6 ಎಸೆತಕ್ಕೆ 6 ವಿಕೆಟ್ ಕಬಳಿಸಿದ್ದ 42ರ ಹರೆಯದ ದಿಗ್ಗಜ ಆಲ್’ರೌಂಡರ್ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಣೆ!

PAK Ex-captain Mohammad Hafeez: ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ತಾಂತ್ರಿಕ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

Written by - Bhavishya Shetty | Last Updated : Sep 23, 2023, 07:29 AM IST
    • ಮೊಹಮ್ಮದ್ ಹಫೀಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತಾಂತ್ರಿಕ ಸಮಿತಿಗೆ ರಾಜೀನಾಮೆ ನೀಡಿದ್ದಾರೆ
    • ಈ 2 ದಿನಗಳ ಅಧಿವೇಶನದಲ್ಲಿ ಪಾಕಿಸ್ತಾನ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ
    • ಕೇವಲ 2 ಓವರ್’ಗಳಲ್ಲಿ 6 ವಿಕೆಟ್ ಕಬಳಿಸಿದ್ದ ಮೊಹಮ್ಮದ್ ಹಫೀಜ್
6 ಎಸೆತಕ್ಕೆ 6 ವಿಕೆಟ್ ಕಬಳಿಸಿದ್ದ 42ರ ಹರೆಯದ ದಿಗ್ಗಜ ಆಲ್’ರೌಂಡರ್ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಣೆ!  title=
Mohammad Hafeez

PAK Ex-captain Mohammad Hafeez: ಕ್ರಿಕೆಟ್ ಮಹಾಕುಂಭ ಅಂದರೆ ಏಕದಿನ ವಿಶ್ವಕಪ್ ಮುಂದಿನ ತಿಂಗಳು ನಡೆಯಲಿದೆ. ಈ ಬಾರಿ ಭಾರತ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿದ್ದು, ಈ ಜಾಗತಿಕ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು, ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು, (IND vs AUS) ಇದರಲ್ಲಿ ಮೊದಲ ಪಂದ್ಯವನ್ನು 5 ವಿಕೆಟ್‌’ಗಳಿಂದ ಭಾರತ ಗೆದ್ದಿದೆ.

ಇದನ್ನೂ ಓದಿ: 2025ರವರೆಗೆ ಈ ರಾಶಿಯವರಿಗೆ ಸೋಲೇ ಇಲ್ಲ! ಮುಟ್ಟಿದ್ದೆಲ್ಲಾ ಚಿನ್ನ, ಹಣದ ಸುರಿಮಳೆ, ವೃತ್ತಿಯಲ್ಲಿ ಯಶಸ್ಸನ್ನೇ ನೀಡಿ ಸದಾ ಕಾಯುವನು ಶನಿದೇವ

ಆದರೆ ಇವೆಲ್ಲದರ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌’ಗೆ ಸಂಬಂಧಿಸಿದ ಪ್ರಮುಖ ಸುದ್ದಿ ಹೊರಬಿದ್ದಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ತಾಂತ್ರಿಕ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಏಷ್ಯಾಕಪ್ (2023) ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ಬಗ್ಗೆ ಕರೆಯಲಾದ ಪರಿಶೀಲನಾ ಸಭೆಯ ನಂತರ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ 2 ದಿನಗಳ ಅಧಿವೇಶನದಲ್ಲಿ ಪಾಕಿಸ್ತಾನ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಗಾಯಗೊಂಡಿರುವ ವೇಗಿ ನಸೀಮ್ ಶಾ ಮತ್ತು ಆಲ್ ರೌಂಡರ್ ಫಹೀಮ್ ಅಶ್ರಫ್ ಬದಲಿಗೆ ವೇಗದ ಬೌಲರ್ ಜಮಾನ್ ಖಾನ್ ಮತ್ತು ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 15 ಸದಸ್ಯರ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ.

'ನನಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳು'

ಹಫೀಜ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದ್ದು, “ನಾನು ಪಾಕಿಸ್ತಾನ ಕ್ರಿಕೆಟ್‌ ತಾಂತ್ರಿಕ ಸಮಿತಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನಗೆ ಈ ಅವಕಾಶ ನೀಡಿದ ಝಾಕಾ ಅಶ್ರಫ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಪಾಕಿಸ್ತಾನ ಕ್ರಿಕೆಟ್‌’ಗೆ ಸಂಬಂಧಿಸಿದಂತೆ ಝಕಾ ಅಶ್ರಫ್‌’ಗೆ ನನ್ನ ಸೇವೆ ಅಗತ್ಯವಿದ್ದಾಗ, ನಾನು ಲಭ್ಯವಿರುತ್ತೇನೆ. ಎಂದಿನಂತೆ ಪಾಕಿಸ್ತಾನ ಕ್ರಿಕೆಟ್‌’ಗೆ ನನ್ನ ಶುಭಾಶಯಗಳು” ಎಂದಿದ್ದಾರೆ.

ಏಷ್ಯಾಕಪ್‌’ನಲ್ಲಿ ಶ್ರೀಲಂಕಾ ಮತ್ತು ಭಾರತದ ವಿರುದ್ಧ ಸೋಲುಂಡಿದ್ದ ಪಾಕಿಸ್ತಾನ ತಂಡವನ್ನು ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಝಾಕಾ ಅಶ್ರಫ್ ಪರಿಶೀಲನಾ ಸಭೆಯನ್ನು ಕರೆದಿದ್ದರು. ಹಫೀಜ್ ಹೊರತಾಗಿ, ನಾಯಕ ಬಾಬರ್ ಅಜಮ್, ಮುಖ್ಯ ಕೋಚ್ ಗ್ರಾಂಟ್ ಬ್ರಾಡ್‌ಬರ್ನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಾಸಿರ್, ಅಂತಾರಾಷ್ಟ್ರೀಯ ಕ್ರಿಕೆಟ್‌’ನ ಪಿಸಿಬಿ ಮುಖ್ಯಸ್ಥ ಉಸ್ಮಾನ್ ವಹಾಲಾ ಮತ್ತು ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಮತ್ತು ತಂಡದ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್, ಉಪನಾಯಕ ಶಾದಾಬ್ ಖಾನ್ ಸಹ ಸಭೆಯಲ್ಲಿ ಉಪಸ್ಥಿತರಿದ್ದರು. ಆದರೆ, ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಇದರಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: ಈ ರಾಶಿಗೆ ಶನಿಯ ಕೃಪಾದೃಷ್ಟಿಯಿಂದ ದುಪ್ಪಟ್ಟು ಆದಾಯ! ವ್ಯವಹಾರದಲ್ಲಿ ಅದೃಷ್ಟ ಬೆಳಗುವಳು ಲಕ್ಷ್ಮೀ

ಇನ್ನು ಜುಲೈ 20ರಂದು ಜಿಂಬಾಬ್ವೆಯಲ್ಲಿ ನಡೆದ ಆಫ್ರೋ T10 ಲೀಗ್’ನಲ್ಲಿ ಕೇವಲ 2 ಓವರ್ ಗಳಲ್ಲಿ 6 ವಿಕೆಟ್ ಕಬಳಿಸಿದ್ದರು ಮೊಹಮ್ಮದ್ ಹಫೀಜ್. ಟಿ10 ಕ್ರಿಕೆಟ್‌’ನಲ್ಲಿ ಇದೇ ಮೊದಲ ಬಾರಿಗೆ ಇಂಥಾ ಸಾಧನೆ ಮಾಡಲಾಗಿತ್ತು. ಈ ಆಟಗಾರ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದಿದ್ದರು. ಆದರೆ ಇದೀಗ ತಾಂತ್ರಿಕ ಸಮಿತಿಯಿಂದಲೂ ರಾಜೀನಾಮೆ ಘೋಷಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News