Controversial Comment: ಹಾರ್ದಿಕ್ ಪಾಂಡ್ಯ ಬಗ್ಗೆ ವಿವಾದಾತ್ಮಕ ಕಮೆಂಟ್ ಮಾಡಿದ ಪಾಕ್ ಆಟಗಾರ: ಆತನ ಸ್ಥಿತಿ ಏನಾಗಿದೆ ಗೊತ್ತಾ?

Abdul Razak Comment About Hardik Pandya: ಪಾಕಿಸ್ತಾನದ ಮಾಜಿ ಆಲ್‌ ರೌಂಡರ್ ಅಬ್ದುಲ್ ರಜಾಕ್ ಮೇಲೆ ಅನೇಕ ವಿವಾದಗಳಿವೆ. ಆತ ಇತರ ಆಟಗಾರರು ಮತ್ತು ತಂಡಗಳ ಮೇಲೆ ಕಟುವಾದ ಕಾಮೆಂಟ್‌ಗಳನ್ನು ಮಾಡುತ್ತಾ ಯಾವಾಗಲು ಚರ್ಚೆಯಲ್ಲಿರುತ್ತಾನೆ. 43ರ ಹರೆಯದ ಈ ಮಾಜಿ ಕ್ರಿಕೆಟಿಗ 2013ರಲ್ಲಿ ಪಾಕಿಸ್ತಾನ ಪರ ಕೊನೆಯ ಪಂದ್ಯ ಆಡಿದ್ದನು. ಇದೀಗ ಹಾರ್ದಿಕ್ ಪಾಂಡ್ಯ ಬಗ್ಗೆ ಕಾಮೆಂಟ್ ಮಾಡಿದ್ದು, ವಿವಾದ ಸೃಷ್ಟಿಸಿದೆ.

Written by - Bhavishya Shetty | Last Updated : Mar 28, 2023, 04:35 PM IST
    • ಪಾಕಿಸ್ತಾನದ ಮಾಜಿ ಆಲ್‌ ರೌಂಡರ್ ಅಬ್ದುಲ್ ರಜಾಕ್ ಮೇಲೆ ಅನೇಕ ವಿವಾದಗಳಿವೆ.
    • 43ರ ಹರೆಯದ ಈ ಮಾಜಿ ಕ್ರಿಕೆಟಿಗ 2013ರಲ್ಲಿ ಪಾಕಿಸ್ತಾನ ಪರ ಕೊನೆಯ ಪಂದ್ಯ ಆಡಿದ್ದನು.
    • ಇದೀಗ ಹಾರ್ದಿಕ್ ಪಾಂಡ್ಯ ಬಗ್ಗೆ ಕಾಮೆಂಟ್ ಮಾಡಿದ್ದು, ವಿವಾದ ಸೃಷ್ಟಿಸಿದೆ.
Controversial Comment: ಹಾರ್ದಿಕ್ ಪಾಂಡ್ಯ ಬಗ್ಗೆ ವಿವಾದಾತ್ಮಕ ಕಮೆಂಟ್ ಮಾಡಿದ ಪಾಕ್ ಆಟಗಾರ: ಆತನ ಸ್ಥಿತಿ ಏನಾಗಿದೆ ಗೊತ್ತಾ? title=
Hardik Pandya

Abdul Razak Comment About Hardik Pandya: ಪಾಕಿಸ್ತಾನದ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಬಗ್ಗೆ ಕಾಮೆಂಟ್ ಮಾಡುವುದನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಕೆಲವೊಮ್ಮೆ ಆ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿ, ಬಳಿಕ ಅದಕ್ಕೆ ಸ್ಪಷ್ಟೀಕರಣ ಎನ್ನುವ ನಾಮಕಾವಸ್ತೆ ಲೇಪನವನ್ನು ಮಾಡುವುದುಂಟು. ಇದೀಗ ಪಾಕಿಸ್ತಾನದ ಮಾಜಿ ಆಲ್‌ ರೌಂಡರ್‌ ಕೂಡ ಅಂತಹದ್ದೇ ಕೃತ್ಯ ಎಸಗಿದ್ದಾನೆ. ಭಾರತದ ಸ್ಟಾರ್ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಕಾಮೆಂಟ್ ಮಾಡಿದ್ದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: RCB : ಆರ್​​ಸಿಬಿ ಟೀಂಗೆ ದಿಢೀರ್ ಎಂಟ್ರಿ ನೀಡಿದ ಈ ಅಪಾಯಕಾರಿ ಆಲ್ ರೌಂಡರ್!

ಪಾಕಿಸ್ತಾನದ ಮಾಜಿ ಆಲ್‌ ರೌಂಡರ್ ಅಬ್ದುಲ್ ರಜಾಕ್ ಮೇಲೆ ಅನೇಕ ವಿವಾದಗಳಿವೆ. ಆತ ಇತರ ಆಟಗಾರರು ಮತ್ತು ತಂಡಗಳ ಮೇಲೆ ಕಟುವಾದ ಕಾಮೆಂಟ್‌ಗಳನ್ನು ಮಾಡುತ್ತಾ ಯಾವಾಗಲು ಚರ್ಚೆಯಲ್ಲಿರುತ್ತಾನೆ. 43ರ ಹರೆಯದ ಈ ಮಾಜಿ ಕ್ರಿಕೆಟಿಗ 2013ರಲ್ಲಿ ಪಾಕಿಸ್ತಾನ ಪರ ಕೊನೆಯ ಪಂದ್ಯ ಆಡಿದ್ದನು. ಇದೀಗ ಹಾರ್ದಿಕ್ ಪಾಂಡ್ಯ ಬಗ್ಗೆ ಕಾಮೆಂಟ್ ಮಾಡಿದ್ದು, ವಿವಾದ ಸೃಷ್ಟಿಸಿದೆ.

