ನವದೆಹಲಿ: ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ಅಮಿತ್ ಶಾ ನಿವಾಸಕ್ಕೆ ತೆರಳಿ ಪಾಂಡ್ಯ ಬ್ರದರ್ಸ್ ಮಾರುಕತೆ ನಡೆಸಿದ್ದಾರೆ.
ಭಾರತ ತಂಡದ ಪೂರ್ಣಪ್ರಮಾಣದ ಟಿ-20 ನಾಯಕನಾಗಿ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಮಿತ್ ಶಾರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಗೃಹಸಚಿವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಗೌರವ, ಸಂತೋಷ ನೀಡಿದೆ’ ಎಂದು ಹಾರ್ದಿಕ್ ಪಾಂಡ್ಯ ಕ್ಯಾಪ್ಶನ್ ನಿಡಿದ್ದಾರೆ.
ಇದನ್ನೂ ಓದಿ: Team India : ರಿಷಬ್ ಪಂತ್ ಬದಲಿಗೆ ಈ ಆಟಗಾರನೆ ಟೆಸ್ಟ್ ಪಂದ್ಯದ ವಿಕೆಟ್ ಕೀಪರ್!
Thank you for inviting us to spend invaluable time with you Honourable Home Minister Shri @AmitShah Ji. It was an honour and privilege to meet you. 😊 pic.twitter.com/KbDwF1gY5k
— hardik pandya (@hardikpandya7) December 31, 2022
ಜನವರಿ 3ರಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ನಾಯಕನಾಗಿ ನೇಮಕಗೊಂಡಿರುವ ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಪಾಂಡ್ಯ ಜೊತೆಗೆ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯ ಉದ್ದೇಶವೇನು ಅನ್ನೋದನ್ನು ಅವರು ಬಹಿರಂಗಪಡಿಸಿಲ್ಲ.
ಅಮಿತ್ ಶಾ ಕಳೆದ 2 ದಿನಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ತಂತ್ರಗಾರಿಕೆ ರೂಪಿಸುವ ಹಿನ್ನೆಲೆ ಪಕ್ಷದ ಮುಖಂಡರ ಜೊತೆಗೆ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದು, ಶನಿವಾರ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಈ ಮಧ್ಯೆ ಪಾಂಡ್ಯ ಬ್ರದರ್ಸ್ ಅಮಿತ್ ಶಾರ ಜೊತೆಗಿರುವ ಫೋಟೋ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
Kgf 3 pic.twitter.com/BKjOx1zZWw
— hardik pandya (@hardikpandya7) December 29, 2022
ಇದನ್ನೂ ಓದಿ: Rishabh Pant Accident : ಬಸ್ ಚಾಲಕ - ಕಂಡಕ್ಟರ್ ರಿಷಬ್ ಪಂತ್ ಪ್ರಾಣ ಉಳಿಸಿದ್ದು ಹೀಗೆ..!
ಪಾಂಡ್ಯ ಬ್ರದರ್ಸ್ ಜೊತೆಗೆ ಆತ್ಮೀಯವಾಗಿ ಮಾತನಾಡಿರುವ ಅಮತ್ ಶಾ ಕುಶಲೋಪರಿ ವಿಚಾರಿಸಿದ್ದಾರೆ. ಈ ಫೋಟೋಗನ್ನು ಕೆಲವು ದಿನಗಳ ಹಿಂದೆಯೇ ತೆಗೆದಿದ್ದು, ಈಗ ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಾಂಡ್ಯ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದರು. ಪ್ರವಾಸಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟಿ-20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3ರಿಂದ ಟಿ-20 ಸರಣಿ ಆರಂಭಗೊಳ್ಳಲಿದ್ದು, ಜ.10ರಿಂದ ಏಕದಿನ ಸರಣಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.