Cricket World Cup 2023: ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ!

Cricket World Cup 2023: ಭಾರತವು ಈ ವರ್ಷ 50 ಓವರ್‌ಗಳ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ನೀಡಿದೆ.

Written by - Puttaraj K Alur | Last Updated : May 11, 2023, 07:26 PM IST
  • ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಬಹುದೊಡ್ಡ ಆಘಾತ
  • ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕುವ ಮೂಲಕ ಪಾಕಿಸ್ತಾನದ ಅದ್ಭುತ ಸಾಧನೆ
  • ಏಕದಿನ ರ್ಯಾಂಕಿಂಗ್‍ನಲ್ಲಿ ಮತ್ತೆ ನಂ.1 ಪಟ್ಟವನ್ನು ಮರಳಿ ಪಡೆದುಕೊಂಡ ಆಸ್ಟ್ರೇಲಿಯಾ
Cricket World Cup 2023: ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ! title=
ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ!

ನವದೆಹಲಿ: ಈ ವರ್ಷ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದೆ. ಈ ನಡುವೆ ಗುರುವಾರ ಭಾರತಕ್ಕೆ ಬಿಗ್ ಶಾಕ್ ಆಗಿದೆ. ತನ್ನ ದೊಡ್ಡ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ಪಾಕಿಸ್ತಾನ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕುವ ಮೂಲಕ ಅದ್ಭುತ ಸಾಧನೆ ಮಾಡಿದೆ.

ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ!

2019-20ರ ಋತುವಿನ ಫಲಿತಾಂಶ ಹೊರತುಪಡಿಸಿ ICC ಪುರುಷರ ಏಕದಿನ ತಂಡದ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಪಾಕಿಸ್ತಾನ 2ನೇ ಸ್ಥಾನದಲ್ಲಿದ್ದು, ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ನಲ್ಲಿ ಅದ್ಭುತ ಪ್ರದರ್ಶನ ನೀಡಲು ಈ 3 ತಂಡಗಳು ಸಜ್ಜಾಗಿವೆ. ಆಸ್ಟ್ರೇಲಿಯಾ 118 ಅಂಕಗಳೊಂದಿಗೆ ಪಾಕಿಸ್ತಾನಕ್ಕಿಂತ 2 ಹೆಚ್ಚಿನ ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಈ ಶ್ರೇಯಾಂಕಕ್ಕೆ ಮೇ 2022ರ ಹಿಂದಿನ ಪಂದ್ಯಗಳನ್ನು ಶೇ.50ರಷ್ಟು ಮತ್ತು ನಂತರದ ಪಂದ್ಯಗಳನ್ನು ಶೇ.100ರಷ್ಟುನ್ನು ಪರಿಗಣಿಸಲಾಗಿದೆ. 

ಇದನ್ನೂ ಓದಿ: IPL 2023: ಕೊಹ್ಲಿಯನ್ನ ಮತ್ತೆ ಕೆಣಕಿದ್ರಾ ನವೀನ್? ವಿರಾಟ್ ಔಟ್ ಆಗುತ್ತಿದ್ದಂತೆ ಹೇಗೆ ಸೆಲೆಬ್ರೇಟ್ ಮಾಡಿದ್ರು ಗೊತ್ತಾ…

ಆಸ್ಟ್ರೇಲಿಯಾ ಹಿಂದೆ ಸರಿದ ಪಾಕ್!

ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಸ್ವದೇಶಿ ಸರಣಿಯ ಅಂತಿಮ ಪಂದ್ಯದಲ್ಲಿ ಸೋಲುವ ಮೊದಲು ಮೇ 5ರಂದು ನಂ.1 ಸ್ಥಾನ ಹೊಂದಿದ್ದ ಪಾಕಿಸ್ತಾನ ಇದೀಗ ಆಸ್ಟ್ರೇಲಿಯಾಕ್ಕಿಂತ ಹಿಂದೆ ಸರಿದಿದೆ. ಪಾಕ್ 116 ಅಂಕಗಳನ್ನು ಹೊಂದಿದೆ, ಅದರಂತೆ ಟೀಂ ಇಂಡಿಯಾ 115 ಅಂಕ ಗಳಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಪಾಕಿಸ್ತಾನ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರೆ, ವಾರ್ಷಿಕ ನವೀಕರಣದ ನಂತರವೂ ಅದು ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಯುತ್ತಿತ್ತು.

ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ!

ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಭಾರತ ಕೇವಲ 3 ಪಾಯಿಂಟ್‌ಗಳ ಅಂತರದಿಂದ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ತೀವ್ರ ಪೈಪೋಟಿ ನಡೆಸುತ್ತಿವೆ. 4 ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಅಂತಿಮ ಪಂದ್ಯ ಆಡಿದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎರಡೂ ವಾರ್ಷಿಕ ನವೀಕರಣದಲ್ಲಿ ಅನನುಕೂಲತೆ ಹೊಂದಿವೆ. ನ್ಯೂಜಿಲೆಂಡ್ 104 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 10 ಅಂಕ ಕಳೆದುಕೊಂಡು 101 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಕ್ರಮವಾಗಿ 6 ಮತ್ತು 7ನೇ ಸ್ಥಾನ ಉಳಿಸಿಕೊಂಡಿದ್ದು, ಅಫ್ಘಾನಿಸ್ತಾನವು ಮಾಜಿ ವಿಶ್ವ ಚಾಂಪಿಯನ್ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಅನ್ನು ಹಿಂದಿಕ್ಕಿ 8ನೇ ಸ್ಥಾನ ಪಡೆದುಕೊಂಡಿದೆ. ಟಾಪ್-8 ತಂಡಗಳು ಈ ಬಾರಿಯ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ.

ಇದನ್ನೂ ಓದಿ: IND vs PAK: 5 ಬಾರಿ ಇಂಡೋ-ಪಾಕ್ ಜಿದ್ದಾಜಿದ್ದಿ: ಐತಿಹಾಸಿಕ ಪಂದ್ಯಕ್ಕೆ ಅದೇ ಮೈದಾನ ಬೇಕೆಂದು ಹಠ ಹಿಡಿದ ಟೀಂ ಇಂಡಿಯಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News