ್ ಕಾರ್ಡ್​ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಮೊದಲ ಕ್ವಾರ್ಟರ್​ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಹೀಗಾಗಿ ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಈ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸಲು ಹಲವು ಅವಕಾಶ ದೊರೆತರೂ ಸದುಪಯೋಗವಾಗಲಿಲ್ಲ. 

ತಡೆಗೋಡೆಯಂತೆ ನಿಂತ ಪಿ.ಆರ್​.ಶ್ರೀಜೇಶ್!​ 

ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. 3ನೇ ಕ್ವಾರ್ಟರ್​ ಮುಕ್ತಾಯಕ್ಕೆ 4 ನಿಮಿಷವಿರುವಾಗ​ ಬ್ರಿಟನ್​ಗೆ ಪೆನಾಲ್ಟಿ ಕಾರ್ನರ್​​ ಅವಕಾಶ ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಗೋಲ್​ ಕೀಪರ್​ ಪಿ.ಆರ್​.ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವಾರು ಗೋಲುಗಳನ್ನು ತಡೆದ ಪರಿಣಾಮ ಫಲಿತಾಂಶ ಭಾರತದ ಪರವಾಗಲು ಸಾಧ್ಯವಾಯಿತು. ಪೆನಾಲ್ಟಿ ಶೂಟೌಟ್​ನಲ್ಲಿಯೂ ಸಹ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್

3ನೇ ಕ್ವಾರ್ಟರ್​ನಲ್ಲಿಯೂ ಉಭಯ ತಂಡಗಳ ರಕ್ಷಣಾತ್ಮಕ ಆಟದಿಂದ ಗೋಲು ದಾಖಲಾಗಲಿಲ್ಲ. ೪ನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಪಂದ್ಯ ಟೈ ಆಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News