‘ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಲೆಜೆಂಡರಿ ಕಪಿಲ್ ದೇವ್ ಬಳಿ ಮುಂದೆ ನಿಲ್ಲುವುದಿಲ್ಲ” ಎಂದು ಆತ ಹೇಳಿದ್ದು, ಇದರ ಅರ್ಥ ಏನೆಂದು ಆತನೇ ವಿವರಣೆ ನೀಡಬೇಕಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಮಾತನಾಡಿದ ರಜಾಕ್ “ಹಾರ್ದಿಕ್ ಪಾಂಡ್ಯ ಕುರಿತು ನನ್ನ ಹಿಂದಿನ ಹೇಳಿಕೆಯನ್ನು ತಪ್ಪಾಗಿ ತೆಗೆದುಕೊಳ್ಳಲಾಗಿದೆ. ನಾನು ಹಾಗೆ ಹೇಳಲಿಲ್ಲ. ಒಬ್ಬ ಕ್ರಿಕೆಟಿಗನಾಗಿ ನಾನು ಹೇಳಿದ್ದು ಅವನಲ್ಲಿ (ಪಾಂಡ್ಯ) ಸುಧಾರಣೆಗೆ ಅವಕಾಶವಿದೆ ಎಂದು. ನಾನು ಒಬ್ಬ ಕ್ರಿಕೆಟಿಗನಾಗಿ ವಿಷಯಗಳನ್ನು ಹೇಳಿದ್ದೇನೆ. ಒಂದು ವೇಳೆ ಕಪಿಲ್ ದೇವ್ ನನಗೆ ಸಲಹೆ ನೀಡಲು ಬಂದರೆ ಅದನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಹಾರ್ದಿಕ್  ಕೆಲವೊಂದು ವಿಷಯಗಳ ಬಗ್ಗೆ ಗಮನಹರಿಸಬೇಕು. ಅವುಗಳೆಂದರೆ ಪೇಸ್, ಸ್ಪೀಡ್ ಮತ್ತು ಬೌಲಿಂಗ್ ಮಾಡುವ ಮೊದಲು ಯಾವ ರೀತಿ ಬಾಲ್ ನೋಡಿಕೊಳ್ಳಬೇಕು ಎಂಬುದಾಗಿದೆ. ಆದರೆ ನನ್ನ ಹೇಳಿಕೆಯನ್ನು ಜನರು ತಪ್ಪಾಗಿ ತೆಗೆದುಕೊಂಡು ನನ್ನನ್ನು ಟೀಕಿಸಿದ್ದಾರೆ” ಎಂದು ಹೇಳಿದ್ದಾರೆ.

ಬುಮ್ರಾ ಬಗ್ಗೆಯೂ ವಿವಾದಾತ್ಮಕ ಕಾಮೆಂಟ್!

ರಜಾಕ್ ಈ ಹಿಂದೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದನು. ಭಾರತದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರ ಹತ್ತಿರವೂ ಇಲ್ಲ ಎಂದು ಹೇಳಿಕೆ ನೀಡಿದ್ದ. ಅಷ್ಟೇ ಅಲ್ಲ ಆ ಬಳಿಕ ಮತ್ತೊಮ್ಮೆ ರಝಾಕ್ paktv.tv ಗೆ, 'ಶಾಹೀನ್ ತುಂಬಾ ಒಳ್ಳೆಯವನು, ಬುಮ್ರಾ ಅವರ ಸರಿಸಮಾನ ಕೂಡ ಇರುವುದಿಲ್ಲ' ಎಂದು ಹೇಳಿಕೆ ನೀಡಿದ್ದ. ಈ ಬಗ್ಗೆ ಸಾಕಷ್ಟು ವಿವಾದಗಳು ನಡೆದಿದ್ದವು.

ಇದನ್ನೂ ಓದಿ: BCCI : ಟೀಂ ಇಂಡಿಯಾ ಈ 7 ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ

ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡುವುದಾದರೆ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-2023) ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಮುನ್ನಡೆಸಲು ಸಿದ್ಧರಾಗಿದ್ದಾರೆ. ಶುಕ್ರವಾರ ನಡೆಯಲಿರುವ ಋತುವಿನ ಮೊದಲ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಜಿಟಿ ವಿರುದ್ಧ ಸಿಎಸ್‌ಕೆ) ವಿರುದ್ಧ ಅಭಿಯಾನ ಆರಂಭಿಸಲಿದೆ. ಗುಜರಾತ್ ಕಳೆದ ವರ್ಷ ತನ್ನ ಮೊದಲ ಋತುವಿನಲ್ಲಿ ಚಾಂಪಿಯನ್ ಆಗಿ ಸಿಕ್ಕಾಪಟ್ಟೆ ಹೆಗ್ಗಳಿಕೆಯನ್ನು ಪಡೆದಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News