Blast in Quetta, Babar Azam-Shahid Afridi Rescued : ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಇಂದು ಬಾಂಬ್ ಸ್ಫೋಟವು ಸಂಚಲನವನ್ನು ಸೃಷ್ಟಿಸಿದೆ. ಈ ಭಯೋತ್ಪಾದಕ ದಾಳಿಯ ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡದ ಹಾಲಿ ನಾಯಕ ಬಾಬರ್ ಅಜಮ್ ಮತ್ತು ಅನುಭವಿ ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಅಗ್ರ ಕ್ರಿಕೆಟಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ (PSL-2023) ನ ಪ್ರದರ್ಶನ ಪಂದ್ಯವನ್ನು ಆಡಲು ಕ್ವೆಟ್ಟಾ ಸ್ಟೇಡಿಯಂನಲ್ಲಿ ಸೇರಿಕೊಂಡಿದ್ದರು.
ಅಜಂ ಮತ್ತು ಅಫ್ರಿದಿ ಸುರಕ್ಷಿತ
ಕ್ವೆಟ್ಟಾದ ನವಾಬ್ ಅಕ್ಬರ್ ಬುಗ್ತಿ ಸ್ಟೇಡಿಯಂನಿಂದ ಕೆಲವು ಮೈಲುಗಳಷ್ಟು ದೂರದಲ್ಲಿ ಇಂದು ಭಯೋತ್ಪಾದಕ ದಾಳಿ ನಡೆದಿದೆ. ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನದ ಅನುಭವಿ ಆಟಗಾರ ಶಾಹಿದ್ ಅಫ್ರಿದಿ ಮತ್ತು ಹಾಲಿ ನಾಯಕ ಬಾಬರ್ ಅಜಮ್ ಅವರನ್ನು ಭದ್ರತೆಗಾಗಿ ಡ್ರೆಸ್ಸಿಂಗ್ ರೂಂಗೆ ಕರೆದೊಯ್ಯಲಾಯಿತು. ಈ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ನ (ಪಿಎಸ್ಎಲ್) ಪ್ರದರ್ಶನ ಪಂದ್ಯವನ್ನು ಆಡುತ್ತಿದ್ದರು, ಸ್ಫೋಟದ ನಂತರ ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಈ ಸ್ಫೋಟವು ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : Rahul Dravid : ಈ ಪ್ಲಾನ್ ಮೂಲಕ ಭಾರತ ಮೊದಲ ಟೆಸ್ಟ್ ಪಂದ್ಯ ಗೆಲ್ಲಲಿದೆ : ಕೋಚ್ ರಾಹುಲ್
ದಾಳಿಯ ಹೊಣೆ ವಹಿಸಿಕೊಂಡಿದ ತೆಹ್ರೀಕ್-ಎ-ತಾಲಿಬಾನ್
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಹೇಳಿಕೆಯ ಮೂಲಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಭದ್ರತಾ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತಿಳಿಸಿದೆ.
ಪಿಎಸ್ಎಲ್ ತಂಡ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪ್ರದರ್ಶನ ಪಂದ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯೋಜಿಸಿತ್ತು. ಪೊಲೀಸ್ ಅಧಿಕಾರಿ, 'ಸ್ಫೋಟ ಸಂಭವಿಸಿದ ತಕ್ಷಣ, ಮುನ್ನೆಚ್ಚರಿಕೆಯಾಗಿ ಪಂದ್ಯವನ್ನು ನಿಲ್ಲಿಸಿ, ಆಟಗಾರರನ್ನು ಸ್ವಲ್ಪ ಸಮಯ ಡ್ರೆಸ್ಸಿಂಗ್ ರೂಮ್ ನಲ್ಲಿ ಕುಡಿ ಹಾಕಿದ್ದರು. ಬಳಿಕ ಪಂದ್ಯವನ್ನು ಪುನಃ ಪ್ರಾರಂಭಿಸಿದರು. ಪಂದ್ಯ ವೀಕ್ಷಿಸಲು ಮೈದಾನ ಜನಗಳಿಂದ ತುಂಬಿ ತುಳುಕುತ್ತಿತ್ತು.
ಸ್ಫೋಟದ ನಂತರ ಹೊಗೆಯಿಂದ ತುಂಬಿದ ಆಕಾಶ
ಬಲೂಚಿಸ್ತಾನ್ ಪೋಸ್ಟ್ ಸ್ಫೋಟದ ಬಗ್ಗೆ ವೀಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸ್ಫೋಟದ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಆಕಾಶ ಹೊಗೆಯಿಂದ ತುಂಬಿದೆ.
ಇದನ್ನೂ ಓದಿ : MS Dhoni : ಧೋನಿ ಜೊತೆಗಿನ ಫೋಟೋ ಶೇರ್ ಮಾಡಿದ ಗೇಲ್ : ಸಖತ್ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.